ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಡೋ.ನಾ.ವೆಂಕಟೇಶ

ಮಳೆಯಲ್ಲಿ ನನ್ನಾಕ್ಷಿ

ಧೋ ಎಂದು ಸುರಿವ ಸೊಗಸು
ಬಾ ಎಂದಾಗ ಬರದ ನಿನ್ನ ಮುನಿಸು
ಬಾರದಾಗ ಬರೀ ನಿನ್ನ ಕನಸು

ಸುರಿವ ಮಳೆಗೂ ,ಇಳೆಗೆ
ಅವತರಿಸುವ ಇವಳಿಗೂ
ಬಲು ದಿಮಾಕು
ಬಂದಾಗ ದೌಲತ್ತು
ಬಾರದಾಗ ಹಿಕ್ ಮತ್ತು

ಮಳೆ ಹೀಗೇ
ಕಾದ ಭೂಮಿ ಹಸಿವಿಂದ
ಕಂಗಾಲು
ಮುಂಗಾರು ಪೂರ್ವ ಮಳೆ
ಬಂದಾಗಷ್ಟೆ ಹೊಳೆ
ಬಾರದಾಗ ಕಂಪನ
ಮಿಂಚಿನ ಸಿಂಚನ !

ಪೂರ್ವ ಮುಂಗಾರು ಮಳೆ
ಮುಂದಡಿಯಿಟ್ಟಾಗ ನೀ
ಪುನರ್ವಸು
ಚಿಕ್ಕ ಪುಷ್ಯ ಬೆಳೆದು ನಿಂತಾಗ
ದೊಡ್ಡ ಪುಷ್ಯ!

ಥೇಟ್ ನಿನ್ನ ಹಾಗೇ ಕಣೆ
ಈ ಮಳೆ
ಇಳೆಯಲ್ಲಿ ಹೊಳೆ-
ಜಲಜಾಕ್ಷಿ
ತೋಯಜಾಕ್ಷಿ !!


ಡಾ ಡೋ.ನಾ.ವೆಂಕಟೇಶ

About The Author

13 thoughts on “ಡಾ ಡೋ.ನಾ.ವೆಂಕಟೇಶ ಕವಿತೆ-ಮಳೆಯಲ್ಲಿ ನನ್ನಾಕ್ಷಿ”

  1. ಡಾ ಅರಕಲಗೂಡು ನೀಲಕಂಠ ಮೂರ್ತಿ

    “ಮಳೆಯಲ್ಲಿ ನನ್ನಾಕ್ಷಿ” ಕವನ ಸರ್ ಮತ್ತು ಸೊಗಸು. ಅಭಿನಂದನೆ ನಿಮಗೆ ಪ್ರಿಯ ವೆಂಕಟೇಶ್

  2. ಡಾ ಅರಕಲಗೂಡು ನೀಲಕಂಠ ಮೂರ್ತಿ

    ಸರಳ ಮತ್ತು ಸೊಗಸು ಎಂದು ಓದಿಕೊಳ್ಳಿ

  3. Dr K B SuryaKumar

    ಬಂದಾಗ ದೌಲತ್ತು, ಬಾರದಿದ್ದಾಗ ಹಿಕ್ಮತ್ತು..
    ಯಾಕಣ್ಣ… ಅತ್ತಿಗೆ ಏನ್ ಮಾಡಿದ್ರು
    ಎಂದಿನಂತೆ ಸುಂದರ ಕವನ

  4. D N Venkatesha Rao

    ಸೂರ್ಯ , ನಿಮ್ಮ ಈ ಪ್ರತಿಕ್ರಿಯೆ ನೋಡಿದರೆ-ಅಷ್ಟೇ. जीना मुश्किल हो जाता है
    Thanq Surya

  5. ನೀನಾಕ್ಷಿಯನ್ನು ತೇಜೋವಾಕ್ಷಿಯಾಗಿ
    ಮಳೆನೀರಿನಲ್ಲಿ ಪರಿವರ್ತಿಸುವ ನಿಮ್ಮ ಕಲ್ಪನೆಯು ಬಹಳ ಪ್ರಭಾವಶಾಲಿಯಾಗಿದೆ.
    ನಿಮ್ಮ ಕನಸು ನನಸಾಗಲಿ ಎಂದು ಆಶಿಸುತ್ತೇನೆ

  6. D N Venkatesha Rao

    ಚೆನ್ನಾದ ಅಕ್ಷಿಗಳಿಗೆ ಕಾಣಿಸಿದ್ದೆಲ್ಲ ಚೆನ್ನ,ಮಂಜಣ್ಣ ! Thanq Manjunath pai

Leave a Reply

You cannot copy content of this page

Scroll to Top