ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಅಂಬಮ್ಮ ಪ್ರತಾಪ್ ಸಿಂಗ್-

ಗಜಲ್

ಮೂರ್ತಿ ಚಿಕ್ಕದು ಕೀರ್ತಿ ದೊಡ್ಡದು ಶಾಸ್ತ್ರೀಜಿಯವರದು
ಆಕಾರ ವಾಮನ ಸಾಧನೆ ತ್ರಿವಿಕ್ರಮನದು ಶಾಸ್ತ್ರೀಜಿಯವರದು

ಪ್ರಾಮಾಣಿಕತೆಯೇ ಮೂರ್ತಿವೆತ್ತ ಮಹಾನ್ ಚೇತನ ಬಹಾದ್ದೂರ್
ಚಿಕ್ಕಶರೀರ ಮೃದು ಶಾರೀರ ದೃಢ ಚಿತ್ತವದು ಶಾಸ್ತ್ರೀಜಿಯವರದು

ಯಾರಿಗೂ ಬಗ್ಗದ ಬೆದರದ ಬಡತನದಲ್ಲಿ ಬದುಕಿದ ಸರಳಜೀವಿ
ನೈತಿಕತೆಯ ನೊಗ ಹೊತ್ತ ಸದೃಢ ಕಾಯವದು ಶಾಸ್ತ್ರೀಜಿಯವರದು

ನೇರ ದಿಟ್ಟ ನಡೆಯಿಂದ ಸಮರವನು ಗೆಲ್ಲಿಸಿದ ವೀರಯೋಧ
ಶಾಂತಿ ಸರಳತೆಯ ಮೃದು ಸ್ವಭಾವವದು ಶಾಸ್ತ್ರೀಜಿಯವರದು

ಜೈ ಜವಾನ್ ಜೈ ಕಿಸಾನ್ ಘೋಷಣೆ ಮೊಳಗಿಸಿದ ಹೋರಾಟಗಾರ
ಸ್ವಾಭಿಮಾನಿ ಭಾರತದ ಹಸಿರು ಶ್ವೇತಕ್ರಾಂತಿಯದು ಶಾಸ್ತ್ರೀಜಿಯವರದು


About The Author

1 thought on “ಅಂಬಮ್ಮ ಪ್ರತಾಪ್ ಸಿಂಗ್-ಗಜಲ್”

Leave a Reply

You cannot copy content of this page

Scroll to Top