ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಈ ದಿನ ಕಳೆದು ಹೋಗಿದೆ
ಹುಡುಕಿ ಕೊಡುವಿರಾ…?
ಯಾರಾದರೂ…..

ಈ ದಿನ ಗಳಿಸಿದ್ದು ಇಲ್ಲ
ಉಳಿಸಿದ್ದು ಇಲ್ಲ,
ಸಾಧಿಸಿದ್ದು ಇಲ್ಲ, ಆದರೂ
ಈ ದಿನ ಕಳೆದು ಹೋಗಿದೆ ||

ಕೆಲವರ ನಗುವಿನಲ್ಲಿ
ಹಲವರ ಅಳುವಿನಲ್ಲಿ
ಮತ್ತಲವರ ನರಳಾಟದಲ್ಲಿ
ಈ ದಿನ ಕಳೆದು ಹೋಗಿದೆ ||

ಮುಚ್ಚಿಟ್ಟರೂ..ಬಚ್ಚಿಟ್ಟರೂ
ಈ ದಿನ ಕಳೆದು ಹೋಗಿದೆ
ಕೂಡಿಟ್ಟ ಹೊನ್ನೆಷ್ಟೋ….?
ಹಂಚಿ ತಿಂದ ಅನ್ನವೆಷ್ಟೋ..?
ಆದರೂ ಈ ದಿನ ಕಳೆದು ಹೋಗಿದೆ ||

ಎಳೆಯಗೆಳೆಯರೆಲ್ಲರ ಆಟ
ಮಾಗಿ ಮುಗಿಯುವ ಮುನ್ನವೇ
ಈ ದಿನ ಕಳೆದು ಹೋಗಿದೆ ||

ಮಬ್ಬು ಹರಿಯುವ ಮುನ್ನ
ಆನು-ತಾನು ಅನ್ನುವುದರಲ್ಲೆ
ಈ ದಿನ ಕಳೆದು ಹೋಗಿದೆ ||

ಭವದ ಬವಣೆಯನು
ಕಳಚುವ ಮುನ್ನ
ಈ ದಿನ ಕಳೆದು ಹೋಗಿದೆ ||

ರಕ್ಕಸರ ನೆತ್ತರು ಭುವಿಯ ಗರ್ಭದಲಿ
ಹರಿಯುವ ಮೊದಲೇ.. ಈ
ದಿನ ಕಳೆದು ಹೋಗಿದೆ ||


About The Author

1 thought on “ವಸಂತ್ ಹುಳ್ಳೇರ ಅವರ ಕವಿತೆ-ಈ ದಿನ”

  1. ಆ ನಮ್ಮ ಸ್ನೇಹದ ದಿನಗಳು ಕಳೆದು ಹೋಗಿವೆ ಹುಡುಕಿಕೊಡಿವಿರ.

Leave a Reply

You cannot copy content of this page

Scroll to Top