ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಡಾ ಶಶಿಕಾಂತ ಪಟ್ಟಣ-ಗಾಂಧಿಯನೇಕೆ ಕೊಂದರು ?

ಸತ್ಯ ಶಾಂತಿ ನ್ಯಾಯ ಮೂರ್ತಿ
ಗಾಂಧಿನೇಕೆ ಕೊಂದರು ?
ಎಷ್ಟೋ ವರುಷಗಳ ಹಿಂದೆ
ನನ್ನ ಮುಗ್ಧ ಮಗನ ಪ್ರಶ್ನೆಯು

ದಶಕ ಕಳೆಯಿತು ಉತ್ತರ ಹುಡುಕಲು
ಕೊನೆಗೂ ಸಿಕ್ಕಿತು ಕಾರಣ
ಬಿಚ್ಚಿ ಹೇಳಿದೆ ನನ್ನ ಮಗನಿಗೆ
ನಿಜದ ನಿಲುವಿನ ಹೂರಣ

ಬಾಪು ಸರಳ ಸಮತೆ ಪ್ರಿಯ
ಕೈಗೆ ಕೊಟ್ಟನು ಸ್ವಾತಂತ್ರ
ದಾಸ್ಯ ತೊಲಗಿಸಿ ದೇಸಿ ಚರಕ
ನೂಲು ನೂತನು ಭಾರತ

ಸುಳ್ಳು ಎಂದೂ ಹೇಳಲಿಲ್ಲ
ಕೋಮು ಗಲಭೆ ಮಾಡಲಿಲ್ಲ
ಜಾತಿ ಧರ್ಮದ ದ್ವೇಷ ಬೆಂಕಿಗೆ
ತುಪ್ಪವನ್ನು ಸುರಿಯಲಿಲ್ಲ

ಗಣಿ ಲೂಟಿ ಹೊಡೆಯಲಿಲ್ಲ
ದೇಶ ಬಿಟ್ಟು ಓಡಲಿಲ್ಲ
ಸುಳ್ಳು ಲೆಕ್ಕದಿ ದುಡ್ಡು ತಿಂದು
ದೊಡ್ಡ ಬಂಗಲೆ ಕಟ್ಟಲಿಲ್ಲ

ರೈತರನ್ನು ಕೊಲ್ಲಲಿಲ್ಲ
ಶ್ರಮಿಕ ಜನರನು ತುಳಿಯಲಿಲ್ಲ
ನಿರುದ್ಯೋಗ ನಿತ್ಯ ತಾಂಡವ
ಕೆರೆಗೆ ಯುವಕರ ನೂಕಲಿಲ್ಲ

ಧರ್ಮ ದೇವರ ಹೆಸರಿನಲ್ಲಿ
ಮೋಸ ಮಾಡಿ ಮೆರೆಯಲಿಲ್ಲ
ಮೌಲ್ಯ ಮೆಟ್ಟಿ ನೆಲದಿ ಹೂತು
ಖುರ್ಚಿ ಗದ್ದುಗೆ ಏರಲಿಲ್ಲ

ಗುಂಡು ಹೊಡೆದರೂ
ಸತ್ಯ ಹೇಳಿದ ನಮ್ಮ
ದೇಶದ ಮೋಹನ
ಗಾಂಧಿ ಮಂತ್ರವೇ ಪಾವನ


About The Author

18 thoughts on “ಡಾ ಶಶಿಕಾಂತ ಪಟ್ಟಣ-ಗಾಂಧಿಯನೇಕೆ ಕೊಂದರು ?”

  1. ಸುಲೋಚನಾ ಮಾಲಿ ಪಾಟೀಲ

    ನಿಜ ಗಾಂಧಿಗೆ ಹೋಲಿಸಲು ಯಾರಿಂದಾಗುವದಿಲ್ಲ. ಚಂದದ ಕವನ ಸರ್.

  2. ಶಾರದಾ ಅಂಬೇಸಂಗೆ ಮುಂಬೈ

    ಸರಳ ಸಾಲುಗಳಲ್ಲಿ.. ವಾಸ್ತವದ ಕವನ

  3. ಸವಿತಾ ಬಿರಾದಾರ

    ಇದು ಕಲಿಯುಗ ಇಲ್ಲಿ ಸತ್ಯವನ್ನು ಕೊಂದರೂ ಗಾಂದಿಜಿಯವರು ಅಜರಾಮರವಾಗಿ
    ಇತಿಹಾಸದ ಪುಟಕ್ಕೆ ಸೇರಿದ್ದಾರೆ.

  4. ಸೋಮು ಪುರಾಣಿಕ ಗದಗ

    ಗಾಂಧಿಯವರನ್ನು ಕೊಂದ ನೀಚರು ಅಂಬೇಡ್ಕರ ಅವರನ್ನು ಸೋಲಿಸಿದವರು ಈಗ ದೇಶ ಆಳುತ್ತಿದ್ದಾರೆ

  5. ಚೆನ್ನಬಸಪ್ಪ ಮಹಾಜನಶೆಟ್ಟಿ

    ಸತ್ಯದ ನಿಲುವನ್ನೊಳಗೊಂಡ ಅರ್ಥಪೂರ್ಣ ಕವನ ಬರೆದು ಜನರ ಕಣ್ಣು ತೆರೆಸಿದ ಡಾ ಶಶಿಕಾಂತ ಅವರಿಗೆ ಶರಣಾರ್ಥಿಗಳು

Leave a Reply

You cannot copy content of this page

Scroll to Top