ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಥೆ

ಅದೊಂದಿಲ್ಲ

ಶಾಂತಿವಾಸು

Quenching Thirst Painting by Jyotika Shroff

ಮಿತಿಯಲಿ ತೋರಿಕೆಯ ಮೀಟಿ, ಅಂತರಂಗದಿ ಎಲ್ಲೆ ದಾಟಲವಣಿಸಿದೆನಲ್ಲ???
ಕೃತಕ ಭಾರ ಹೊತ್ತು ನಡೆದೆ, ಎಲ್ಲವನೆಳೆಸೆಳೆದು ಹೊಂದಿದೆನಗದೊಂದಿಲ್ಲ….

ಧನ ಬೇಡವದರ ದಾಹವಿಲ್ಲವೆನಗೆ, ಸದಾ ಧ್ಯಾನಿಪವೊಂದೇ ಗಮನದಿದ್ದೇನಲ್ಲ….
ಹೊಂದುವ ಪರಿಯೆಂತೋ? ಕಾಣೆ, ಧೀನರೂ ಹೊಂದಿದೆನಗದೊಂದಿಲ್ಲ….

ನನ್ನ ನಾನೇ ಅರಿಯಲಿರುವ ಮಾರ್ಗವೇಕೈಕ ಹಾದಿಯ ಬಚ್ಚಿಟ್ಟ, ತುಡಿತವ ಬಿಟ್ಟಿಲ್ಲ….
ಇರುವುದಕೆ ಹುಚ್ಚಾಗಿ, ಹುಚ್ಚು ಹೆಚ್ಚಾಗಿ ಅಲೆವವರು ಹೊಂದಿದೆನಗದೊಂದಿಲ್ಲ….

ಎನಗಿಲ್ಲದುದ ತೋರಬೇಕನ್ಯರಿಗೆನಿಪ ಮಾರ್ಗವೇನೆಂಬರಿವೆನಗಿಲ್ಲ….
ಸರ್ವಾಂತರ್ಯಾಮಿಯ ಮುಕ್ತಿ ಬೇಡಿ ಅವನ ಕಾಡುವ ಭಕ್ತಿಯದೊಂದೆನಗಿಲ್ಲ….

********************

About The Author

Leave a Reply

You cannot copy content of this page

Scroll to Top