ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಸ ವರ್ಷದ ವಿಶೇಷ-2023

ಅಪರೂಪ.

ಶೋಭಾ ಹಿರೇಕೈ ಕಂಡ್ರಾ

ಸ್ವಲ್ಪ ಸೌಡಿ ಮಾಡಿಕೊಂಡು
ಬಂದು ಹೋಗಿ
ಅವರಿಗಂತೂ ದಿನವೂ ಕನಸಲಿ ಬರುವಿರಂತೆ
ಫೋನೆತ್ತಿದರೆ ಅವ್ವಳದ್ದು ಇದೇ.. ರಾಗ

ಮನೆ ಮಠ ಮರೆಸಿಯೇ ಬಿಡುವರೇನೋ
ಸಾಕಿ ಸಲಹಿದ್ದು
ಸುಳ್ಳೆಯೇ ಹಾಗಾದರೆ?
ಮಗನೊಂದಿಗೆ,
ಮೊಮ್ಮಗನನ್ನು!
ಹುಣ್ಣಿಮೆ ಅಮವಾಸ್ಯೆ ಗಾದರೂ
ಮುಖ ತೋರಿಸಿ ಹೋಗಿ
ಅತ್ತೆ ಮಾವನ ಅಲವರಿಕೆ

ಇಂದೋ…. ನಾಳೆಯೋ‌
ಯಾರಿಗೊತ್ತು
ದೇವರಾಟ!
ನೀರು ಇಳಿಯದಂತೆ ಗಂಟಲಲ್ಲಿ
ಕಾಲು ಬಾತಿದೆಯಂತೆ
ಬಹುಷ;ಡೌಟೇ
ಬರಲು ಆಗದೆ ,ಈ ಆಯ್ತಾರ ಆದರೂ ಸರಿ
ನಾದಿನಿ , ನೆಗಿಣಿಯರಿಂದ ಕರೆಯ ಮೇಲೆ ಕರೆ

ಇವತ್ತಷ್ಟೇ ಸೇರಿಸಿದ್ದಾರಂತೆ
ಎಂಟತ್ತು ದಿನ ಇರಲೇ ಬೇಕಂತೆ
ಊಟ ತಿಂಡಿ…
ಹತ್ತಿರವಲ್ಲೇ … ಸ್ವಲ್ಪ ಒಯ್ಯೇ‌‌‌
ಅಕ್ಕನ ಕಾಳಜಿ
ಆಸ್ಪತ್ರೆಗೆ ದಾಖಲಾದವರ ಬಗ್ಗೆ

ನೀನೇನೆ ಮಾರಾಯ್ತಿ
ಯಾವ ವೇದಿಕೆಯಲ್ಲೂ ಪತ್ತೆಯೇ ಇಲ್ಲಾ
ಎಲ್ಲಿ ನಾಪತ್ತೆ?
ಗೆಳತಿಯರ ಆರೋಪ

ಅಯ್ಯೋ ಮನೆ ಮಠ,
ಶಾಲೆ ಮಕ್ಳು
ಬಂಧು ಬಳಗದ ನಡುವೆ
ಏಗೋದು, ಬಾಗೋದು
ಮಾಗೋದು
ಸುಲಭದ ಮಾತೆ?.
ನನ್ನದು ಪ್ರತ್ಯಾರೋಪ.

ಹುಂ
ಹೀಗೆ ನೋಡಿ
ನಾನು ಅಪರೂಪ!
ಬಲು ಅಪರೂಪ!!


About The Author

2 thoughts on “”

  1. ನಾಗರಾಜ್ ಹರಪನಹಳ್ಳಿ

    ಲೌಲಿ ..

    ಧ್ವನಿ ಪೂರ್ಣ ಕವಿತೆ …

    ಬದುಕೇ ಕವಿತೆಯಾಗುವುದು ಹೀಗೆ..

    ಒಳದನಿಗೆ ಕವಿ ಹೃದಯ ಕಿವಿಗೊಟ್ಟು ಆಲಿಸಿದಾಗ …..

    ಅಪರೂಪಕ್ಕೆ ಬರೆದಾಗ….

Leave a Reply

You cannot copy content of this page

Scroll to Top