ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಅಸ್ಪೃಶ್ಯರಾಗಿದ್ದೇವೆ!

ವಿಶ್ವನಾಥ ಎನ್. ನೇರಳಕಟ್ಟೆ

black and pink love me printed textile

ನಾವೆಲ್ಲರೂ ಈಗ ಸಮಾನರಾಗಿದ್ದೇವೆ
ಗತದ ವೈಭವವನು ನೆನೆದು ಮರುಕಪಡುವ ಅಸಹಾಯಕರಾಗಿದ್ದೇವೆ ಪಕ್ಕದ ಮನೆಯವರ ಕೆಮ್ಮಿಗೂ ತಲೆಕೆಡಿಸಿಕೊಳ್ಳುವಷ್ಟು ಸಂವೇದನಾಶೀಲರಾಗಿದ್ದೇವೆ!

ನಾವೆಲ್ಲರೂ ಈಗ ಸಮಾನರಾಗಿದ್ದೇವೆ
ನಾಲ್ಕು ಗೋಡೆಗಳ ನಡುವೆ ಬಂಧಿಗಳಾಗಿದ್ದೇವೆ
ನಮ್ಮ ತಪ್ಪಿಲ್ಲದೆಯೂ, ಬೇರೊಬ್ಬರ ತಪ್ಪಿಗೆ ಶಿಕ್ಷೆಯನ್ನು ಅನುಭವಿಸುವ ಬಲಿಪಶುಗಳಾಗಿದ್ದೇವೆ

ನಾವೆಲ್ಲರೂ ಈಗ ಅಲೆಮಾರಿಗಳಾಗಿದ್ದೇವೆ ಪಟ್ಟಣದಿಂದ ಹಳ್ಳಿಗೆ ಮರಳಿ ಬಂದು ಬದುಕನ್ನು ರೂಪಿಸಿಕೊಳ್ಳುವವರಾಗಿದ್ದೇವೆ
ಕಳೆದುಕೊಂಡ ಮನುಷ್ಯ ಸಂಬಂಧಗಳಿಗೆ ಮರುಜೀವ ಕೊಡುವ ದೊಡ್ಡ ಮನಸ್ಸು ಮಾಡಿದ್ದೇವೆ
ನಾವೆಲ್ಲರೂ ಈಗ ಮನುಷ್ಯರಾಗುತ್ತಿದ್ದೇವೆ!

ನಾವೆಲ್ಲರೂ ಈಗ ಸಮಾನರಾಗಿದ್ದೇವೆ ಪಕ್ಕದಲ್ಲಿರುವವರನ್ನು ಮುಟ್ಟಲು ಹೇಸುತ್ತಿದ್ದೇವೆ ಪಕ್ಕದವರಿಂದ ಮುಟ್ಟಿಸಿಕೊಳ್ಳಲು ಹೆದರುತ್ತಿದ್ದೇವೆ
ಹೌದು, ಕೊರೋನಾ ಕೊಟ್ಟ ಹೊಡೆತಕ್ಕೆ ನಾವೆಲ್ಲರೂ ಈಗ ಅಸ್ಪೃಶ್ಯರಾಗಿದ್ದೇವೆ!

*******************************************

About The Author

Leave a Reply

You cannot copy content of this page

Scroll to Top