ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವಚನಶ್ರೀ ಶಿವಕುಮಾರ ಪಾಟೀಲ

ಜನರಿಗಾಗಿ

ಬ್ರಿಟಿಷ್ ರಕ್ಕಸರ
ಕೈಯಲ್ಲಿ ಸೋತು ಸತ್ತು
ಹೋಗಿದ್ದವು ಮನಗಳು
ಸಹಿಸಲಾರದೆ ಸಿಡಿದ್ದೆದವು
ಬೆಂಕಿ ಚೆಂಡಿನಂತ ಮನಗಳು
ಹೋರಾಟಗಳು
ಉಪವಾಸಗಳು
ಸರೆವಾಸಗಳು
ಬೆಂಕಿಯ ಜ್ವಾಲೆಯಂತೆ ಸಿಡಿದ್ದೆದ್ದು
ತ್ಯಾಗ ಬಲಿದಾನದಿಂದ
ಅಮೃತದಂತ
ಸ್ವಾತಂತ್ರ್ಯವನ್ನ ತಂದು ಕೊಟ್ಟರು
ನಮ್ಮ ಹಿರಿಯರು

ನಮಗೀಗ ಅದರ
ಪರಿವೆ ಇಲ್ಲ
ಅಂಗಳದಲ್ಲಾಡುವ ಎಳೆಯ ಕಂದಮ್ಮಗಳಿಗೂ
ಸ್ವಾತಂತ್ರ್ಯವಿಲ್ಲ

ಎಲ್ಲೆಲ್ಲು ರಕ್ಕಸ ಮನಗಳ
ವಿಕೃತ
ಕಾಮುಕರು.
ಹಾವು ಮುಂಗುಸಿಯಂತ ಕಚ್ಚಾಡುವ
ರಾಜಕಾರಣಿಗಳ ನಾಟಕಗಳು

ನಮಗಾಗಿ ಮಡಿದವರಿಗೆ ಇರಲಿ
ಜನರಿಗಾಗಿ ಮನಮಿಡಿಯುವ ಕಾಯಕಗಳು


About The Author

1 thought on “ವಚನಶ್ರೀ ಶಿವಕುಮಾರ ಪಾಟೀಲ ಕವಿತೆ”

Leave a Reply

You cannot copy content of this page

Scroll to Top