ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊಸ ವರ್ಷದ ವಿಶೇಷ-2023

ಜಯಂತಿ ಸುನಿಲ್

ಅವಳೆಂದರೆ

ಕಾಲವೆಂಬ ಮರದ ಕೆಳಗೆ ನಿಂತವಳ ಮೇಲೆ ಹಣ್ಣೆಲೆಯೊಂದು ಉದುರಿ ಬೀಳುವ ವೇಳೆಗೆ ಕ್ಯಾಲೆಂಡರಿನ ಅಂಕಿ ಬದಲಾಗುತ್ತದೆ..
ಹೊಸ ವರ್ಷವೆಂದು ನಾಮಾಂಕಿತವಾಗುತ್ತದೆ..

ಅದೆಷ್ಟೋ ಶಿಶಿರ ಚೈತ್ರಗಳನ್ನು ಕಂಡವಳು ಅವಳು
ಅವಳಂತೂ ಬದಲಾಗಿಲ್ಲಾ
ಅವಳ ದಿನಚರಿಯಂತೂ ಬದಲಾಗುವುದೇ ಇಲ್ಲಾ…

ಅವಳಿಗೆ ಮೈತುಂಬಾ ಮಾಸಗಳು
ಕಾಲಡಿಯಡಿ ಕಾಲಗಳು
ನಡೆದೇ ಸವೆಸುತ್ತಿದ್ದಾಳೆ ಹುಟ್ಟು ಸಾವಿನ ನಡುವಿನ ಪಯಣವನ್ನು..

ಅವಳಿಗೆ ಬದುಕೆಂದರೆ ಒಂದೇ ಬಗೆಯ ಭರವಸೆ
ನಿರಂತರವಾಗಿ ಬದಲಾಗದ ಪಂಚಭೂತಗಳನ್ನು ಮಡಿಲಲ್ಲಿ ಆಡಿಸಿದವಳು,ಕಲ್ಪನಾತೀತಳು..

ಹೇಳಿಕೊಳ್ಳುವಂತಹ ಬಯಕೆಗಳನ್ನು ಮೂಟೆ ಕಟ್ಟಿ ತನ್ನ ತನಕ್ಕೆ ರಾಜಿಯಾಗದಂತೆ
ಬದುಕಲು ಕಲಿತವಳಿಗೆ ಹೊಸತು ದಿನವೂ ನೂತನವೇ,ಕ್ಷಣವೂ ನೂತನವೇ
ಅವಳು ನಿತ್ಯನೂತನಳು..

ಅವಳ ಭಾವೋದ್ವೇಗಗಳನ್ನು ಕೆತ್ತಲು ಶಿಲ್ಪಿಯೂ ಪರದಾಡಬೇಕು…
ಅವಳ್ಯಾರು ಗೊತ್ತೇ?
ಅವಳೇ ವಾಸ್ತವ
ಅವಳಿಗೆ ಬದಲಿ ಹೆಸರಂಟೇ???


About The Author

3 thoughts on “”

  1. ನೂತನ ವರ್ಷಕ್ಕೆ ಸ್ವಾಗತ ಕೋರುವ ಹಾಗೆ ನಿಮ್ಮ ಕವನ ಹೊಸ ವರ್ಷದ ಹಾರ್ಧಿಕ ಶುಭಾಷಯಗಳು

Leave a Reply

You cannot copy content of this page

Scroll to Top