ಕಾವ್ಯಸಂಗಾತಿ
ಲಲಿತಾ ಪ್ರಭು ಅಂಗಡಿ-
ಬಾಪೂನೇನು ಮರೆತಿಲ್ಲ.


ಬಾಪೂನೇನು ಮರೆತಿಲ್ಲ
ಸತ್ಯ ಅಹಿಂಸೆಯ ಮಂತ್ರ ಮರೆತೆವೆಲ್ಲ
ರಾಮರಾಜ್ಯದ ಕನಸ ಕಂಡ
ಈಶ್ವರ ಅಲ್ಲಾ ತೇರೆನಾಮೆಂದ ಪಕೀರನ
ಬಳಸಿ ಜಾತಿ ಕೋಮುವಾದಕೆ
ಕಚ್ಚಾಡ್ತಿವಲ್ಲ ಬಾಪೂನೇನು ಮರೆತಿಲ್ಲ
ಸಣಕಲು ದೇಹದ ತ್ಯಾಗಿಯ ಪೋಟೋ
ಕೋರ್ಟಕಛೇರಿಗಳಲಿ ಹಾಕಿ
ಸುಳ್ಳಿನ ವ್ಯಾಪಾರ ಮಾಡ್ತಿವಲ್ಲ
ಬಾಪೂನೇನು ಮರೆತಿಲ್ಲ
ಸ್ವರಾಜ್ಯ ಕನಸ ಕಂಡು ಚರಕದಿ ನೂಲು
ನೇಯ್ದ ವಿದೇಶಿಯರಿಗೆ ಪಾಠ ಕಲಿಸಿದ
ಬಾಪೂನ ಹೆಸರಲಿ ವಿದೇಶಿ ವಸ್ತುಗಳಿಗೆ
ಮಾರುಹೋಗ್ತಿವಲ್ಲ ಬಾಪೂನೇನು ಮರೆತಿಲ್ಲ
ಸರ್ಕಲ್ ಬೀದಿ ನೋಟು ಓಟುಗಳಿಗೆ
ಪುಸ್ತಕ ಪಬ್ಲಿಕ್ ಪಾರ್ಕಿಲಿ ಬಾಪೂನ
ಪೋಟೋ ಹಾಕಿ ಹತ್ಯಾಚಾರ ನಡಿತಿದೆಯಲ್ಲ ಬಾಪೂನೇನು ಮರೆತಿಲ್ಲ
ವರುಷಕೊಮ್ಮೆ ನೆನಸಿ ನೆನಸಿ
ಪೂಜೆ ಮಾಡಿ ಹೂ ಹಾರ ಹಾಕಿ
ಬಾಪೂ ಕಂಡ ಆದರ್ಶದ ನುಡಿಗಳ
ಭಾಷಣಗಳ ಸುರಿಮಳೆ ನಡೆಸ್ತಾರಲ್ಲ
ಆಶ್ವಾಸನೆ ಕೊಟ್ವು ಬಳಸಿಕೊಳ್ತಾರಲ್ಲ
ಬಾಪೂನೇನು ಮರೆತಿಲ್ಲ.
ಲಲಿತಾ ಪ್ರಭು ಅಂಗಡಿ





Very good satya
Thank you so much