ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ವ್ಯಾಲಂಟೈನ್ ವಿಶೇಷ

ಶ್ರೀವಲ್ಲಿ ಮಂಜುನಾಥ

ಪ್ರೀತಿ ಸಾಂಗತ್ಯ

ಕಂಗಳಲಿ ಸವಿಗನಸಿನ
ಮೆರವಣಿಗೆ ಹೊರಟಿದೆ;
ಗಂಧಾಕ್ಷತೆಯ ಮಳೆಯಲಿ
ತನು-ಮನ ಮೀಯುತಿದೆ!

ಮುಗುಳುನಗುವಿನಲಿ
ತನ್ನಿನಿಯನ ಸೆಳೆಯುತ;
ಹಿತವಾದ ಕಂಪನದಲಿ
ಮನನಾಚಿ, ತುಟಿಬಿರಿದಿದೆ!

ಮದುವೆಯೆಂದರೆ
ಚಂದಮಾಮದ ಕತೆಯಲ್ಲ;
ತ್ಯಾಗ, ಸಹನೆಯೊಡನೆ
ಪ್ರೀತಿ ಎಂಬುದರರಿವಿದೆ!

ಸಂಗಾತಿಗೆ ಸಖನಾಗಿ
ನಿರ್ಮಲ ಸ್ನೇಹವನಿತ್ತು;
ಒಲವಿನಾಸರೆಯಾಗಿ
ಮುನ್ನಡೆಸುವ ಛಲವಿದೆ !

ದೇಹವೆರಡಾದರೂ
ಆತ್ಮವೊಂದಾಗಿ, ಕೊಡು
ಕೊಳ್ಳುತ್ತಾ,ಬೆಳೆಸಿ-ಬೆಳೆವ
ಆತ್ಮಸಾಂಗತ್ಯವಿಲ್ಲಿದೆ !!


About The Author

Leave a Reply

You cannot copy content of this page

Scroll to Top