ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಜಶೀಲಾ, ಕೋಟೆ

ಒಲವಿನಹನಿಬನಿಗಳು

ಒಲವಿನ ಹನಿಬನಿಗಳು……

ಆಷಾಢ ಕಳೆದು ಶ್ರಾವಣ ಬಂತು
ಇನ್ನೆಲ್ಲಾ ಅವನೊಲವಿನ
ಮಾಸದ್ದೇ ದರ್ಬಾರು !

ಸಾಕುಸಾಕೆನಿಸಿ ಬಸವಳಿದಾಗಲೆಲ್ಲ
ಅವನು ಒಲುಮೆಯ ಹಣತೆ ಹಚ್ಚಿ
ಬದುಕ ಬೆಳಗಿಸಿದ

ಜಗತ್ತು ದೂರಿ ದೂರ ಮಾಡಿದಾಗ
ಬದುಕಲು ಪ್ರೇರೇಪಣೆ ನೀಡಿದ್ದು
ಅವನ ಒಲವು

ಒಲವಿನೊಂದು
ಸಣ್ಣ ಕಿಡಿಸೋಕಿದಾಗಲೇ
ನನ್ನೆಲ್ಲ ಬವಣೆ ತೀರಿದ್ದು!

L

ಜಗತ್ತಿಗೆ ತಿಳಿದಿರುವುದು
ಕಾಮನಬಿಲ್ಲಿನಲ್ಲಿನಲ್ಲಿರುವ
ಏಳೇಬಣ್ಣಗಳು

ಅವನ ಸ್ಪರ್ಶಕೆ ನನ್ನ ಕೆನ್ನೆ
ರಂಗೇರಿದಾಗಲೇ ಅರಿತೆ
ಒಲುಮೆಯಲ್ಲಿರುವ ನಾನಾ ಬಣ್ಣಗಳು

ಮಜಲುಗಳು ಹಲವು ಸಾಹಿತ್ಯದಲಿ
ಕ್ಷಮಿಸಿ,ಒಲವೊಂದೇ
ನನ್ನವನ ಪ್ರೀತಿ ಪದಲಾಲಿತ್ಯದಲಿ


ಜಶೀಲಾ, ಕೋಟೆ

About The Author

3 thoughts on “ಜಶೀಲಾ, ಕೋಟೆ ಕವಿತೆ-ಒಲವಿನಹನಿಬನಿಗಳು…”

  1. ಗೋಪಾಲ ತ್ರಾಸೀ

    ಲವಲವಿಕೆಯ ತಾಜಾ ಹನಿಗಳು, ಅಭಿನಂದನೆಗಳು ತಮಗೆ.

Leave a Reply

You cannot copy content of this page

Scroll to Top