ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 

ಕನ್ನಡ ಗಜಲ್ ಬರಹಗಾರರ ಬಹುದಿನದ‌ ಬೇಡಿಕೆ ಇಂದು ಈಡೇರಿಸಿದ ಸಂತಸ.ಪ್ರಥಮವಾಗಿ ಕನ್ನಡದಲ್ಲಿ ಗಜಲ್ ಕೃತಿ ಪ್ರಕಟಿಸಿದ ಹಿರಿಯ ಗಜಲ್ ಲೇಖಕಿ ಎಚ್.ಎಸ್. ಮುಕ್ತಾಯಕ್ಕ ರಾಯಚೂರು ಅವರಿಂದ ಎರಡು ಲಕ್ಷ ರೂಪಾಯಿ ದೇಣಿಗೆ ಪಡೆದು ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ *ನಾಡೋಜ ಶಾಂತರಸ ಗಜಲ್ ಕಾವ್ಯ ಪ್ರಶಸ್ತಿ ಸ್ಥಾಪಿಸಲಾಗಿದೆ.

ಇಂದು ರಾಯಚೂರಿನಲ್ಲಿ ಆಕಾಡೆಮಿ‌ ಸಹಯೋಗದಲ್ಲಿ ನಡೆದ ಶಾಂತರಸರ ಜನ್ಮ ಶತಮಾನೋತ್ಸವದ ಕಾರ್ಯಕ್ರಮದ‌ ದಿನ ನಾನು ಗಜಲ್ ಲೇಖಕಿ ಎಚ್.ಎಸ್.ಮುಕ್ತಾಯಕ್ಕರ ಮನೆಗೆ ಹೋಗಿ ಅವರು ತಮ್ಮ ತಂದೆಯ ಮೇಲಿನ ಅಪಾರ ಪ್ರೀತಿ ಅಭಿಮಾನದ‌ ಮೂಲಕ ಅವರ ಹೆಸರುಳಿಸಲು ನ್ಯಾಯವಾದಿ ಆಗಿರುವ ಅವರ ಮಗ ಶ್ರೀ ಸಿದ್ಧಾರ್ಥ ರವರ ಜೊತೆಗೂಡಿ ಎರಡು ಲಕ್ಷ ರೂಪಾಯಿ ಚೆಕ್ ನನಗೆ ನೀಡಿದರು.ಅವರು ಕೊಟ್ಟ ಚೆಕ್ ಪಡೆದು, ಪ್ರೀತಿಯಿಂದ ಅವರು ಕೊಟ್ಟ ಊಟ ಸಹ ಮಾಡಿ ಬಂದು ಇಂದು ವೇದಿಕೆಯಲ್ಲಿ ನಮ್ಮ ಅಧ್ಯಕ್ಷರಾದ ಶ್ರೀ ಎಲ್.ಎನ್
ಮುಕುಂದರಾಜ್ ರವರು ಹಾಗೂ ರಿಜಿಸ್ಟ್ರಾರ್ ರವರಾದ  ಶ್ರೀ  ಕರಿಯಪ್ಪ ನವರಿಗೆ ವೇದಿಕೆಯ ಗಣ್ಯರ ಸಮ್ಮುಖದಲ್ಲಿ ಚೆಕ್ ಹಸ್ತಾಂತರ ಮಾಡಿ ಪ್ರಶಸ್ತಿ ಸ್ಥಾಪಿಸಲಾಗಿದೆ.ಇದು ನನ್ನ ಅಳಿಲು‌ ಸೇವೆ. ಅಕಾಡೆಮಿ ಸದಸ್ಯನಾಗಿ ಸಾರ್ಥಕ ಭಾವ. ಇದಕೆ ಸಹಕರಿಸಿದ ಆತ್ಮೀಯರಿಗೆ ನಮ್ಮ ಅಕಾಡೆಮಿಯ ಅಧ್ಯಕ್ಷರಿಗೂ, ರಿಜಿಸ್ಟ್ರಾರ್ ಅವರಿಗೂ ಹಾಗೂ ಎಲ್ಲಾ ನಮ್ಮ ಅಕಾಡೆಮಿ ಸದಸ್ಯರಿಗೂ ಸಹ ಧನ್ಯವಾದಗಳು.

ಇನ್ನು ಮುಂದೆ ಪ್ರತಿವರ್ಷ ಗಜಲ್ ಕಾವ್ಯ ಕೃತಿಗೆ ನಾಡೋಜ ಶಾಂತರಸರ ಹೆಸರಿನಲ್ಲಿ ದತ್ತಿ ಪುರಸ್ಕಾರ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡಲಿದೆ ಎಂಬುದು ನಾಡಿನ  ಎಲ್ಲಾ ಗಜಲ್ ಪ್ರಿಯರಿಗೆ ಗಜಲ್ ಲೇಖಕ ಲೇಖಕಿಯರಿಗೆ ಅಪಾರ ಸಂತಸ ತರಲಿದೆ.


About The Author

1 thought on “ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ ‘ನಾಡೋಜ ಶಾಂತರಸ ಗಜಲ್ ಕಾವ್ಯ ಪ್ರಶಸ್ತಿ’ ಸ್ಥಾಪನೆ ‘ಹಿರಿಯ ಗಜಲ್ ಲೇಖಕಿ ಎಚ್.ಎಸ್. ಮುಕ್ತಾಯಕ್ಕ ರಾಯಚೂರು’ ಅವರಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯಲ್ಲಿ”

Leave a Reply

You cannot copy content of this page

Scroll to Top