ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಹಾವೀರ ಜಯಂತಿ ವಿಶೇಷ

ಈರಪ್ಪ ಬಿಜಲಿ

ಶಾಂತಿದೂತ..ಸುಜ್ಞಾನಧಾತ

ಮನೋ ನಿಗ್ರಹಿ ಪೂಜ್ಯ ವಿಗ್ರಹಿ
ತನ್ನ ತಾನು ಜೈಸಿದ ಮಹಾವೀರರ
ಜನಾನುರಾಗಿ ದಿವ್ಯ ವಿರಾಗಿ
ಮನುಕುಲ ಭೈರಾಗಿ ಮಹಾವೀರ ||

ಸಿದ್ದಾರ್ಥ ತ್ರಿಶಲಾ ದೇವಿ ಸುತರು
ಲೋಕ ಮಾನ್ಯ ವರ್ಧಮಾನರು |
ಅಹಿಂಸಾ ಪರಮೋ ಧರ್ಮವೆಂದು
ಸಾರಿದ ಗುರುಗಳ ಮೆಚ್ಚಿನ ಶಿಷ್ಯರು ||

ಇಪ್ಪತ್ತನಾಲ್ಕನೇ ಜೈನ ತೀರ್ಥಂಕರರು
ಜಗವ ಬೆಳಗಿದ ಸನ್ಮತಿನಾಯಕರು
ರಪ್ಪಂತ ಎರಗುವ ಕಷ್ಟನಷ್ಟವನು
ನೀಗಿಸಿ ಹರಸಿರಿ ಸೌಭಾಗ್ಯಧಾತರೆ ||

ರಾಜಾವೈಭವ ತೊರೆದು ಲೋಕಕೆ
ಅಷ್ಟಸೋಪಾನ ಬೋಧನೆ ಮಾಡಿ
ಶಾಂತ ಚಿತ್ತವೀರ ವಿಶ್ವಶಾಂತಿದೂತ
ಅಜ್ಞಾನ ಅಳಿಯೋ ಹೇ ಸುಜ್ಞಾನಧಾತ ||


About The Author

Leave a Reply

You cannot copy content of this page

Scroll to Top