ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತುಂತುರು ಮಳೆಯಲಿ
ಮಿಂಚಂತೆ ಬಂದವಳು,
ಸಿಡಿಲಿಗಪ್ಪುಗೆಯು
ತೊಯ್ದರೂ ಮೈ ಬಿಸಿಯು.

ಕಿರಣದಿ ತುಂತುರು
ಮೂಡಿ ಕಾಮನಬಿಲ್ಲು,
ಉಲ್ಲಾಸದ ನೋಟವು
ಪ್ರೇಯಸಿಯ ಕಣ್ಣಲ್ಲು.

ಮೋಡಗಳ ಯುದ್ಧದಿ
ಖಡ್- ಖಡಾ ಸಿಡಿಲು
ಪ್ರೇಯಸಿಯ ಅಪ್ಪನ
ಧ್ವನಿಯಂದು ದಿಗಿಲು.

ಎಷ್ಟು ಮಳೆ ಆದರೂ
ಹದವಾಯ್ತು ಭುವಿಗೆ,
ಕೂರಿಗೆಯ ತಯಾರಿ
ಬೀಜ ಬಿಡಲು ಇಳೆಗೆ.

ಕೆರೆಯ ಒಡಲಲ್ಲಿ
ಹೊಸಮನೆ ಕಟ್ಟಿದೆ
ಮಳೆರಾಯ ತಾ ಬಂದ
ಈ ಜಾಗ ತನದೆಂದ.

ದೊಡ್ಡ ಕೆರೆಯ ಮುಚ್ಚಿ
ಬಡಾವಣೆ ಕಟ್ಟಿಸೆ,
ತನ್ನ ಜಾಗ ಮೇಘನು
ಆಕ್ರಮಿಸಿ ಬಿಟ್ಟನು.


About The Author

1 thought on “ವ್ಯಾಸ ಜೋಶಿ ಅವರ ತನಗಗಳು”

Leave a Reply

You cannot copy content of this page

Scroll to Top