ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ಸುರೇಶ ನೆಗಳಗುಳಿ

ಗಜಲ್

ಸುಹಾಸ ಕಡಲತಡಿ ಭಾರ್ಗವನ ನೆಲೆಯು
ಹಸನ ಮುಖಿ ಕಾರಂತರ ನೆಲೆಯು

ಹಲವು ಕಡೆ ಕರ ಚಾಚುವ ತಾಕತ್ತು ಸುಲಭವೇ
ಸಕಲ ಸಾಹಿತ್ಯ ಪ್ರಕಾರದಲಿ ಇವರ ನೆಲೆಯು

ನೇರ ನುಡಿ ದಿಟ್ಟ ಪದ ಸರ್ವ ಸೋದರ ಭಾವ
ಕಡ್ಡಿ ತುಂಡಾದಂತೆ ವರಸೆ ಹೊತ್ತವರ ನೆಲೆಯು

ಬೇಸರವೆ ಬರದಂಥ ಮಾತು ಬರಹಗಳಂದ
ಸಕಲಜನರನುರಾಗಿಯಾದವರ ನೆಲೆಯು

ಬಾಲವನದಲಿ ಬಾಲ ಮುತ್ಸದ್ದಿಗಳ ರಾಜ ಸುರೇಶ
ಸಕಲ‌ಕಲೆಗಳ ಒಡೆಯರಾದವರ ನೆಲೆಯು


ಡಾ ಸುರೇಶ ನೆಗಳಗುಳಿ

About The Author

1 thought on “ಡಾ.ಸುರೇಶ ನೆಗಳಗುಳಿ-ಗಜಲ್”

Leave a Reply

You cannot copy content of this page

Scroll to Top