ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಸುಕುಮಾರ ಅವರ

ಗಜಲ್

ನವಿರಾದ ಮನಸಿನ್ನಿಂದ ಸವಿಯಾದ ಮಾತು ಹೊರಳಲಿ ಎಲ್ಲರ ಹಿತಕೆ
ಹಗುರಾದ ಮನವು ಸ್ನೇಹದ ಸೇತು ನಿರ್ಮಿಸಲಿ ಎಲ್ಲರ ಹಿತಕೆ

ನಿರ್ವಿಕಾರ ಆಗದಿರಲಿ ಬದುಕು ಮಮಕಾರದ ಆಗರವಾಗಲಿ ಎಂದು ಎಂದೆಂದಿಗು
ಸಹಕಾರ ಸಮನ್ವಯ ಸಾಧನೆಯ ಸಿರಿಯು ಭರಿಸಲಿ ಎಲ್ಲರ ಹಿತಕೆ

ಜಯಕೆ ಅಪಜಯದ ನೆರಳು ಕಾಡಲು ಬಿಡದಿರಿ ಜೊತೆಗಿರಲಿ ಆತ್ಮವಿಶ್ವಾಸ
ಅಜೇಯರಾಗಿ ಉಳಿದು ಅಜಾತಶತ್ರುವಿನ ಧ್ಯೇಯ ಉಳಿಯಲಿ ಎಲ್ಲರ ಹಿತಕೆ

ಜೀವನ ಜಟಕಾಬಂಡಿ ನೀವೇ ಹಾಗಿರಿ ಅದರ ಸಾಹೇಬ ಕೊನೆತನಕ
ಪಾವನ ಬಾಳ್ವೆಗೆ ಬಿತ್ತಿದ ಬೀಜ ಅಂಕುರಿಸಲಿ ಎಲ್ಲರ ಹಿತಕೆ

ಮಾತಿನಲೇ ಮಿತ್ರತ್ವ ನುಡಿಯಲ್ಲೇ ಅಡಗಿದೆ ಶತ್ರುತ್ವ ಮತಿಗೆ ಸಾಣೆಯಿಡಿಯಬೇಕು
ಮೌನಿಯಾಗು ಕುಮಾರ ಗೌಣ ನಭವೂ ಉಲಿಯಲಿ ಎಲ್ಲರ ಹಿತಕೆ


ಸುಕುಮಾರ

About The Author

1 thought on “ಸುಕುಮಾರ ಅವರ-ಗಜಲ್”

Leave a Reply

You cannot copy content of this page

Scroll to Top