ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಅವನು.. ಸುಜಾತ ಲಕ್ಷ್ಮೀಪುರ. ಅವನು ಸುಳಿಯುತ್ತಿಲ್ಲ.ಈ ನೀರವ ಸಂಜೆಯಲಿ..ಬರೀ ಮಂಕು ಮಗ್ಗುಲಾಗುತ್ತಿದೆಕತ್ತಲಾವರಿಸಿ ಆಗಸವೂ ಬಿಕ್ಕುತ್ತಿದೆ . ಚಿಕ್ಕಿ ಚಂದ್ರಮರೂ ನಾಪತ್ತೆಪಯಣ ಬೆಳೆಸಿರಬೇಕುಅವನ ಊರಿನ ಕಡೆಗೇ..ಕಿಟಕಿಯಾಚೆ‌ ಮಳೆಮೋಡವೂಕಣ್ಣಂಚಲಿ‌ ತೊಟ್ಟಿಕ್ಕಲುಹವಣಿಸುತಿದೆ ಅರೆಗಳಿಗೆ ಅತ್ತುಬಿಡಲು ಅವಸರಿಸಿವೆ ನಯನಗಳುತಂಗಾಳಿಯೂ ತಂಪೀಯದೆಸುಟ್ಟು ಬೂದಿಯೂ ಆಗಿಸದೆಕಿಡಿ ತಾಗಿಸಿ ಮರೆಯಲಿ ಇಣುಕಿದೆ. ನಿಟ್ಟುಸಿರ ಮೈದಡವಿಮುದ್ದು ಮಾತುಗಳಲಿ ಒಲಿಸಿಜೇನು ಸುರಿಸುವ ಕಣ್ಣಂಚಿನ ಪಿಸುಮಾತೂ ಕಾಣೆಯಾಗಿದೆ ಬರಿದೆ ಹಂಬಲಿಕೆ‌ ಚಡಪಡಿಕೆಮುಗಿಯದಾ ಕಾಲದ ಸಂಚುಸುಕ್ಕಾಗುತ್ತಿದೆ ನಿರೀಕ್ಷೆ.ಅವನು ಸುಳಿಯುತ್ತಿಲ್ಲಾ..ಬೆಳಗು ಬೈಗು ನೆನಪಿನ ಗಾಯಒಳಗೊಳಗೇ ಹಸಿರಾಡುತ್ತಿದೆ. ಬೇಸರದಿ ಆಸರೆಗೆಕತ್ತಲಲ್ಲಿ ಕೈಚಾಚಿದ್ದೇನೆಏಕಾಂತವೆಲ್ಲಾ‌ ಲೋಕಾಂತಆಗಿಸುವ ಬಯಕೆ ಅವನುಮಾಯವಾಗಿದ್ದಾನೆ *****************************

ಕಾವ್ಯಯಾನ Read Post »

