ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪಡೆಯಬೇಕಾಗಿದೆ
ಸ್ವಾತಂತ್ರ್ಯ
ಭಾರತೀಯ ಬ್ರಿಟಿಷರಿಂದ
ಸಮಾನತೆಯ ತಳಹದಿಯ ಮೇಲೆ
ಸಮ ಸಮಾಜ ನಿರ್ಮಿಸಲು

ಖಾಸಗಿ ಕಂಪೆನಿಗಳ
ಕಪಿ ಮುಷ್ಠಿಯಿಂದ ಬಿಡುಗಡೆಗೊಂಡ
ಸಂಸ್ಥೆಯಿಂದ ಸರ್ವರಿಗೂ
ಕಡ್ಡಾಯ, ಉಚಿತ ಮತ್ತು ಉನ್ನತ ಶಿಕ್ಷಣ
ಪಡೆಯಲು

ಹಾಳಾದ ಹದಗೆಟ್ಟ
ಅನಾರೋಗ್ಯಕ್ಕೆ ತುತ್ತಾದ
ದೇಹಕ್ಕೆ ವೈದ್ಯಕೀಯ ಸೌಲಭ್ಯ ಪಡೆಯಲು
ಧನದಾಹಿಗಳ ಬೇರು ಸಮೇತ ಕಿತ್ತೊಗೆದು
ಎಲ್ಲರಿಗೂ ಉಚಿತ ಮತ್ತು ಕೈಗೆಟಕುವ ಬೆಲೆಯಲ್ಲಿ
ವೈದ್ಯಕೀಯ ಸೇವೆ ಪಡೆಯಲು

ಇಲ್ಲದ ಕಾನೂನು
ಬಡವರ ಬೆನ್ನುಗಳ ಮೇಲೆ ಹೇರಿ
ಅಮಾನುಷ ಕೃತ್ಯ ಎಸಗುವ
ಅಧಿಕಾರದ ಆಮಲೇರಿರುವ
ನಾಗರಿಕ ಅಧಿಕಾರಿಗಳಿಂದ

ಭ್ರಷ್ಟ ವ್ಯವಸ್ಥೆಯ ಬುನಾದಿಯ ಮೇಲೆ
ಅನಾದಿಕಾಲದಿಂದಲೂ ಕೋಟಿ ಕೋಟಿ
ಲೂಟಿ ಹೊಡೆದ ಸಂಗ್ರಹಿಸಿದ ಬಂಡವಾಳ ಶಾಹಿಗಳ
ಬಂಡವಾಳ ಬುಡಮೇಲು ಮಾಡಲು

ವಿನಾಕಾರಣ ಕಾಲಹರಣ ಮಾಡಿ
ಜಾತಿ ಜಾತಿಗಳ ಮಧ್ಯೆ ದ್ವೇಷ ಬಿತ್ತಿ
ಪ್ರಜೆಗಳ ಮೇಲೆ ಪೌರುಷ ತೋರಿಸಿ
ಹಣಗಳಿಸುವ ಹೊಣೆಗೇಡಿ ಕುಟುಂಬ ರಾಜಕಾರಣಿಗಳ
ಒಳ ಮರ್ಮ ಬೆತ್ತಲು ಮಾಡಲು


About The Author

Leave a Reply

You cannot copy content of this page

Scroll to Top