ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅಂಕಲಿ ಬಸಮ್ಮ

ಗಜಲ್

ಮನಸಿನಲಡಗಿದ ಜಾತಿ ಧರ್ಮದ ಕಸವ ಗುಡಿಸು ಬಾ ಬಾಪು.
ನಾಲಿಗೆಯ ಮೇಲೆ ಆಡುವ ನೀಚತನ ಓಡಿಸು ಬಾ ಬಾಪು.

ತಂಟೆ ತಕರಾರುಗಳೆ ಪ್ರಗತಿಯ ಮಂತ್ರವಾಗಿದೆ ಈಗೀಗ
ಸಮಾನತೆಯ ಸಾರದ ಸವಿಯನೆಲ್ಲ ಉಣಿಸು ಬಾ ಬಾಪು.

ಪೊಳ್ಳು ಭರವಸೆ ಸುಳ್ಳು ಪ್ರಗತಿ ಪತ್ರಗಳೆ ಇವರ ಸಾಧನೆ.
ಕಳ್ಳ ಮನಸಿನ ಸುಳ್ಳರಿಗೆ ಸುಣ್ಣದ ನೀರ ಕುಡಿಸು ಬಾ ಬಾಪು.

ದೊರೆಯ ಅಂಗಳದಲ್ಲಿ ಧರ್ಮದ ರಂಗೋಲಿ ಬಿಡಿಸಲಾಗಿದೆ.
ಹರವಿದ ಚುಕ್ಕಿಗಳನೆಲ್ಲ ಅಳಿಸು ಬಾ ಬಾಪು.

ಅಂಕಲಿಯ ಮಂದಿಯ ಕನಸೇಕೊ ನಡಗುತಿದೆ.
ಭರವಸೆ ಕಳೆದುಕೊಂಡವರ ಬಾಳಿಗೆ ಬೆಳಕ ಹನಿ ಹನಿಸು ಬಾ ಬಾಪು.


ಅಂಕಲಿ ಬಸಮ್ಮ

About The Author

Leave a Reply

You cannot copy content of this page

Scroll to Top