ಅನುವಾದ

ಅನುವಾದ ಸಂಗಾತಿ

ಶೂರ್ಪನಖಾಯಣ ಮಲಯಾಳಂ ಮೂಲ:ರವೀಂದ್ರನ್ ಪಾಡಿ ಕನ್ನಡಕ್ಕೆ:ಚೇತನಾ ಕುಂಬ್ಳೆ ರಾತ್ರಿ ಕಂಡ ಕನಸಿನಲ್ಲಿನನ್ನ ಮುಂದಿದ್ದಳು ಶೂರ್ಪನಖಿಎಲ್ಲಿಯೂ ಸೀತೆಯನ್ನು ಕಾಣಲಿಲ್ಲಬಳಿಯಲ್ಲಿ ರಾಮನೂ ಇರಲಿಲ್ಲ ಹಲವು ದಿನಗಳಿಂದ ಆಲೋಚನೆಗಳಲ್ಲಿರಾಮ ರಾವಣ ಯುದ್ಧವೇ ತುಂಬಿತ್ತುಯಾರ ಪಕ್ಷ ಸೇರಲಿ?ಮಾನ್ಯರಲ್ಲ ಇಬ್ಬರೂ ಸೀತೆಯೊಂದಿಗೆ ನಿಂತುರಾಮನನ್ನು ದೂಷಿಸಬಹುದೇ?ವಾಲಿಯನ್ನು ವಧಿಸದೆರಾಮನ ವಿರುದ್ಧ ನಿಲ್ಲಬಹುದು ತಾಟಕಿ, ಶಂಬೂಕರುನಮ್ಮ ಪಕ್ಷ ಸೇರುವರುರಾವಣನನುಜ ವಿಭೀಷಣನನ್ನು ಅಂಕೆಯಲ್ಲಿರಿಸಬಹುದು ಹನುಮಂತನನ್ನು ಸೋಲಿಸಲುವಾಲಿಯೊಬ್ಬನೇ ಸಾಕಲ್ಲವೇಪ್ರಜೆಗಳು ಹೇಗಾದರೂ ಇರಲಿಅಮ್ಮನಿಗೆ ಕೈಯೆತ್ತುವರು ಅವರ ಮಾತನಾಲಿಸಿನಾಡಿನಲ್ಲಿ ಬದುಕಲು ಸಾಧ್ಯವೇ?ಗಾಳಿಸುದ್ದಿಯನ್ನೇ ಹಬ್ಬಿಸುವರೆಲ್ಲರೂಬೇರೇನೂ ಕೆಲಸವಿಲ್ಲವಲ್ಲ ವಾಲ್ಮೀಕಿ ಬರೆಯಲಿಅವರು ಕವಿಯಲ್ಲವೇಕವಿತೆಗಳೆಲ್ಲವೂ ಕಥೆಗಳಲ್ಲಕಥೆಗಳೆಲ್ಲವೂ ನಿಜವಲ್ಲ ರಾಮನಿಗೆ ಸೀತೆ ಏನಾಗಬೇಕೆಂದುಚಿಂತಿಸುತ್ತಲೇಜನರು ಸಮಯ ವ್ಯಯಿಸುತ್ತಾರೆಕಾಡುಗಳಲ್ಲಿ ಮತ್ತೆ ಹೂಗಳರಳುತ್ತವೆ ಬಂದುಬಿಡು ಪ್ರಾಣಸಖಿಶೂರ್ಪನಖೀ ನನ್ನೊಲವೇಲಕ್ಷ್ಮಣ ಹೋಗಲಿ ಬಿಡುನಾನಿದ್ದೇನೆ ನಿನಗೆ ****************************

ಅನುವಾದ ಸಂಗಾತಿ Read Post »

