ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನಿನ್ ಮುಚ್ಚಿದ ಮುಟುಕಿಯೊಳಗಣದ
ಲೋಕವ ತೆರೆದು ತೋರಿದೆ -ಅಂದವ
ನೋಡಿ-ಕಂಗಳು ನಿಬ್ಬೆರಗಾಗಿ ನಿಂದವು
ಬಂಗಾರ ಬಾಳಿನ ಸಿಂಗಾರ ಕಂಡೆ…. ಅಜ್ಜಿ!!

ಎಳೆಯ ಹಸುಳೆ ನಾ ನಿನ್ನ ಒಡಲಲಿ
ಆಡುತ ನಿನ್ನ ಎದೆಗೆ ತಲೆಯ ಒಡ್ಡಿ
ಮಲಗಿ ನೀ ಹೇಳಿದ ಗಥಕಾಲದ
ವಿಸ್ಮಯಗಳ ಕಥೆಗಳ ಆಲಿಸುತ…..

ನಿನ್ನ ಮುಟ್ಟಗಿ ಒಳಗಿನ ಒಂದೊಂದು
ತುತ್ತು ತಿನಿಸುತ್ತಾ ಬಿತ್ತಿ ಅನುಭವದ
ಬುತ್ತಿ ಬಿಚ್ಚಿಟ್ಟೆ-ಎನ್ನದೆಯೊಳ ಭಾವದ
ಅಪಾರ ಸಂತೃಪ್ತಿ ತೃಪ್ತಿಯ ತಾಣವಾದೆ…

ಏನು ಅರಿಯದ ಎಳೆಯ ಮುಗ್ಧಧ್ಯೆ
ಮನಸ್ಸಿಗೆ ನೀನಾದೆ ಅಜ್ಜಿ..ಜ್ಞಾನ-ದುಗ್ಧ
ನಿನ್ನ ಆಸರೆಯಲಿ ನಡೆಯಲು -ಸತ್ಪಥದಿ
ಸಲೀಸಾಗಿ ನಲಿದು ಬೆಳೆದು ನಿಂದೆ….

“ಮುಚ್ಚಿದ ಮುಟ್ಟಿಗೆ ಒಂದು ಲಕ್ಷದ್ದು”
ನಾನ್ನುಡಿ ಹೇಳುತ್ತ ತಿಳಿಸುತ ಬಂದಿದ್ದೆ
ಆಲಿಸುತ ಬೆಳೆದು ನಿಂತ ಬಾಲೆ ನಾನು
ಕಿಂಕರರಲಿ ಕಿಂಕರಳಾಗಲು ಬಾಳ ಕಲಿಸಿದೆ…

ನಿನ್ನ ಮುಟ್ಟಗಿಯ ಒಳಗಣ ಅಡಗಿದ
ಅಗಾಧ ಅಪಾರ ಪಾಠಗಳು ಅರಗಿಸುತ
ಹೊರಹೊಮ್ಮಿದ ಚಿನ್ಮಯ ಜೀವನದ
ತಿರುಳು ಅರಿತು ವಿಹರಿಸಿದೆ …ಅಜ್ಜಿ

ನಿನ್ನ ಪವಿತ್ರ ಭಾವ ಪರಮಾನುಭಾವವು
ಅರುಹಿದ ಅರುವಿನೊಳಗೆ ಮೈದಳಿದು
ರೂಪಗೊಂಡ ಶಕ್ತಿಯ- ಯುಕ್ತಿಯು
ಈಗ ಅರ್ಥೈಸುತಿದೆ ಮನವು …

ಎಂದು ನನ್ ಉಸಿರಲಿ ಉಸಿರಾಗಿ ನೆಲೆ ನಿಂತೆ ಅರಿಯೇ……!!
ನಿನ್ನ ಮುಟಗಿಯ ಸ್ಮರಣೆ ದಿವ್ಯ ಕಿರಣ ಜೀವಕ!!


About The Author

2 thoughts on ““ಅಜ್ಜಿ ಮುಟಗಿಯ ಪ್ರೀತಿ” ಸವಿತಾ ದೇಶಮುಖ ಕವಿತೆ.”

Leave a Reply

You cannot copy content of this page

Scroll to Top