ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ.ಬಸಮ್ಮ ಗಂಗನಳ್ಳಿ

ಬದಲಾವಣೆ

ಬದಲಾಗಬೇಕು ನಾವು
ಬದಲಾಗಲಿಲ್ಲ ಇನ್ನೂ
ಶತಮಾನಗಳ ಮೌಢ್ಯ
ತೊಲಗಲಿಲ್ಲ….
ಅಂಧಕಾರದಿ ಮುಳುಗಿ
ಜ್ಞಾನ ದೀವಿಗೆ ಹತ್ತಲಿಲ್ಲ
ಬೆಳಕು ಕಾಣಲಿಲ್ಲ….
ಬಿಡುಗಡೆಯ ಬೇಡಿ
ಜೀವನವೇ ಪಣಕ್ಕಿಟ್ಟು
ಗೆದ್ದು ಸೋತಿದ್ದೇವೆ
ಸ್ವೇಚ್ಛೆಯೇ ಬದುಕಾಗಿ
ಅರ್ಥವಿಲ್ಲದ ಬಾಳುತ್ತಿದ್ದೇವೆ
ಆದರೂ ಹೊಳೆಯಲಿಲ್ಲ ಬುದ್ಧಿ…
ಜಾತಿ-ಮತ, ಪಂಥ- ಪಂಗಡ
ಭೇದ ನಿಲ್ಲಲಿಲ್ಲ
ನೊಂದವರ ಬವಣೆ
ಅಂತ್ಯ ಕಾಣಲಿಲ್ಲ…
ವಿಜ್ಞಾನ – ತಂತ್ರಜ್ಞಾನ ಭರದಿ
ಸಾಗಿವೆ ಮನುಷ್ಯ ಸಂಬಂಧ
ಯಾಂತ್ರಿಕದಲಿ…
ಮೋಸ, ವಂಚನೆ, ಕಪಟ, ಸ್ವಾರ್ಥ
ಕುತಂತ್ರದಿ ನಲುಗಿದೆ ಭಾವಬಂಧ
ರಾಮರಾಜ್ಯ ಬಯಸಿ ಫಲವಿಲ್ಲ ಇಲ್ಲ
ಗಾಂಧಿ ಕಟ್ಟಿದ ಕನಸು ನನಸಾಗಲಿಲ್ಲ…
ರಾಮ ರಹೀಮ್ ಏಸು ಕೃಷ್ಣ ಬುದ್ಧ ಬಸವ ಅಲ್ಲಮ ವಿವೇಕರು ಅಂಬೇಡ್ಕರ ಸಾರಿದ ಸಮಾನತೆ
ವಾಣಿ ಮುಟ್ಟಲಿಲ್ಲ ಮನಕೆ
ಕಾರಣ ಬದಲಾಗಲಿಲ್ಲ ನಾವು…
ಬದಲಾಗಬೇಕು ನಾವು ಮನೋಭಾವ,ಆಲೋಚನೆಯಲಿ
ಹೊಸತನವ ಹೊಸೆಯಬೇಕು
ನವಜೀವನಕೆ ಜೀಕಬೇಕು
ಸಮತೆಯ ಬೆಳಕಲಿ ಸಾಗುತ
ಬದಲಾಗಬೇಕಿದೆ ,
ಬದಲಾಗಬೇಕು ಬದಲಾಗಬೇಕು.


ಡಾ.ಬಸಮ್ಮ ಗಂಗನಳ್ಳಿ

About The Author

3 thoughts on “ಡಾ.ಬಸಮ್ಮ ಗಂಗನಳ್ಳಿಕವಿತೆ-ಬದಲಾವಣೆ”

  1. Dr Shashikant Pattan

    ಅರ್ಥ ಪೂರ್ಣ ಕವನ ಬದಲಾವಣೆ ಸೃಷ್ಟಿಯ ನಿಯಮ. ಮನುಷ್ಯ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡಾಗ ಬದಲಾವಣೆ ಕಷ್ಟ ಸಾಧ್ಯ.ಪ್ರಸಕ್ತ ವಿದ್ಯಮಾನಗಳಲ್ಲಿ ತಮ್ಮ ಕವನ ಅರ್ಥ ಪೂರ್ಣ ಚಿಂತನೆ ಮೇಡಂ

Leave a Reply

You cannot copy content of this page

Scroll to Top