ಕಾವ್ಯಯಾನ

ಕಾವ್ಯಯಾನ

ಸಾಹಿತ್ಯದ ಒಳಸುಳಿಗಳ ಜೊತೆ ಒಂದು ಸುತ್ತು!! ಸುಜಾತಾ ಲಕ್ಮನೆ ಅರೆಚಣವೂಅತ್ತಿತ್ತ ಅಲುಗದೇಮಗ್ಗುಲಲ್ಲೇ ಕೂತು ಕಚಗುಳಿಯಿಟ್ಟು ನಗಿಸುವಮನದನ್ನೆಯಂತೆ ಇದು –“ಸಾಮಾಜಿಕ ಜಾಲತಾಣ” !ನಾವೂ ನೀವೂ ಎಲ್ಲರೂ ಜಾಲಿಯಾಗಿ ಜಾಲಾಡಿಈಜಾಡುವ ಸುಂದರ ತಾಣ!ಮೆರೆಸಬಹುದಿಲ್ಲಿಸ್ವ-ಪ್ರತಿಷ್ಠೆ, ಸ್ವ-ಪ್ರಶಂಸೆ, ಬೊಗಳೆ ಒಂದಷ್ಟು, ವೈಯಕ್ತಿಕ ಬಿನ್ನಾಣ..!ಅಷ್ಟಷ್ಟು ಸಾಧನೆ ಸನ್ಮಾನಗಳ ಲಿಸ್ಟಿನ ಅನಾವರಣ!ಹಾಗೋ ಹೀಗೋ ಗೀಚಿ, ಬೀಗಿ,, ಎದೆ ಸೆಟೆಸಿಮೈ ಮನ ಮ(ಮೆ)ರೆಯಲು ಇದೊಂದು ಚಂದದ ನಿಲ್ದಾಣ!ಬರೆದದು ಜೊಳ್ಳೋ, ಸುಳ್ಳೋ, ಕಾವ್ಯವೋ, ವಾಚ್ಯವೋ,ನಿಯಮಬದ್ಧ ಗಜ಼ಲ್ಲೋ, ಅಪಭ್ರಂಶವೋ,ಸ್ವಂತವೋ, ಸಂಗತವೋ, ಅನೂಹ್ಯವೋಒಟ್ಟಾರೆ–ದೊಪ್ಪೆಂದು ರಾಶಿ ರಾಶಿ ಸುರುವಿಸಾಕಷ್ಟು ಲೈಕ್ ಗಿಟ್ಟಿಸಿದರೆಅಲ್ಲಿಗೆ ಸಾರ್ಥಕ್ಯ ಆ ದಿನ!!“ನೀನು ನನಗೆ ಲೈಕ್ ಕೊಡು, ನಾನೂ ಕೊಡುವೆ”“ಮತ್ತೆ ನೋಡು- ವಿರುದ್ಧ ಕಮೆಂಟ್ ಮಾಡಬೇಡ” ಒಳ ಒಪ್ಪಂದ!!ತರಾತುರಿಯಲಿ ಅಂತೂ ಗೀಚಿಹೊಗಳಿಕೆಗಷ್ಟೇ ಹಾತೊರೆದುಕಸದ ತೊಪ್ಪೆಯಂತೆ ಎಲ್ಲ ತಂದು ಸುರಿದಂತೆಲ್ಲಕೆಲವಕ್ಕೆ ಲೈಕುಗಳ ಜಡಿಮಳೆ;ಇನ್ನು ಕೆಲವಕ್ಕೆ ಜಡಿದು ಜಡಿದಂತೆ ಕೊನೆಯ ಮೊಳೆ!!ಹೆಂಗಸರು ಹೆತ್ತ ಕವನಗಳಲ್ಲಿ ಮೈ ಕಾಯಿಸಿಕೊಳ್ಳುವಜೊಲ್ಲುಬುರುಕ ಪುರುಷ ಸಿಂಹಗಳು!ಇವರು ಫ್ರೀಯಾಗಿ ಕೊಡುವ ಗುಲಾಬಿ ಗುಚ್ಛ,ತುಟಿಯಂಚಲೊತ್ತಿದ ಮುತ್ತು;ಕಣ್ಣಲ್ಲೆರಡು ಲವ್ ಸಿಂಬಾಲ್ಗಳ ಇಮೋಜಿಗಳಲಿ ಕಣ್ಣರಳಿಸಿಚಪ್ಪರಿಸಿ ಬವಳಿ ಬಂದು ಕಳೆದುಹೋಗುತ್ತಾರೆಕವಯಿತ್ರಿ ಲಲನಾ ಮಣಿಗಳು!! ಕೊಂಡಾಟ ಅಟ್ಟಕ್ಕೇರಿದಂತೆಲ್ಲಾಜಿರಲೆ ಮೀಸೆಯ ಕೆಳಗಿನ ತನ್ನ ತುಟಿಗಳ ಮೇಲೆ ನಗು ತೇಲಿಸಿತನ್ನೊಳಗೇ ಖುಷಿ ಪಟ್ಟು ಬೀಗುವವನಿಗೆತಾನು ಬರೆದುದೇ ಪರಮ ಶ್ರೇಷ್ಠವೆಂಬ ಭಾವ!!