ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಶಂಕರಾನಂದ ಹೆಬ್ಬಾಳ

ಗಜಲ್

The vast blue sky and clouds sky

ಬಾನುಭೂಮಿಗಳು ಒಂದಾಗಿ ಇರುವುದುಂಟೆ ಹೇಳು
ಪಾಪಪುಣ್ಯಗಳು ಜೊತೆಯಲ್ಲಿ ಬೆರೆವುದುಂಟೆ ಹೇಳು

ಭೇದಿಸದ ಬ್ರಹ್ಮಾಂಡ ಅಗೋಚರ ಸತ್ಯವಿದು ತಿಳಿ
ಕೆಡಕುಗಳು ಸುಕೃತವನು ತರುವುದುಂಟೆ ಹೇಳು

Some white clouds in the blue sky

ಮುಖವಾಡಕ್ಕೆ ಬೆಲೆಕೊಡುವ ಜನರು ಇಲ್ಲಿಹರಲ್ಲ
ಅಂತರಂಗ ಬಹಿರಂಗವು ಸೇರುವುದುಂಟೆ ಹೇಳು

ಸನ್ಮಾರ್ಗದ ಹಾದಿಯಲಿ ಸಾಗುವುದು ಬಲುಕಠಿಣ
ಪ್ರೀತಿಯನು ಸಂತೆಯೊಳು ಮಾರುವುದುಂಟೆ ಹೇಳು

ಇಹಕ್ಕೂ ಪರಕ್ಕೂ ವ್ಯತ್ಯಾಸವನು ಅರಿಯದಾದೆಯಲ್ಲ
ಅಭಿನವನೂರಿನಲ್ಲಿ ಪಾದ ಊರುವುದುಂಟೆ ಹೇಳು


ಶಂಕರಾನಂದ ಹೆಬ್ಬಾಳ

About The Author

Leave a Reply

You cannot copy content of this page

Scroll to Top