ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಯಾವ ಕೃಷ್ಣನೂ ಬರಲಿಲ್ಲ…

ಹಮೀದಾ ಬೇಗಂ ದೇಸಾಯಿ

ಇದೆಂಥ ಜ್ವಾಲಾಮುಖಿ,
ವಿಷ ರಸ ಹರಿದಿದೆ ,
ಅರುಣೋದಯದ ನಾಡಿನಲಿ
ಚಿತ್ರಾಂಗದೆಯ ನೆಲದಲಿ…?

ಮೊಲೆಯೂಡಿಸಿದ
ಎದೆಗೇ ಕೈ ಹಾಕಿದ
ಕೀಚಕರ ದಂಡು ;
ಹದ್ದಿನೆಂತೆರಗಿ
ಹೆಣ್ತನವ ಚಿಂದಿ ಮಾಡಿ
ಮೆರೆದ ಅಧಮಾಧಮರು..

ನಾಯಿಗಳಿಗಿಂತ
ಕೀಳಾಗಿಹ ಕಾಮುಕರು;
ಲಜ್ಜೆಗೆಟ್ಟ ಭಂಡ
ಪೌರುಷಕೆ ಕೇಕೆ ಹಾಕಿ
ಅಟ್ಟಹಾಸದಿ ಮೆರೆದವರು….

ದ್ವೇಷ ಜಾತಿಗಳ ದಳ್ಳುರಿಯ
ಸೋಗಿನಲಿ ಹಸಿ ಮಾಂಸ
ಮುಕ್ಕಿ ತಿಂದು ತೇಗಿದವರು;
ಅವ್ವ ಅಕ್ಕ-ತಂಗಿಯರನು
ಮರೆತ ಹೇಸಿ ರಕ್ಕಸರು…

ಯಾವ ಕೃಷ್ಣನೂ ಬರಲಿಲ್ಲ
ದ್ರೌಪದಿಯರನು ಕಾಪಾಡಲು,
ಅವರ ಮಾನವನು ಉಳಿಸಲು…..


ಹಮೀದಾ ಬೇಗಂ ದೇಸಾಯಿ

About The Author

9 thoughts on “ಯಾವ ಕೃಷ್ಣನೂ ಬರಲಿಲ್ಲ…ಹಮೀದಾ ಬೇಗಂ ದೇಸಾಯಿ”

    1. ಮೆಚ್ಚುಗೆಗೆ ಧನ್ಯವಾದಗಳು. ಹಮೀದಾ ಬೇಗಂ. ಸಂಕೇಶ್ವರ.

      1. ಸ್ಪಂದನೆಗೆ ಧನ್ಯವಾದಗಳು ತಮಗೆ. ಹಮೀದಾ ಬೇಗಂ. ಸಂಕೇಶ್ವರ.

  1. ನಾಗರಾಜ್ ಹರಪನಹಳ್ಳಿ

    ಮಣಿಪುರದಲ್ಲಿ ಕುಕಿ ಸಮುದಾಯದ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರದ ವಿರೋಧಿಸಿ ಮೊದಲ ಕವಿತೆ ಬರೆದದ್ದು,ನಾಗಾ ಕವಯಿತ್ರಿ ನಿಂಗ್ರಾ ಚಾನ್ . ಈ ಕವಿತೆಯನ್ನು ಕನ್ನಡಕ್ಕೆ ವಿಜಯಕುಮಾರ್ ಅನುವಾದಿಸಿದರು. ಕನ್ನಡದ ನೆಲದಿಂದ ಮೊದಲ ಪ್ರತಿರೋಧ ವ್ಯಕ್ತವಾದುದು ಕವಯಿತ್ರಿ ಜಾಹಿಧಾ ಕೊಡಗು ಅವರಿಂದ. ನಂತರ ಮಾಚಯ್ಯ ಹಿಪ್ಪರಗಿ, ‌ಮಧುರಾಣಿ ಎಚ್. ಎಸ್., ಫಾತಿಮಾ ರಿಲಿಯಾ ಹೆಜ್ಮಾಡಿ ಕವಿತೆಯ ಮೂಲಕ ಪ್ರತಿರೋಧ ತೋರಿದ್ದಾರೆ. ಇನ್ನೂ ಬೆರಳೆಣಿಕೆಯಷ್ಟಾದರೂ ಅಕ್ಷರಲೋಕ ಮಾನವೀಯತೆ ಉಳಿಸಿಕೊಂಡಿದೆ. ಅನ್ಯಾಯಕ್ಕೆ ಪ್ರತಿರೋಧ ತೋರುವ ಮೂಲಕ ಕನ್ನಡದ ನಿಜಧ್ವನಿ ಹಾಗೂ ಕಾವ್ಯದ ನಿಜ ಪ್ರಜ್ಞೆಯನ್ನು ಉಳಿಸಿಕೊಂಡಿದೆ. ಈ ಸಾಲಿಗೆ ಹಮೀದಾ ಬೇಗಂ ದೇಸಾಯಿ ಅವರ ಕವಿತೆ ಸಹ ಸೇರಲಿದೆ.