ತಪ್ಪು ಒಪ್ಪುಗಳ ಪರಾಮರ್ಶೆಯ ಉಸಾಬರಿಯೇ ಸಲ್ಲದೆಂದುಆಗಸಕೆ ಮುಖ ಮಾಡಿದ ಹೆಬ್ಬೆರಳ ಚಿತ್ರ ಒತ್ತಿ ಓದುಗಜೈ ಕಾರ ಹಾಕುತ್ತಾನೆ ನೋಡ!!“ಕೇಳಿ ಕೇಳಿ” ಲೈಕ್ ಒತ್ತಿಸಿಕೊಳ್ಳುವವರ ಪರಿಪಾಟಲಂತೂ“ಅಯ್ಯೋ ಪಾಪ” ಏನಕ್ಕೂ ಬೇಡ!! ಇಲ್ಲಿ ಮಣಗಟ್ಟಲೆ ಪ್ರಶಂಸೆಗಳ ಹೊಳೆ;ನಾಲ್ಕಾರು ಡಜನ್ ದ್ವೇಷ, ಅರ್ಧ ಕೆಜಿ ಹತಾಶೆ,ಟನ್ ಗಟ್ಟಲೆ ಹೆಸರು ಮಾಡುವ ಹಪಹಪಿ;ಗ್ರಾಂಗಟ್ಟಲೆ ಕೆಸರೆರಚಾಟ,ತಮಾಷೆಯೋಪಾದಿಯಲಿ ಎದೆಗೇ ಒದೆದಂತಿರುವ ತೇಜೋವಧೆ!ಚೂರು ಪಾರು ಒಳಗೊಳಗೇ ಗುಂಪುಗಾರಿಕೆಮೀಟರ್ ಗಟ್ಟಲೆ ಸಣ್ಣತನಗಳುಲೀಟರ್ ಗಟ್ಟಲೆ ಒಳಸುಳಿಗಳು!!ಮೂಲೆ ಮೂಲೆಯಿಂದ ಹಿನ್ನೆಲೆಯಲಿ ಪಿಸುಗುಡುವ ಕಿಸುರುಮನಸಿನ ಒಳಧ್ವನಿಗಳು!!ಸಂಕಲನ ತಂದವರದೇ ಒಂದು ಪಟಾಲಂತರದೇ ಇರುವವರು ಅಕಟಕಟಾ ಅಕ್ಷರಶಃ ಅಸ್ಪೃಶ್ಯರು!!ಪ್ರಶಸ್ತಿ, ಫಲಕ, ಹಾರ ತುರಾಯಿ, ಲೋಕಾರ್ಪಣೆಯಾದ ಪುಸ್ತಕಗಳ ಲೆಕ್ಕ!ಕ್ವಾಲಿಟಿಗಿಂತ ಕ್ವಾಂಟಿಟಿಗೇ ಪ್ರಾಶಸ್ತ್ಯ!!ಪ್ರಬುದ್ಧ ನೂರು ಗಜಲ್-ಕವನ ಬರೆದವನಿಗಿಂತ ಹಾಳೋ ಮೂಳೋಸಾವಿರ ಸಾವಿರ ಬರೆದವನೇ “ಅಂತೆ” ಗ್ರೇಟು!!ಹಾಗಂತ ಸಾಹಿತ್ಯದ ಪಡಸಾಲೆಯಲಿ ನೇತುಹಾಕುವ ನೇಮ್ ಪ್ಲೇಟು!!ಆಸ್ತಿ, ಅಂತಸ್ತುಗಳ ಪಟ್ಟಿಯೂ ಅಕ್ಕ ಪಕ್ಕ!!ಸಾರಸ್ವತ ಲೋಕದ ತುಂಬ ಬರಿ ರೇಷ್ಮೆ ಶಾಲು ಹೊದ್ದ ಟೊಳ್ಳುಬರಹಗಳ ಸದ್ದು!!ಮುತ್ತು ರತ್ನದಂಥ ಸಾಹಿತ್ಯವೆಲ್ಲ ಮೂಲೆ ಸೇರಿದವೇ ಬೇಸರದಲಿ ಎದ್ದು ಬಿದ್ದು!?ಕೈ ಚೀಲ ಹಿಡಿದು ಹಲ್ಗಿಂಜಬೇಕುವೇದಿಕೆಯ ಮೇಲೂ ರಾರಾಜಿಸಲು!!“ಅಕ್ಷರ ಮಾಧ್ಯಮಗಳಲೂ” ಇಂಥದಕ್ಕೇ ಕುಮ್ಮಕ್ಕುಗೆಲ್ಲಬೇಕೇ- ಮಾಡಲೇಬೇಕು ಅಲ್ಲಿಯೂ ಗಿಮಿಕ್ಕು!! ಎಷ್ಟು ಬರೆದರೇನು ಬಿಡಿ-ಈಗ ಮಾಮರದಲ್ಲಿ ಕೋಗಿಲೆಗಳು ಕೂಗುವುದಿಲ್ಲ!!ಕಾಣಿಸದೇ…ಬೋಳು ಮರಕೆ ಜೋತು ಬೀಳುವ ಬಾವಲಿಗಳೇಮೆರೆಯುತಿವೆಯಲ್ಲ!? ***********************************

