ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕೊರೆವ ನಡುಕವಂತೆ!

ಸುವಿಧಾ ಹಡಿನಬಾಳ

person in black mask holding purple and pink smoke

ಅವನ್ಯಾವನೊ ತಲೆಕಟ್ಟ ಸ್ವಾಮಿಯಂತೆ
ಸ್ವಯಂ ಘೋಷಿತ ದೇವ ಮಾನವನಂತೆ
ಬಿತ್ತಿದ ಇವರ ತಲೆಯಲಿ ಮೌಢ್ಯದ ಕಂತೆ
ಕಲಿಯುಗದ ಅಂತ್ಯವಂತೆ ಸತ್ಯ ಯುಗದ ಆರಂಭವಂತೆ
ಅದಕೆ ಮಾಡಬೇಕು ಮಕ್ಕಳ ಬಲಿದಾನವಂತೆ

ಮುಠ್ಠಾಳ ತಾಯಿಯಿಂದಲೇ ಕುಡಿಗಳ ಕಗ್ಗೊಲೆಯಂತೆ
ಇದಕೆ ತಂದೆಯ ಮೌನ ಸಾಥ್ ಅಂತೆ
ಹೆಣಗಳ ಬಾಯಲಿ ಕಲಶ ಹೂಡಿದ್ದರಂತೆ!!
ಮರುದಿನ ಮಕ್ಕಳ ಮರುಹುಟ್ಟಿಗೆ ಕಾದರಂತೆ
ಮರಣೋತ್ತರ ಪರೀಕ್ಷೆಗೆ ಪ್ರತಿರೋಧವಂತೆ

ಆ ತಾಯಿ ಬೇರೆ ಗೋಲ್ಡ್ ಮೆಡಲಿಸ್ಟಂತೆ!!!
ಮಕ್ಕಳೂ ಡಿಗ್ರಿ ಮೆಟ್ಡಿಲೇರಿದ್ದವಂತೆ
ಪಕ್ಕಾ ಇವರೆಲ್ಲರ ತಲೆಯೆಂಬುದು ಅಜ್ಞಾನದ ಬೊಂತೆ
ಎತ್ತ ಸಾಗುತ್ತಿದೆ ವಿದ್ಯೆ ವಿಜ್ಞಾನ ಎಂಬ ಚಿಂತೆ
ಕೇಳಿದವರ ಎದೆಯಲಿ ಕೊರೆವ ನಡುಕವಂತೆ!!

***************

About The Author

5 thoughts on “ಕೊರೆವ ನಡುಕವಂತೆ!”

  1. ಶ್ರೀಕಾಂತ್ ಪಟಗಾರ

    ಒಂದೆಡೆ ಮುಗ್ಗರಿಸುವ ಆಧುನಿಕತೆ ,ವೈಜ್ಞಾನಿಕತೆ ;ಮತ್ತೆ ಕೆಲವಡೆ ಇನ್ನೂ ಅನಾಗರಿಕತೆ….
    ವಾಸ್ತವವ ,ಅಣಕಿಸಿ ಬಣ್ಣಿಸಿದೆ ಬರವಣಿಗೆ ..

Leave a Reply

You cannot copy content of this page

Scroll to Top