  2. ನಾಗರಾಜ್ ಹರಪನಹಳ್ಳಿ

    ಮಣಿಪುರದಲ್ಲಿ ಕುಕಿ ಸಮುದಾಯದ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರದ ವಿರೋಧಿಸಿ ಕವಯಿತ್ರಿ ನಿಂಗ್ರಾ ಚಾನ್ . ಈ ಕವಿತೆಯನ್ನು ಕನ್ನಡಕ್ಕೆ ವಿಜಯಕುಮಾರ್ ಅನುವಾದಿಸಿದರು. ಕನ್ನಡದ ನೆಲದಿಂದ ಮೊದಲ ಪ್ರತಿರೋಧ ವ್ಯಕ್ತವಾದುದು ಕವಯಿತ್ರಿ ಜಾಹಿಧಾ ಕೊಡಗು ಅವರಿಂದ. ನಂತರ ಮಾಚಯ್ಯ ಹಿಪ್ಪರಗಿ, ‌ಮಧುರಾಣಿ ಎಚ್. ಎಸ್., ಫಾತಿಮಾ ರಿಲಿಯಾ ಹೆಜ್ಮಾಡಿ ಕವಿತೆಯ ಮೂಲಕ ಪ್ರತಿರೋಧ ತೋರಿದ್ದಾರೆ. ಇನ್ನೂ ಬೆರಳೆಣಿಕೆಯಷ್ಟಾದರೂ ಅಕ್ಷರಲೋಕ ಮಾನವೀಯತೆ ಉಳಿಸಿಕೊಂಡಿದೆ. ಅನ್ಯಾಯಕ್ಕೆ ಪ್ರತಿರೋಧ ತೋರುವ ಮೂಲಕ ಕನ್ನಡದ ನಿಜಧ್ವನಿ ಹಾಗೂ ಕಾವ್ಯದ ನಿಜ ಪ್ರಜ್ಞೆಯನ್ನು ಉಳಿಸಿಕೊಂಡಿದೆ. ಈ ಸಾಲಿಗೆ ಹಮೀದಾ ಬೇಗಂ ದೇಸಾಯಿ ಅವರ ಕವಿತೆ ಸಹ ಸೇರಲಿದೆ.

    1. ನಾಗರಾಜ್ ಹರಪನಹಳ್ಳಿ

      ಟೈಪ್ ಮಾಡುವಾಗ ವಿಜಯ ಕುಮಾರ್ ಎಂದಾಗಿದೆ. ಕವಿತೆ ಅನುವಾದಿಸಿದವರು ವಿಶುಕುಮಾರ್ . ಅವರು ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕರು.

  3. ನಾಗರಾಜ್ ಹರಪನಹಳ್ಳಿ

    ಮಣಿಪುರದಲ್ಲಿ ಕುಕಿ ಸಮುದಾಯದ ಹೆಣ್ಣು ಮಕ್ಕಳ ಮೇಲೆ ನಡೆದ ಅತ್ಯಾಚಾರದ ವಿರೋಧಿಸಿ ಮೊದಲ ಕವಿತೆ ಬಂದುದು ಮಣಿಪುರದ ನೆಲದಿಂದ. ನಾಗಾ ಕವಯಿತ್ರಿ ನಿಂಗ್ರಾ ಚಾನ್ ,
    ಮಣಿಪುರದ ಅನ್ಯಾಯ ವಿರೊಧಿಸಿ ಕವಿತೆ ಬರೆದರು. ಈ ಕವಿತೆಯನ್ನು ಕನ್ನಡಕ್ಕೆ ಅನುವಾದಿಸಿದ್ದು ಕನ್ನಡ ಸಂಸ್ಕೃತಿ ಇಲಾಖೆಯ ನಿವೃತ್ತ ನಿರ್ದೇಶಕ ವಿಶು ಕುಮಾರ್.

    ಇದೇ ವೇಳೆ
    ಕನ್ನಡದ ನೆಲದಿಂದ ಮೊದಲ ಪ್ರತಿರೋಧ ವ್ಯಕ್ತವಾದುದು ಕವಯಿತ್ರಿ ಜಾಹಿಧಾ ಕೊಡಗು ಅವರಿಂದ. ನಂತರ ಮಾಚಯ್ಯ ಹಿಪ್ಪರಗಿ, ‌ಮಧುರಾಣಿ ಎಚ್. ಎಸ್., ಫಾತಿಮಾ ರಿಲಿಯಾ ಹೆಜ್ಮಾಡಿ ಕವಿತೆಯ ಮೂಲಕ ಪ್ರತಿರೋಧ ತೋರಿದ್ದಾರೆ. ಇನ್ನೂ ಬೆರಳೆಣಿಕೆಯಷ್ಟಾದರೂ ಅಕ್ಷರಲೋಕ ಮಾನವೀಯತೆ ಉಳಿಸಿಕೊಂಡಿದೆ. ಅನ್ಯಾಯಕ್ಕೆ ಪ್ರತಿರೋಧ ತೋರುವ ಮೂಲಕ ಕನ್ನಡದ ನಿಜಧ್ವನಿ ಹಾಗೂ ಕಾವ್ಯದ ನಿಜ ಪ್ರಜ್ಞೆಯನ್ನು ಉಳಿಸಿಕೊಂಡಿದೆ. ಈ ಸಾಲಿಗೆ ಹಮೀದಾ ಬೇಗಂ ದೇಸಾಯಿ ಅವರ ಕವಿತೆ ಸಹ ಸೇರಲಿದೆ.

    1. ಹೆಣ್ಣಿನ ನೋವುಗಳಿಗೆ ಸ್ಪಂದಿಸಿದ ತಮಗೆ ಧನ್ಯವಾದಗಳು ಸರ್. ಹಮೀದಾ ಬೇಗಂ. ಸಂಕೇಶ್ವರ.

Leave a Reply

You cannot copy content of this page

Scroll to Top