ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಹಾಯ್ಕುಗಳು

ಹೇಮಗಂಗಾ

  1. ಒಲವು ಎಂದೂ
    ಮುಗಿಯದ ಕುಗ್ಗದ
    ಅಕ್ಷಯಪಾತ್ರೆ
  2. ಮುಂದೆ ಸಾಗಲಿ
    ಪ್ರೀತಿಯ ಹಾಯಿದೋಣಿ
    ತಡೆ ಇಲ್ಲದೇ
  3. ದುರಂತ ಅಂತ್ಯ
    ಸುಂದರ ಆರಂಭಕ್ಕೂ
    ಇದೆ , ವಾಸ್ತವ
  4. ಮನದ ಹಾದಿ
    ಖಾಲಿಯಲ್ಲ , ನೆನಪ
    ಮೆರವಣಿಗೆ
  5. ಕಾಮ ಕಾವಿಯ
    ಧರಿಸಿದವರನ್ನೂ
    ಬಿಡದೀಗೀಗ
  6. ಅಂತರಂಗದಿ
    ಅರಿವಿನ ಬೆಳಕು
    ಆರಬಾರದು
  7. ಕಲ್ಲಾದವನ
    ಹೃದಯದಿ ಪ್ರೀತಿ ಹೂ
    ಅರಳುವುದೇ
  8. ಮೊಗೆಮೊಗೆದು
    ಕುಡಿದರೂ ಸಾಲದು
    ಪ್ರೀತಿಕ್ಷೀರವ

About The Author

Leave a Reply

You cannot copy content of this page

Scroll to Top