ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪುಟ್ಟ ಪುಟ್ಟ ಎಲೆಗಳ ಚಿಗುರಿನಲಿ
ಹಸಿರು ಬನದ ಸಿರಿ ಸೌರಭದಲಿ
ಉಲಿವ ಮಧುರ ಸ್ವರ ನಾದದಲಿ
ಕೋಗಿಲೆ ಮಾಮರ ಚಿರ ಸ್ನೇಹದಲಿ

ಸ್ನೇಹ ವಿಶ್ವಾಸಗಳ ಬೆರಗಿನ ಅ೦ಟು
ದೇಹವೆರಡು ಜೀವವೊಂದಾದ ನ೦ಟು
ಸ್ನೇಹ ಸುಧೆ ಮೆಲ್ಲುವ ತುಂಟಾಟವು೦ಟು
ನೂರೆಳೆಯ ಗ೦ಟು ಹೇಳದ ಗುಟ್ಟುಂಟು

ಕರ್ಣ-ಸುಯೋಧನರ ಸಖ್ಯದ ವಿಶೇಷ
ಸ್ನೇಹ ಪರಾಕಾಷ್ಠತೆ ಮೆರೆದ ಸನ್ನಿವೇಶ
ಕೃಷ್ಣ – ಕುಚೇಲರ ಸ್ನೇಹ ನಿಷ್ಕಲ್ಮಶ
ಬಂಧ ಸಾರುವುದು ಉತ್ತಮ ಸಂದೇಶ….!!


About The Author

1 thought on “ಕಾವ್ಯ ಸುಧೆ. ( ರೇಖಾ )ಅವರ ಕವಿತೆ-ಸ್ನೇಹಸುಧೆ”

  1. ವಾವ್ ಸುಂದರ ಸಾಲುಗಳು ಸ್ನೇಹದ ಸಂಬಂಧ ಕವನ
    Sripad Algudkar ✍️

Leave a Reply

You cannot copy content of this page

Scroll to Top