ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ದೇವರಾಜ M ಭೋಗಾಪುರ..

ಮಹಾತ್ಮ

ಆತ ಎಂತಹ ಮಹಾತ್ಮನೆಂದರೆ
ಆತನ ಶಾಂತಿಗೆ ಬ್ರಿಟಿಷರ ಬಂದೂಕು-
ಲಾಠಿಗಳು ಮೇಲೇಳದೆ ಮಲಗುತ್ತಿದ್ದವು.

ಆತನ ಒಂದು ಕರೆಗೆ ಹಿಂದುಗಳು-
ಮುಸಲ್ಮಾನರು ಒಂದಾಗುತ್ತಿದ್ದರು..

ಆತನಿದ್ದಲ್ಲಿ ಕ್ರಾಂತಿಕಾರಿಗಳೂ
ಸಿಡಿಯದೇ ಶಾಂತವಾಗುತ್ತಿದ್ದರು.

ಆತನು ಸುಳಿದಾಡಿದಲ್ಲೆಲ್ಲಾ
ಸುಳ್ಳಿಗೆ ಸ್ಥಳವೇ ಇರುತ್ತಿರಲಿಲ್ಲ.

ಆತನ ಚರಕ ಬ್ರಿಟಿಷರನ್ನು
ತಿರುಕರನ್ನಾಗಿ ಮಾಡಿತ್ತು.

ಆತನ ಶಾಂತಿ ಸತ್ಯಾಗ್ರಹ
ಆಂಗ್ಲರನ್ನು ಆಚೆಗೆ ಹಾಕಿತು…


ದೇವರಾಜ M ಭೋಗಾಪುರ..

About The Author

4 thoughts on “ದೇವರಾಜ M ಭೋಗಾಪುರ..ಮಹಾತ್ಮ”

  1. ಬ್ರಿಟಿಷರ ಲಾಠಿಗಳು ಮತ್ತು ಬಂದೂಕುಗಳು ಮೇಲೆ ಹೇಳದೆ ಅಷ್ಟೊಂದು ಜನ ಕ್ರಾಂತಿಕಾರಿಗಳು ಹುತಾತ್ಮರಾದರೆ
    ಓಹೋ ನೀನು ಹೇಳಿದ್ದು ಬಂದೂಕುಗಳಲ್ಲವೇ ನೇಣುಗಂಬವಲ್ಲವಲ್ಲ ನೇಣುಗಂಬಕ್ಕೆ ಗಾಂಧಿಯ ಶಾಂತಿ ಅರ್ಥವಾಗಲಿಲ್ಲವೋ ಏನು

    ಆತನ ಒಂದು ಕರೆಗೆ ಹಿಂದುಗಳು ಮತ್ತು ಮುಸ್ಲಿಮರು ಒಂದು ಆಗುವ ಹಾಗಿದ್ದರೆ ಭಾರತ ಮತ್ತು ಪಾಕಿಸ್ತಾನವನ್ನು ಏಕೆ ಬೇರ್ಪಡಿಸಿದ್ದ

    ಹಾಗಿದ್ದರೆ ಕ್ರಾಂತಿಕಾರಿಗಳು ಗಾಂಧಿ ಸತ್ತ ಮೇಲೆ ಹುತಾತ್ಮರಾದರೆ ಅಥವಾ ಕ್ರಾಂತಿಕಾರಿಗಳು ಹುತಾತ್ಮರಾದ ಮೇಲೆ ಗಾಂಧಿ ಶಾಂತಿಯನ್ನು ಅನುಸರಿಸಿದರೆ

    ಆತ ಸುಳಿದಾಳಿದಲ್ಲೆಲ್ಲ ಸುಳ್ಳಿಗೆ ಸುಲುವೇ ಇರುತ್ತಿಲ್ಲವೆಂದರೆ ಪ್ರಥಮ ಪ್ರಧಾನಿಯನ್ನು ಆಯ್ಕೆ ಮಾಡುವಾಗ ಸರದಾರ್ ವಲ್ಲಭಾಯಿ ಪಟೇಲರಿಗೆ ಅತಿ ಹೆಚ್ಚು ಮತಗಳು ಹಾಕಿದ್ದರೂ ಕೂಡ ಜವಾಹರ್ ಲಾಲ್ ನೆಹರು ಅವರನ್ನು ಪ್ರಧಾನಮಂತ್ರಿಯನ್ನು ಮಾಡಿದ್ದು ಯಾಕೆ ಅವರನ್ನು ಸುಳ್ಳಿನಿಂದ ಪ್ರಧಾನ ಮಂತ್ರಿ ಮಾಡಲಿಲ್ಲವೇ

    ಚರಕದಿಂದ ಒಂದು ಬಟ್ಟೆ ಪರಿಪೂರ್ಣವಾಗಲು ತಿಂಗಳುಗಟ್ಟಲೇ ಬೇಕಾದರೆ ಒಬ್ಬ ವ್ಯಕ್ತಿಯ ಚರಕ ಬ್ರಿಟಿಷರನ್ನು ತಿರುಕರನ್ನಾಗಿ ಮಾಡಬಹುದೇ

    ಆತನ ಶಾಂತಿಯ ಸತ್ಯಾಗ್ರಹ ಬ್ರಿಟಿಷರನ್ನು ಆಚೆಗೆ ಹಾಕಿತು ಎಂದರೆ ಭಗತ್ ಸಿಂಗ್ ಸುಖದೇವ್ ಸಂಗೊಳ್ಳಿ ರಾಯಣ್ಣ ರಾಜಗುರು ಸುಖದೇವ್ ಸುಭಾಷ್ ಚಂದ್ರ ಬೋಸ್ ಇವರ ಹೋರಾಟದಿಂದ ಏನು ಆಗಲಿಲ್ಲವೇ ಅಥವಾ ಇವರ ಹೋರಾಟವೇ ವರ್ತವೇ ಯಾರಾದರೂ ಉಪವಾಸ ಸತ್ಯಾಗ್ರಹ ಮಾಡಿದರೆ ಅಶಕ್ತರಾಗುರುವ ಹೊರತು ಬ್ರಿಟಿಷರನ್ನು ಎದುರಿಸಲು ಸಾಧ್ಯವಿಲ್ಲ

    1. ಕ್ರಾಂತಿಕಾರಿಗಳ ಹೋರಾಟಕ್ಕೆ,ಉಸಿರಿಗೆ ಗಾಂಧೀಯವರಿಗಿಂತ ಜಾಸ್ತಿ ಪ್ರಾಮುಖ್ಯತೆ ಇದೆ, ಬೆಲೆ ಇದೆ ಅಣ್ಣ … ನಾನು ಇಲ್ಲ ಅಂತ ಹೇಳಿಲ್ಲ ಅಲ್ವಾ? ನಾನು ಗಾಂಧೀ ಏನು ಅದಷ್ಟೇ ಬರೆದಿದ್ದು.. ಬೇರೆ ಸ್ವಾತಂತ್ರ ಹೋರಾಟಗಾರರನ್ನ ಟೇಕಿಸುವಷ್ಟು ದೊಡ್ಡವ ಅಲ್ಲ ಸರ್ ನಾನು…

      1. ಗಾಂಧಿ ನೀನು ಹೇಳಿದ ತರ ಇಲ್ಲ ಅದನ್ನೇ ನಾನು ಹೇಳಿದ್ದು

Leave a Reply

You cannot copy content of this page

Scroll to Top