ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜುಲ್ ಕಾಫಿಯಾ ಗಜಲ್

ಶಶಿಕಾಂತೆ

ಅವಳ ಕಾಣೋಮೊದಲೇ ಮನಸಲೇ ಆರಾಧಿಸಿ ನೀ ತಪ್ಪುಮಾಡಿದೆ ಮಿತ್ರ
ಹೃದಯದಲಿ ಅವಳೊಪ್ಪಿಗೆಯಿಲ್ಲದೆಲೇ ದೇವಿಯಾಗಿಸಿ ನೀ ತಪ್ಪುಮಾಡಿದೆ ಮಿತ್ರ

ಪ್ರೇಮ ಉದಯಿಸಲು ಕಾರಣ ಅವಳ ಅಪ್ರತಿಮ ಚೆಲುವು ಇರಬಹುದು
ಕಣ್ಣುಗಳಲಿ ನಿನಗರಿವಾಗದೆಲೇ ಬಿಂಬವಾಗಿಸಿ ನೀ ತಪ್ಪುಮಾಡಿದೆ ಮಿತ್ರ

ಕನಸಲೆಲ್ಲಾ ಅವಳೇ ತುಂಬಿಕೊಂಡರೆ ಅದು ಕಾಮವಲ್ಲದೆ ಇನ್ನೇನು
ಅವಳಿಗಾಗಿ ಹಗಲಿರುಳು ಏಕಾಂತದಲೇ ಧ್ಯಾನಿಸಿ ನೀ ತಪ್ಪುಮಾಡಿದೆ ಮಿತ್ರ

ಕಾಮನೆಯ ಕಡಲಿನ ಭೋರ್ಗರೆತ ನಿಲ್ಲಿಸಲಾಗದು ಎಂಬುದೇನೋ ಸರಿ
ಒಂಟಿಯಾಗಿ ಮನವ ಭಾವದಲೆಯಲೇ ತೇಲಾಡಿಸಿ ನೀ ತಪ್ಪುಮಾಡಿದೆ ಮಿತ್ರ

ಶಶಿಯ ತಂಬೆಲರು ಸುಖನೀಡದು ತನುವಿಗೆ ಕಾವಿನ ಬಯಕೆಯಾದಾಗ
ಸ್ವಪ್ನದಲ್ಲೂ ದೇಹವನು ಮೋಹದಲೇ ಉರುಳಾಡಿಸಿ ನೀ ತಪ್ಪುಮಾಡಿದೆ ಮಿತ್ರ

*************

About The Author

Leave a Reply

You cannot copy content of this page

Scroll to Top