ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅನುವಾದ ಸಂಗಾತಿ

ಹುಟ್ಟು ಕುರುಡ.

ಇಂಗ್ಲಿಷ್ ಮೂಲ:Colley Cibber

ಭಾವಾನುವಾದ: ಆದಪ್ಪ ಹೆಂಬಾ

ಏನದು ? ಬೆಳಕು ?
ಹೇಳಿಬಿಡಿ ನಾ ಕಂಡಿರದ
ನಾನು ನೋಡಿರದ
ಬೆಳಕೆಂದರೇನು ಹೇಳಿಬಿಡಿ
ಎಂದಾದರೂ ಅದು ನನ್ನನು
ಹರಸಿದೆಯೇ ನೀವೇ ಹೇಳಿ
ನಗುತಲಿರುವ ನಾನು
ಹುಟ್ಟು ಕುರುಡ

ಬೆಳಕಿನ ಬೆರಗನ್ನು
ಬಣ್ಣಿಸುತ್ತಲೇ ಇರುವವರು ನೀವು
ಸೂರ್ಯನ ಸುಡುವ ಸದ್ಗುಣವ
ಮಾತ್ರ ಕಂಡವನು ನಾನು
ಹಗಲು-ರಾತ್ರಿಗಳಿಗೆ
ಕಾರಣನಾ ಅವನು ?
ನಾ ಕಾಣೆ ನಾನು
ಹುಟ್ಟು ಕುರುಡ

ನನ್ನ ಹಗಲು ನನ್ನದೇ
ನನ್ನ ರಾತ್ರಿ ನನ್ನದೇ
ನಗುತ ಆಡಿದೆನೋ ಹಗಲು
ಮುಗಿಲಹೊದ್ದು ಮಲಗಿದೆನೊ ರಾತ್ರಿ
ನಿಮ್ಮ ದಿನಕರನ ಗೊಡವೆ
ನನಗೇಕೆ ಬೇಕು
ನನ್ನ ಹಾದಿ ನನ್ನದು
ತಿಳಿದಂತೆ ನಡೆವ ನಾನು
ಹುಟ್ಟು ಕುರುಡ

ನಿಟ್ಟುಸಿರು ನಿಮ್ಮದು
ನನ್ನ ಕುರಿತು
ನನ್ನ ದೀನ ಊನ
ಸ್ಥಿತಿಯನ್ನು ಅರಿತು
ನೋಡುತಿರಿ
ತಾಳುವೆನು-ಬಾಳುವೆನು
ತಾಳ್ಮೆಯಿಂದಲೆ ಎಲ್ಲವನು ಗೆಲ್ಲುವೆನು
ಛಲದಂಕಮಲ್ಲ ನಾನು ಹುಟ್ಟು ಕುರುಡ

ಕಾಣಲ್ಲ ನೋವಿಲ್ಲ ನನಗೆ
ನೋವು ನುಂಗೀತದು
ನನ್ನ ಬದುಕ ಗೀತೆ
ಮನಕೆ ಮುದ ನೀಡುವ
ಮಧುರ ಭಾವಗೀತೆ
ಅದು ಕಾರಣ ನಾ ಹಾಡುತಲಿರುವೆ
ನಗುನಗುತ ನಾ ರಾಜನಂತಿರುವೆ
ಊನರ ದೊರೆ ನಾನು
ಹುಟ್ಟು ಕುರುಡ


About The Author

9 thoughts on “ಹುಟ್ಟು ಕುರುಡ.”

  1. ಅರಳಿ ನಾಗಭೂಷಣ ಗಂಗಾವತಿ

    ಜಗದಲ್ಲಿ ಸೀದಾ ಸಾದಾ ಮನುಷ್ಯ ರು
    ಕುರುಡರೆ…

Leave a Reply

You cannot copy content of this page

Scroll to Top