ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಅನ್ನಪೂರ್ಣ ಸಕ್ರೋಜಿ ಪುಣೆ-

ಸ್ನೇಹ

ಸ್ನೇಹವೆಂದರೆ ವಡಾ ಪಾವದಂತೆ
ಚೂಡಾದ ಜೊತೆ ಚಹಾದಂತೆ
ಸಂತಸದ ಕ್ಷಣಗಳಲಿ
ನಾಟ್ಯವಾಡುವ ನವಿಲಿನಂತೆ
ನೊಂದು ನಲುಗಿ ಅತ್ತಾಗ
ಕಣ್ಣೀರೊರಸಿದಂತೆ.

ಗೆಳೆತನವೆಂದರೆ ನಿಷ್ಕಲ್ಮಶ
ಪ್ರೀತಿಯ ಅಥಾಂಗ ಸಾಗರ
ನಿರಾಗಸ ನಿರಪೇಕ್ಷೆಯ ಆಗರ
ಸಖ್ಯತನದ ಸುಂದರ ಹಂದರ

ಗೆಳೆತನದ ಕೋಗಿಲೆಯ ಇಂಚರ
ಪಕ್ಷಿಗಳ ಕಲರವದಂತೆ ಮಧುರ
ಬಾಲ್ಯದ ಸ್ನೇಹ ಜೀವಭಾವ
ಹಣ್ಣಾದ ಜೀವಿಗಳಲಿ ಅವಿನಾಭಾವ

ಸ್ನೇಹವೆಂದರೆ ನರ ನಾರಾಯಣರಂತೆ
ರಾಧಾ ಮಾಧವರಂತೆ
ಭೋಗದ ಜತೆ ತ್ಯಾಗವಿದ್ದಂತೆ
ವಿಜ್ಞಾನದ ಜೊತೆ ಆತ್ಮಜ್ಞಾನವಿದ್ದಂತೆ

ಸಖ್ಯತನವೆಂದರೆ ಗುಲಾಬಿ
ಹೂ ಸುಂದರ ಪಟ್ಟಿ ಕಟ್ಟುವದಲ್ಲ
ಅಶಾಶ್ವತ ಜೀವನದ ಶಾಶ್ವತ ಪ್ರೇಮ ಸ್ನೇಹವೇ
ಸಖ ಸಖಿಯರ ಸಖ್ಯತನ

ಮಿತ್ರ ಮೈತ್ರಿಯೆಂದರೆ
ಕತ್ತಲಲ್ಲಿ ಹೊಳೆವ ನಕ್ಷತ್ರಗಳಂತೆ
ಬಾನಂಗಳದ ಬೆಳದಿಂಗಳಿನಂತೆ
ಸದಾ ಜೊತೆಗಿರುವ
ಭರವಸೆಯಂತೆ


ಅನ್ನಪೂರ್ಣ ಸಕ್ರೋಜಿ ಪುಣೆ

About The Author

Leave a Reply

You cannot copy content of this page

Scroll to Top