ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮನದ ಮಾತು

Abstract/Mirror's Edge Catalyst (1080x960) Wallpaper ID: 57587 - Mobile  Abyss

ಶಾಂತಿವಾಸು

ಮನಸನ್ನೊಂದು ಮಾತು ಕೇಳು….
ಹುಟ್ಟಿನಿಂದ ಕಲಿತು, ಸರಿತಪ್ಪುಗಳನ್ನರಿತು, ಲೋಕಾರೂಢಿಯನುಭವ ಪಡೆದರೇನು? ಕಾರ್ಯಸಿದ್ದಿಗೆ,
ಮನಸನ್ನೊಂದು ಮಾತು ಕೇಳು….

ಮನಕ್ಕೊಪ್ಪುವ ಕೆಲಸ ಮಾಡು….
ಯಾರೆಷ್ಟು ನಿಂದಿಸಲೇನು? ನಿನ್ನೆತ್ತರವನ್ಹೊಗಳಲೇನು? ತಟಸ್ಥ ಮನಕೆ ಶಕ್ತಿ ತುಂಬಿ ಆತ್ಮತೃಪ್ತಿಯಿಂದ,
ಮನಕ್ಕೊಪ್ಪುವ ಕೆಲಸ ಮಾಡು….

ಮನವನೊಮ್ಮೆ ಇಣುಕಿ ನೋಡು….
ಎಲ್ಲವೂ ನಿನದಾಗಿ ಕಂಡರೂ, ಬಂದುದು ಕೈತಪ್ಪಿ ಹೋಗಲು ನೆಪವೊಂದಿದೆಯೆಂಬ ಸತ್ಯವರಿತ,
ಮನವನೊಮ್ಮೆ ಇಣುಕಿ ನೋಡು….

ಮನಸಿಗೊಂದು ಮಾತು ಹೇಳು…
ಜಗದೆಲ್ಲವೂ ನೀನಲ್ಲ, ಜಗದಲ್ಲಿಹುದೆಲ್ಲವೂ ನಿನದಲ್ಲ. ಇರುವರರಿತು, ಬಾಳಲದುವೇ ಬದುಕೆಂದು,
ಮನಸಿಗೊಂದು ಮಾತು ಹೇಳು….

*****************************

About The Author

1 thought on ““ಶಾವಾ”ತ್ಮ ಪದಗಳು”

Leave a Reply

You cannot copy content of this page

Scroll to Top