ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಭರವಸೆಯ ಭರವಸೆಯಲಿ
ಅದರ ಬಾಹು ಬಂಧನದಲಿ
ಹುಟ್ಟಿದೊಂದ ಮಹದಾಸೆಯು
ಚಿಗುರಿ ಮತ್ತೆ ಎತ್ತರಕ್ಕೆ ಬೆಳೆಯಲು….

ಭರವಸೆಯ ಆಶಯದಲ್ಲಿ
ಉದಯಿಸಿದ ಜೀವನದಲಿ
ಹುಟ್ಟು ಬಾಳಿನ ನಲುವಿನಲಿ
ಪೂರ್ಣತೆಯ ನಿಲುವನಕೆ ಸಾಗಲು..,.

ಸಾಗುತಿಹುದು ಪ್ರತಿ ಹೆಜ್ಜೆಯು
ತಾಳಮೇಳಗಳ ದಾಟಿಯು
ಅಜ್ಞಾನ ಅಳಿಸುವ ಪಥವು
ತೋರಿದೊಂದು ಸೌಖ್ಯದ ದಾರಿಯು…

ಭರವಸೆಯ ಎದೆಯ ಆಳದಿಂದ
ಹೊರಹೊಮ್ಮುವ ಶಬ್ದಗಳಲಿ
ಅದುಮಿಟ್ಟ ಭಾವಗಳು ಚಿಮ್ಮಿ
ತಲುಪಿ ಕವಿ ಹೃದಯಗಳಿಗೆ …

ಜೀವನವೇ ಭರವಸೆ
ಭರವಸೆಯಲಿ ಜೀವನವೆಂದು ……


About The Author

1 thought on “ಸವಿತಾ ದೇಶಮುಖ್ ಅವರ ಕವಿತೆ-ಭರವಸೆ”

Leave a Reply

You cannot copy content of this page

Scroll to Top