ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ತುಂತುರಲಿ ಮಿಂದ ತನುವಿನಂಗಳದಿ ಬಿರಿದ ಬಯಕೆಗಳು
ಬಿರುಸಾಗಿ ಬಿಸಿಗಾಗಿ
ನಿನ್ನ ಮೈ ನೆರೆಯ ಬಯಸಿ ಹಾತೊರೆದಿವೆ

ಸೆರಗಂಚಿನ ಸಲ್ಲಾಪಕೆ ಸಲುಗೆಯ ಸಹಕಾರ ಬೇಡಿ
ತೋಯ್ದ ಮೈಯನು ಮೃದುವಾಗಿ ಮುದ್ದಿಸಲು
ಮದವೇರಿದಂತಾಗಿವೆ

ಬಿಗಿದೆದೆಯ ಮೆದುವ ಮೋಹಿಸುತ
ಮುತ್ತಿನ ಮತ್ತು ಮಣಿಗಳ ಪೋಣಿಸಿ
ನೆನೆದೆದೆಯ ಬಿಗಿದೊತ್ತಿ ಉಸಿರಿಗುಸಿರ ಹದವಾಗಿ ಹಂಚಿಕೊಳ್ಳಲು ಹೊಂಚುತಿವೆ

ಬಿಸಿಯೇರಿದ ನಡುಕುಸಿರಲಿ
ನಡು ನಡುಗಿದಂತೆ
ಕಂಪಿಸುವ ಆ ತೆಳೋದರಕೆ
ಅರಿವಿಗರಿವಿರದಂತೆ
ಸೋಕಿದ ಕೈ ಅಂಟಿಕೊಂಡಿದೆ
ಹೊಸದೇನೋ ತನುವಿಗುಡಿಸಿ
ಋಣಪಡೆದ ಸಂತೃಪ್ತಿಯಲಿ
ತಾದಾತ್ಮ್ಯ ಭಾವ ತಳೆದಿದೆ ನಿನ್ನಲಿ

————–

About The Author

4 thoughts on “ಹೇಮಚಂದ್ರ ದಾಳಗೌಡನಹಳ್ಳಿ ಕವಿತೆ-ತಾದಾತ್ಮ್ಯ”

  1. ಉಸಿರಿಗುಸಿರ ಹದವಾಗಿ ಹಂಚಿಕೊಳ್ಳಲು ಸಂಚು ರೂಪಿಸದೆ,ಹೊಂಚು ಹಾಕಿ,ಮೈಮನಗಳೆರಡರಲ್ಲೂ ಮಿಂಚು ಸಂಚರಿಸಲು,ತೃಪ್ತಭಾವ ತಾಳಲು ಕಾರಣೀಭೂತವಾದ ಆ ಕರಗಳಿಗೆ,ಭಾವಬುತ್ತಿಯನ್ನು ಅಕ್ಷರಗಳಲ್ಲಿ ಪೋಣಿಸಿದ ನಿಮ್ಮ ಕರಗಳಿಗೆ ಧನ್ಯವಾದಗಳು ಮತ್ತು ಅಭಿನಂದನೆಗಳು.

Leave a Reply

You cannot copy content of this page

Scroll to Top