ಒಂಥರಾ ಭಯ
ಕಾವ್ಯ ಸಂಗಾತಿ ಒಂಥರಾ ಭಯ ಸಂತೆಬೆನ್ನೂರು ಫೈಜ್ನಟ್ರಾಜ್ ಬೆಳೆದಷ್ಟೂ ಭಯಬಿದಿರಿಗೆಬೆತ್ತ, ಬುಟ್ಟಿ, ಕೊಳಲಾಗುವ ಹುನ್ನಾರಕೆ* ಹರಿದಷ್ಟೂ ನದಿಗೆ ಭಯಸಾಗರದಿಕಳೆದೇ ಹೋಗುವ ದುಗುಡಕೆ* ಮಣ್ಣಲಿ ಮಲಗಿದಷ್ಟೂ ಬೀಜಕ್ಕೆ ಭಯಟಿಸಿಲೊಡೆದುಮಣ್ಣ ಬಂಧ ದೂರಾದೀತೆಂದು* ನಡೆದಷ್ಟು ಆತಂಕಗುರಿ ಮುಟ್ಟಿ ಮುಂದೆಮೈಲಿಗಲ್ಲಾಗಿ ತಟಸ್ಥನಾಗೋ ತುಮುಲ* ಒಲವೂ ಅಷ್ಟೇ ಪ್ರೀತಿಸಿದಷ್ಟು ಭಯಕಳೆದುಕೊಂಡುಒಳಗೇ ಸತ್ತು ಹೋಗಬಹುದೆಂದು!

