ರೇಣುಕಾ ಕೋಡಗುಂಟಿಯವರ ಗಜಲ್

ಕಾವ್ಯ ಸಂಗಾತಿ

ಗಜಲ್

ರೇಣುಕಾ ಕೋಡಗುಂಟಿ

ಒಲವಿನೂರಿಗೆ ಹಾಜರಿ ಹಾಕಿದವನು ಇವನು
ಪ್ರೇಮದ ಶಾಯರಿಯ ಹಾಡಿದವನು ಇವನು

ಕನಸಿನ ಕೋಟೆಗೆ ಮಿಂಚು ಹರಿಸಿದವನು ಇವನು
ಸಂಗಾತಿಯಾಗಿ ಬಾಳಲಿ ಬಂದವನು ಇವನು

ಪ್ರೀತಿಯ ಬೆಳಕ ಬಿತ್ತಿದ ಚಂದಿರನು ಇವನು
ಮನದ ಮಿಲನಕೆ ಜೊತೆಯಾದವನು ಇವನು

ಕಣ್ಣ ದೀವಿಗೆಗೆ ಕಾಂತಿ ತುಂಬಿದವನು ಇವನು
ಜೀವನದ ಜ್ಯೋತಿಯ ಬೆಳಗಿದವನು ಇವನು

ಚೆಂದುಟಿಗೆ ಚೆಲುವನು ತಂದವನು ಇವನು
ರೇಣು’ವಿನ ಅನುರಾಗಕೆ ಶರಣಾದವನು ಇವನು


About The Author


Comments

Leave a Reply

You cannot copy content of this page