ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಂಕ್ರಾಂತಿ ಕಾವ್ಯ ಸುಗ್ಗಿ

ಹಳೆಮನೆ ಮತ್ತು ಗೋಡೆ ಗಡಿಯಾರ

ವಿಭಾ ಪುರೋಹಿತ

Antique Wall Clocks For Sale Modern Carved Pendulum Wood Hanging

ಮೂರ್ನಾಲ್ಕು ತಲೆಮಾರಿನವರು
ಚಿರಪರಿಚಿತರೇ,ಅನಾದಿ…..
ಅದೇ ಗೋಡೆ ಅದೇ ಜೀವ
ಅದೇ ಭಾವ ಅದೇ ಬಡಿತ
ನಿರ್ಲಿಪ್ತ….. ನಿನ್ನಾತ್ಮ ಸಾಂಗತ್ಯ….
ಇನ್ನೂ ಬಸಿರ ಬಯಕೆ ತೀರಿಲ್ಲ
ಹೆಣ್ಣೋ ಗಂಡೋ
ನೋವೋ ನಲಿವೋ ಹಡಿಯುತ್ತಲಿರುವೆ !
ವಿಧಿಯ ಕೈವಾಡಗಳು ನಿನ್ನಾಡಿಸುತ್ತವೆ
ಬಿಕ್ಕಿ ನರಳಾಡಿಸುತ್ತವೆ
ನಕ್ಕು ನಲಿಸುತ್ತವೆ
ಹಿಂಡು ಹಿಂಡಾಗಿ ಕಷ್ಟಗಳ
ಒಂದೊಂದಾಗಿ ಸುಖಗಳ
ಹೆರುತ್ತ…. ಅದೆಷ್ಟು
ಪಾಠ ಕಲಿಸಿರುವೆ !
ಸಂಯಮ ಪರೀಕ್ಷಿಸಿರುವೆ !
ದಾಯಾದಿ ಬಂಧುಗಳ ಬಿರುಕು
ಹೆಣ್ಮಕ್ಕಳ ಅಳುಕು
ದೇಶದ ವಿದ್ಯಮಾನ
ಸ್ವಾತಂತ್ರ್ಯ ಹೋರಾಟದ ಭಯಾನಕ
ವಿಕೋಪಗಳ ವಿಪತ್ತೂ ಕಂಡಿರುವೆ
ಹಾಹಾ….ಆದರೀಗ….
ಏನೂ ಗೊತ್ತಿಲ್ಲದವರಂತೆ
ಹೊಸತಲೆಮಾರಿನವರೆದಿರು
‘ ಆಂಟಿಕ್ ಪೀಸ್ ‘ ನಂತೆ .
ಹಳೇ ಟಿಕ್ ಟಿಕ್ ನಲಿ
ಹೊಸ ಕಾಳಜಿಯೊಂದು
ಮಿಡಿಯುತ್ತಿದೆ.


About The Author

Leave a Reply

You cannot copy content of this page

Scroll to Top