ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಸಂಗಾತಿ ಸಾಹಿತ್ಯ ಪತ್ರಿಕೆಯ ವಾರ್ಷಿಕ ವಿಶೇಷ ಬರಹ ಅಕ್ಕ ನೀ ಹೇಳೇ! ಮಹಾದೇವಿ ಕೆ.ಪಿ. ಅಕ್ಕ ನೀನೇ ಹೇಳಬೇಕುಇಹಕು ಪರಕು ಏಕನಾದಲೋಕಲೋಕ ಮೀರಿದಂತಜಗದ ಜಟ್ಟಿ ಚೆಲುವ ಚೆನ್ನನೀನೊಲಿದ ನಿನ್ನ ದೇವಎಲ್ಲಿ ಸಿಕ್ಕನೆಂದು ನಿನಗೆನನಗೂ ತಿಳಿಯಬೇಕು ಹತ್ತಿ ಇಳಿದ ಬೆಟ್ಟಗುಡ್ಡಸುತ್ತಿ ಸುಳಿದ ಗಾಳಿ ಬೆಳಕುಯಾವ ಕಟ್ಟುಪಾಡೂ ಇರದೆಹಿಂದೆ ಮುಂದೆ ಆಡಿ ನಲಿದಖಗದಮಿಗದ ಹಿಂಡಿನಲ್ಲಿಬೆಳೆದು ನಿಂತ ಕಾಡಿನಲ್ಲಿಅರಳಿ ನಗುವ ಹೂವಿನಲ್ಲಿತುಳುಕಿದಂತ ಸೊಗಸಿನಲ್ಲಿ ಎಲ್ಲಿಕಂಡನೇಳೇ ಅಕ್ಕ ನಿನ್ನ ದೇವನು ಕಾಯವೆಂಬ ಕದಳಿಯೊಳಗೆಮಾಯೆಯನ್ನು ಆಚೆ ದೂಡಿಲಿಂಗದೊಳಗೆ ಅಂಗವೆರೆದುಮನದ ಮೂಲೆಮೂಲೆಯಲ್ಲೂಅಂಗಲಾಚಿ ಬೇಡಿನಿಂತು ನಿನ್ನಜೀವ ಮಿಡಿದ ಭಾವ ಅವನತಲುಪಿತೇನೇ ನಿನ್ನ ಅರಿತನೇನೇಕಳೆದ ಮೋಹ ತಿಳಿದ ತಿಳಿವುಅಂತರಂಗ ತಳೆದ ನಿಲುವುಯಾವ ನೆಲೆಗೆ ಸಿಕ್ಕನೇಳೇ ನಿನ್ನ ಚೆನ್ನನು ಭಕ್ತಿಕಡಲ ಅಣ್ಣನೊಡನೆಶೂನ್ಯವಿಡಿದ ಪ್ರಭುವಿನೊಡನೆಕಲ್ಯಾಣದೆಲ್ಲಾ ಶರಣರೊಳಗೆನಿನಗೆ ಸಿಕ್ಕ ಹಿರಿಮೆ ಗರಿಮೆಎಲ್ಲ ತೊರೆದು ವಿರಾಗಿಯಾಗಿನಡೆದ ಬಯಲದಾರಿಯಲ್ಲಿಎಂಥಾ ಭಕ್ತಿ ಗಟ್ಟಿಚಿನ್ನ ಎಂದುಒಪ್ಪಿಕೊಂಡನೇನೆ ನಿನ್ನ ಮೆಚ್ಚಿಬಿಗಿದಪ್ಪಿಕೊಂಡನೇನೆ ಅವನುಜೊತೆಗೇ ಕರೆದೊಯ್ದನೇನೇಅಕ್ಕ ಹೇಳೆ ನನಗೂ ತಿಳಿಯಬೇಕು. ಮಹಾಧೇವಿ ಕೆ.ಪಿ.

Read Post »

You cannot copy content of this page

Scroll to Top