ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಲಲಿತಾ ಪ್ರಭು ಅಂಗಡಿ

ಫ.ಗು.ಹಳಕಟ್ಟಿ

ಪ್ರಾತಃ ಸ್ಮರಣೀಯ ಪುಣ್ಯ ಪುರುಷ
ವಚನಗಳಿಗೆ ನಿವಾದಿರಿ ದಿವ್ಯಕೋಶ
ಹಗಲಿರುಳು ಜೀವನತೇಯ್ದ ಸತ್ಯವಂತ
ಸತ್ಯದ ಹಾದಿಗೆ ಶುದ್ಧ ಹಸ್ತ
ವಕೀಲಿವ್ರೃತ್ತಿಗೆ ಘನತೆತಂದ ಗುಣವಂತ
ವಚನಗಳ ಉಳಿಸಿ ಬೆಳೆಸಿದ ಕಾವಲುಗಾರ
ಸಾಹಿತ್ಯ ಶಿಕ್ಷಣಕೆ ಹರಿಕಾರ
ಶಿವಾನುಭವ ಪತ್ರಿಕೆಯ ಹರಿಕಾರ
ವಚನಸಾಹಿತ್ಯದ ನೇಕಾರ
ಕರ್ನಾಟಕದ ಮ್ಯಾಕ್ಸ್ ಮುಲ್ಲರ್
ತಾಳೋಲೆಗಳಿಗೆ ಭದ್ರ ಬುನಾದಿ ಹಾಕಿದ ಬಹಾದ್ದೂರ್
ವಚನಗಳಿಗೆ ಜೀವ ತುಂಬಿದ ಸರದಾರ
ಮನೆಮಕ್ಕಳು ಸಂಸಾರವನೆ ತ್ಯಾಗ ಮಾಡಿದ ಪಿತಾಮಹಾ
ತೇಪೆ ಹೆಚ್ಚಿದ ಅಂಗಿಉಟ್ಟು
ಜೇಬು ಇರದ ಕೋಟು ತೊಟ್ಟು
ವಚನಗಳ ಕಟ್ಟುವ ಛಲವ ತೊಟ್ಟು
ಅದಕಾಗಿಯೆ ಜೀವನ ತೆತ್ತ
ನಿಮ್ಮ ಆದರ್ಶದ ಬಾಳಿಗೆ

ಸಾವಿರದ ಶರಣು.


ಲಲಿತಾ ಪ್ರಭು ಅಂಗಡಿ

About The Author

Leave a Reply

You cannot copy content of this page

Scroll to Top