ಡಾ. ನಿರ್ಮಲಾ ಬಟ್ಟಲ ಕವಿತೆಗಳು
ಡಾ. ನಿರ್ಮಲಾ ಬಟ್ಟಲ ಕವಿತೆಗಳು ಕನಸಿರದವಳು ಕನಸುಗಳಿರದವಳು ನಾನುಯಾವ ಕನಸು ಬೇಕುಎಂದು ಕೇಳಿದರೆ ಏನು ಹೇಳಲಿ….? ಕನಸೆಂದರೆ ಕಾಮನಬಿಲ್ಲುನನಗೆ ಕಂಡಷ್ಟೇ ಸುಂದರಕೈಗೆ ಸಿಗದ ಒಲವು….! ಕನಸುಗಳ ಹಿಂದೆದೂಬೆನ್ನಟ್ಟಿ ಓಡಿದವಳಲ್ಲಕಾಡಿದವಳೂ ಅಲ್ಲ….! ಕನಸಿಗೆ ಬಣ್ಣ ತುಂಬುವಕಲೆಗಾರ ಚಿತ್ರಿಸದಿರುಬಣ್ಣಗಳ ಚೌಕಟ್ಟಿನೊಳಗೆಬಯಲ ಪ್ರೀತಿಸುವವಳು ನಾನು..! ಕನಸುಗಳ ಮೀನು ಹಿಡಿವಬೆಸ್ತಗಾರ ಸಿಕ್ಕಿಸದಿರು ನನ್ನಬಲೆಯೊಳಗೆಹರಿವ ನೀರು ಸೇರುವವಳು ನಾನು..! ಕನಸಿಗೆ ರೆಕ್ಕೆ ಕಟ್ಟುವಮಾಯಗಾರಮೋಡಿಮಾಡದಿರುಮುಗಿಲೊಳಗೆನೆಲದೊಳಗೆ ಕಾಲುರಿ ನಿಂತವಳು ನಾನು….! ನನಗಾಗಿನೀನು ಹೊತ್ತು ತಂದನೂರು ಕನಸುಗಳಲಿಯಾವುದನ್ನು ಆರಿಸಲಿ….? ನೀನು ಪ್ರೀತಿಯಿಂದಕೊಟ್ಟರೆ ಯಾವುದಾದರೂ ಸರಿಇಟ್ಟು ಕೊಳ್ಳುವೆನನಸಾಗಿಸುವ ಪಣತೊಟ್ಟುಕೊಳ್ಳುವೆ…! ಕನಸು ಹೆಣೆವ ನೇಕಾರನೀ ನೇಯುವಎಳೆ ಎಳೆಯೊಳಗೆಚಂದದ ಚುಕ್ಕಿಯಾಗಿಅಂದದ ಚಿತ್ತಾರವಾಗಿನಿನ್ನ ಕನಸುಗಳಅರಸಿ ಬರುವೆ….! ಗೆಳೆಯಾ…. ಗೆಳೆಯಾ…ಹಸಿದು ಬಂದರೆ ನೀನುನನ್ನ ಬಳಿ ಇರುವುದು ಬರಿಭಾವಬುತ್ತಿ….!ಬಿಚ್ಚಿ ಕೊಡುವೆಕೈಯೊಡ್ಡು….!ತುತ್ತು ತುತ್ತನುಅದ್ದಿ ಕೊಡುವೆಸ್ನೇಹವೆಂಬ ಜೇನಲಿ….!ಸವಿಯೆ ನೀನುಸುಖಿಯು ನಾನುಮಾತೃ ಹೃದಯ ಮನದಲಿ…! ಗೆಳೆಯಾ ಬಾಯಾರಿಬಳಲಿ ಬಂದರೆ ನೀನು….ನನ್ನಲ್ಲಿದೆ ಬರೀ ಭಾವಭಾರದ ಮೋಡಬೊಗಸೆಯೊಡ್ಡು….!ಸುರಿವೆ ಪ್ರೇಮಮಳೆಬರಗಾಲದ ಬಯಲನೆಲ್ಲರಮಿಸಿ ….!ಮುತ್ತುಹನಿಗಳಲ್ಲಿ ತೊಯಿಸಿತುಂಬುವೆ ಒಡಲ ತುಂಬ ಜೀವಕಳೆ….!ತೃಪ್ತ ನೀನು ಹಗುರ ನಾನು….! ಗೆಳೆಯಾ ನೀನುದಣಿದು ವಿರಮಿಸಲೂನನ್ನಲ್ಲಿರುವುದುಭಾವ ಜೋಳಿಗೆ ….!ಹೃದಯ ಮಿಡಿತದ ಲಾಲಿಯೊಳಗೆನೆತ್ತಿಯ ಮುಂಗುರುಳಲಿಬೆರಳ ತೀಡುತ ಕನಸು ಬಿತ್ತುವೆನಾನು….!ಮುಗುಳುನಗುತ ಕನಸಲ್ಲಿತೇಲಬೇಕು ನೀನು….! ಲಿಂಗ….. ಬಹಿರಂಗದಲಿ ಗಂಡುವೇಶದೇಹದೋಷಅಂತರಂಗದೊಳೊಂದುಆವೇಶಹೊರಬರಲಾರದೆಒಳಗಿರಲಾರದೆತಲ್ಲಣದ ಸುಳಿಯೊಳಗೆವಾಂಛೆಯೊಂದು ದಿಕ್ಕು ತಪ್ಪಿತುಲಿಂಗವೆ ಕಳೆದು ಹೋಯಿತು ತಿಳಿಯಲೆಇಲ್ಲ ಹೆಣ್ಣುಗಂಡು ಲಿಂಗದಲಿಒಂದಾದ ಹರಗಂಡು ಹೆಣ್ಣಾಗಿ ಗಂಡುಮೋಹಿಸಿದ ಹರಿದ್ವಿಲಿಂಗಿಗಳಾದುದ ನೆನೆಯಬೇಕಲ್ಲ ಲಿಂಗದೊಳಗಿಷ್ಟು ಪರಿಯನಿಟ್ಟುಸುಖದತತ್ವವ ಒಳಗೆಯಿಟ್ಟುತಾರತಮ್ಯದ ಕಣ್ಣು ಕೊಟ್ಟುನೋಟ ಸರಿಯಾವುದೆಂದುತಿಳಿಯಲೆ ಇಲ್ಲ….! *******************
ಡಾ. ನಿರ್ಮಲಾ ಬಟ್ಟಲ ಕವಿತೆಗಳು Read Post »




