ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಎನ್.ಆರ್.ರೂಪಶ್ರೀ ಕವಿತೆಗಳು

ಕಾವ್ಯ ಸಂಗಾತಿ ಕನಸ ತುಂಬಿದ ಕವಿತೆ ಕನಸುಗಳು ಕವಿತೆಯಾದವುಕವಿತೆ ಕಣ್ಣಲ್ಲಿತುಂಬಿಕೊಂಡಿತು. ಆಸೆ ಅನವರತವಾಯಿತುಅಂಕುರದ ಟಿಸಿಲುಮತ್ತೆಲ್ಲೋ ಚಿಗುರಿತು. ಬಾಳು ಬಸವಳಿಯಿತುಬೆಂಕಿ ಕಡಲಂತೆತೋರಿ ತಂಪಾಯ್ತು. ಇಂದು,ನಿನ್ನೆಯಾಗಿನಾಳೆ ನೆನಪಿನರಂಗೋಲಿಯಲ್ಲಿ ಚುಕ್ಕಿಯಾಯಿತು. ಹಿಡಿದಿಡಲಾಗದ ಬೊಗಸೆತುಂತುರಾಗಿ ಹರಿಯಿತುಮುತ್ತುಗಳು ಇಬ್ಬನಿಯಂತೆ ತೇಲಿತು. ಜೀವಜಲದ ಬಿಂದುವಿನಲ್ಲಿಸಿಂಧುವಾಗಿ ಸೇರಲುಕಾಲ ತಡೆದಿದೆಹಿಡಿ ಗಾತ್ರದ ಪ್ರಾಣವೂಹೋಗಲು ಪ್ರೀತಿಯನ್ನೇ ಬಯಸಿದೆ. ತಪ್ಪುಎಲ್ಲರದ್ದಾಗಿದ್ದರೂಹೊರುವ ಹೊಣೆಒಬ್ಬರ ಮೇಲೆಕಣ್ಣೀರು ಜಾರಿದಾಗಬೀಳುವ ಹನಿ ಒಂದೇ ರೀತಿಯದ್ದು. ಬದುಕಬೇಕೆಂಬ ತುಡಿತದಹಿಂದೆತನ್ಮಯತೆ ಇದೆಹಸಿವಿನ ಹಂಬಲಕ್ಕೆ ಅಡಗಿದೆ. ಬಿಚ್ಚಿ ಬಯಲಾದಾಗಎಲ್ಲವೂಕೊನೆಗೊಳ್ಳುವ ಕವಿತೆಅಲ್ಲಿಯವರೆಗೆಅರ್ಧ ಮುಚ್ಚಿಟ್ಟ ಸತ್ಯಇರುವ ದಿನಗಳವರೆಗೂ. **************** ಬರದ ಒಡಲು ಮನಸಾರೆ ಅತ್ತು ಬಿಡುಕಣ್ಣೀರೆಲ್ಲ ಕಡಲಾಗಿ ಬರಲಿಸಾಲು ಸಾಲು ನೆನಪುಗಳುನೆಲಮುಗಿಲ ತಾಗಲಿ. ಅನಿಸಿಕೊಂಡು, ಮುನಿಸಿಕೊಂಡುಕರಗಿ, ಕರಗಿ ನೀರಾಗಿಹೊರಟಾಗ ತಾಗಿದ ಕಲೆಯಒರೆಸಿದ ಕೈಯ ಬಿಂದು. ದೂರದಲಿ ಕಾಣುವದನಿಯ ಆಲಿಸುತ್ತಾ ಹೊರಟರೆಕ್ಷಣಕ್ಷಣಕ್ಕೂಜಾರುತ್ತಲೇ ಹೋಯಿತು. ಸಿಗಲಿಲ್ಲ ;ಸಾಕಾಗಲಿಲ್ಲತೀರಲಿಲ್ಲ ;ತೀರಿಸಲಿಲ್ಲದಡ ಮುಟ್ಟುವುದಾದರೂ ಹೇಗೆ? ಬೇಗುದಿಯ ಬೇಗೆಹಾಗೆ ಇದೆಹಣತೆ ಹಚ್ಚುವ ಮೊದಲುಒಮ್ಮೆ ಕೇಳುನಿನಗೆಬಿಸಿಯಾಗಿ ಬೆಂದುಉರಿದು ಬೆಳಕ ಬೀರುವಮನಸ್ಸಿದೆಯಾ ಎಂದು. ಕಾಣಿಸಿ, ಮಣಿಸಿಮರ್ಮರಿಸಿಮರೆಯಾದ ಮಣ್ಣಿಗೆಫಲವತ್ತತೆಯ ಕಿರೀಟಹೊತ್ತುಕೊಂಡು, ಹೆತ್ತುಕೊಟ್ಟುಬರಿದಾಗಿದೆಬರದ ಒಡಲು. **** ಹೆಸರು ಎನ್.ಆರ್ .ರೂಪಶ್ರೀ, ಕವಯತ್ರಿ ಮತ್ತು ಅರ್ಥಶಾಸ್ತ್ರ ಉಪನ್ಯಾಸಕಿ,ಮೈಸೂರು.ಕಥೆ ಕವನ ಲೇಖನಗಳನ್ನು ಬರೆಯುವುದು ಹವ್ಯಾಸ. ಇದುವರೆಗೆ ಒಟ್ಟು ಆರು ಪುಸ್ತಕಗಳು ಪ್ರಕಟಗೊಂಡಿವೆ.

ಎನ್.ಆರ್.ರೂಪಶ್ರೀ ಕವಿತೆಗಳು Read Post »

ಅನುವಾದ

ಆಟ

ಮಾಸಗಳ, ಋತುಗಳ, ಸಂವತ್ಸರಗಳ ಉರುಳಿನಲ್ಲಿ ಸಿಲುಕಿ ಸವೆಯುತ್ತಾ ಹೋಗುವ ಕ್ಷಣ ಭಂಗುರ ಬದುಕನ್ನು ಸಮೃದ್ಧ ಪ್ರಕೃತಿಯ ಕೊಡುಗೆಗಳೊಂದಿಗೆ ಆಡುತ್ತಾ ಸಂತಸಮಯವಾಗಿಸಿಕೊಳ್ಳುವ ಒಳ ದನಿಯ ಕವನ ನೋಬೆಲ್ ಪ್ರಸಸ್ತಿ ವಿಜೇತ ಮೆಕ್ಸಿಕನ್ ಕವಿ ಆಕ್ಟೇವಿಯೋ ಪಾಜ್ ನ “ಗೇಮ್” . ಅನುವಾದ ಇಲ್ಲಿದೆ:

ಆಟ Read Post »

You cannot copy content of this page

Scroll to Top