ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯಸಂಗಾತಿ

ಡಾ.ರೇಣುಕಾತಾಯಿ

ಗಜಲ್

ನೆನಪುಗಳು ನೆನಪಿಸಲು ಆಗುತ್ತಿಲ್ಲ ಗುಳೆ ಹೋಗಿದ್ದಾವೆ
ಕೆನ್ನೆಗಳು ರಂಗೇರಲು ಸಿದ್ಧವಾಗಿಲ್ಲ ಗುಳೆ ಹೋಗಿದ್ದಾವೆ//

ಒಡಲ ನೋವು ನುಂಗಲಾಗದೆ ನುಗ್ಗಾಗಿದ್ದೇನೆ
ಮಡಿಲ ತುಂಬಲು ಮಮತೆಯಿಲ್ಲ ಗುಳೆ ಹೋಗಿದ್ದಾವೆ//

ಬಾಳದಾರಿಯ ಬಿಸಿಲಲಿ ನೆರಳಿಗಾಗಿ ಕಾಯುತ್ತಿದ್ದೇನೆ
ನೆಮ್ಮದಿಯೂ ಕಾಣಲು ಸಿಗುತ್ತಿಲ್ಲ ಗುಳೆ ಹೋಗಿದ್ದಾವೆ //

ಹನಿಯೊಡೆವ ಮೋಡದಲಿ ಆಸೆಗಳ ಗುಡುಗು ಸಿಡಿಲು,
ಬಿರುಸಾದ ಮುಗಿಲು ಹನಿಸುತಿಲ್ಲ ಗುಳೆ ಹೋಗಿದ್ದಾವೆ //

ತಾಯಿಬಳ್ಳಿ ಮರುಕಗಟ್ಟಿ ಮುದುಡಿ ಮಲಗಿದೆ
ಕರುಳು ಕೂಸುಗಳು ಕಾಣುತ್ತಿಲ್ಲ ಗುಳೆ ಹೋಗಿದ್ದಾವೆ//


About The Author

Leave a Reply

You cannot copy content of this page

Scroll to Top