ಕಾವ್ಯಯಾನ Read Post »

ಕಥಾಗುಚ್ಛ

ಕಥಾಯಾನ

ಕನ್ನಡದ ಇಲಿ ವಸುಂಧರಾ ಕದಲೂರು ಅಮ್ಮನ ಕೈ ಹಿಡಿದು ಹಾಲಿನ ಬೂತಿನ ಬಳಿ ನಿಂತಿದ್ದ ಕಿಶೋರನಿಗೆ ಪಕ್ಕದ ಮೋರಿಯಿಂದ ಏನೋ ಚಲಿಸುತ್ತಿರುವುದು ಕಂಡಿತು.          ಅಮ್ಮನ ಕೈಯನ್ನು ಗಟ್ಟಿಯಾಗಿ ಹಿಡಿದವನೇ ಪುನಃ ಆ ಕಡೆಗೇ ನೋಡತೊಡಗಿದ. ಪುಳುಪುಳನೆ ಪುಳಕ್ಕೆಂದು ಬಿಲದಿಂದ ಹೊರಬಂದ ಇಲಿಯೊಂದು ಕಸದ ಡಬ್ಬದ  ಹೊರಗೆ ಚೆಲ್ಲಿದ್ದ ಹಾಲಿನ ಕವರ್ ಅನ್ನು ಸ್ವಲ್ಪ ಎಳೆಯಿತು.       ಬರೀ ಟಾಮ್ ಅಂಡ್ ಜರ್ರಿ ಕಾರ್ಟೂನಿನಲ್ಲಿ ಇಲಿ ನೋಡಿ ಗೊತ್ತಿದ್ದ ಕಿಶೋರ ನಿಜವಾದ ಇಲಿ ನೋಡಿ ಪುಳಕಿತನಾಗಿ ಬಿಟ್ಟ. ‘ಮಮ್ಮೀ ಸೀ… ದೇರ್ ಇಸ್ ಅ ‍ರ‍್ಯಾಟ್…!’ ಜೋರಾಗಿ ಕೈ ಜಗ್ಗಿದ.      ಕೋವಿಡ್ ನ ಸಲುವಾಗಿ ಮುಂದಿನ ವಾರ ಪೂರ  ಲಾಕ್ ಡೌನ್ ಎಂದು ಅನೌನ್ಸ್ ಮಾಡಿದ್ದರಿಂದ ಗಡಿಬಿಡಿಯಿಂದ ಮನೆಗೆ ಅಗತ್ಯದ ಸಾಮಾನು – ಸರಂಜಾಮು, ಸೊಪ್ಪು-  ತರಕಾರಿ, ಬೇಳೆ, ಮಾತ್ರೆ ಇತ್ಯಾದಿ ಇತ್ಯಾದಿ ಕೊಳ್ಳುತ್ತಾ ಗಡಿಬಿಡಿಯಿಂದ ಕೆಲಸ ಮಾಡಿಕೊಂಡಿದ್ದ ಕಿಶೋರನ ಅಮ್ಮ ಸುನಂದಾ ಹಾಲಿನ ಬೂತಿನ ಉದ್ದ ಕ್ಯೂ ನಲ್ಲಿ ನಿಂತಿದ್ದರೂ ‘ಮತ್ತೇನು ಬೇಕಿದೆ?’ ಎಂದು ಒಂದೇ ಸಮನೆ ಮನಸ್ಸಿನಲ್ಲೇ ಪ್ರಶ್ನಮ ಕೇಳಿಕೊಳ್ಳುತ್ತಿದ್ದಳು.      ಕಿಶೋರ ಕೈ ಜಗ್ಗುತ್ತಿದ್ದಂತೇ, ವಾಸ್ತವಕ್ಕೆ ಬಂದವಳೇ ‘ಏನ್ ಪುಟ್ಟಾ?’ ಎಂದು ಮಗನ ಮುಖ ನೋಡಿದಳು.      ‘ ಮಮ್ಮಾ ದೇರ್ ಇಸ್ ಅ ‍‍‍ರ‍್ಯಾಟ್! ಇಟ್ ವಾಸ್ ಸೋ ಕ್ಯೂಟ್…. !’ ಎಂದು ತಾನು ಕಂಡದ್ದು ಎಷ್ಟು ಕ್ಯೂಟ್ ಎನ್ನುವ ವಿಚಾರವನ್ನು ಕಣ್ಣಿನಲ್ಲೇ ಬಿಂಬಿಸುತ್ತಾ ಅಷ್ಟೇ ಮೋಹಕವಾದ ಉದ್ವೇಗದಿಂದ ಹೇಳಿದನು.       ಸುನಂದಾ, ‘ಎಲ್ಲಿ ಕಂಡೆ? ನನಗೂ ತೋರ್ಸು’ ಮಗನ ಉತ್ಸಾಹಕ್ಕೆ ತನ್ನ ಬೆರಗನ್ನೂ ಸೇರಿಸುತ್ತಾ ಕೇಳಿದಳು.         ‘ದೇರ್, ದೇರ್, ಇನ್ ಸೈಡ್ ದ ಹೋಲ್ ಮಮ್ಮಾ…! ವೇಯ್ಟ್ ಇಟ್ ವಿಲ್ ಕಮ್ಸ್ ಔಟ್..’ ಎಂದು ಕಸದ ಬುಟ್ಟಿಯ ಪಕ್ಕದಲ್ಲಿದ ಮೋರಿಯ ಬಳಿಯಿದ್ದ ಸಣ್ಣ ಬಿಲದತ್ತ ಕೈ ತೋರಿದ.     ಅಷ್ಟರಲ್ಲಿ ಆ ಇಲಿ ಪುನಃ ತನ್ನ ಪುಟ್ಟ ಚೂಪು ಮುಖ ಹೊರ ಮಾಡಿ ಒಂದೆರಡು ಕ್ಷಣ ಅವಲೋಕಿಸಿ ಬುಳಕ್ಕನೆ ಒಳ ಹೋಗಿ ಪುಳಕ್ಕನೆ ಹೊರಬಂದು ಯಾರೋ ಮುಕ್ಕಾಲುವಾಸಿ ತಿಂದು ಎಸೆದು ಹೋಗಿದ್ದ ಬಿಸ್ಕೆಟ್ಟಿನ ತುಂಡನ್ನು ಕಚ್ಚಿಕೊಂಡು ಬಿಲ ಸೇರಿತು. ಅದರತ್ತಲೇ ಕೈ ತೋರುತ್ತಾ.., ‘ಸೋ ಫಾಸ್ಟ್ , ಸೋ ಕ್ವಿಕ್…!!  ಹೌ ಕೆನ್ ಇಟ್ ಮೂವ್ಸ್  ಸೋ ಫಾಸ್ಟ್ ಮಮ್ಮಾ..?’ ಎಂದು ತಡೆರಹಿತನಾಗಿ ಕೇಳಿದನು.                   ಕಿಶೋರನ ಪ್ರಶ್ನೆಗಳಿಗೆ ಸುನಂದಾ ಉತ್ತರಿಸಲು ತೊಡಗಬೇಕು ಎನ್ನುವಾಗಲೇ ಅಂಗಡಿಯ ಮುಂದೆ ಸಾಮಾಜಿಕ ಅಂತರ ಕಾಪಾಡುವ ಸಲುವಾಗಿ ಬಣ್ಣದಲ್ಲಿ ಬರೆದ ಖಾಲಿ ಬಾಕ್ಸಿನಲ್ಲಿ ನಿಲ್ಲುವ ಸರದಿ ಅವಳಿಗೆ ಬಂದಿತು.         ಮಗುವಿನ ಕೈ ಹಿಡಿದು ಬಾಕ್ಸಿನೊಳಗೆ ಬಂದು ನಿಂತ ಸುನಂದಾ, ಗಲ್ಲದ ಮೇಲೆ ಜಾರಿದ್ದ ಮಗನ ಮಾಸ್ಕನ್ನು ಆತನ ಮೂಗು- ಬಾಯಿಯನ್ನು ಮುಚ್ಚುವಂತೆ ಸರಿಪಡಿಸಿದಳು.     ‘ಕಿಶೋರ್,  ನೀನು ಕೇಳೋ ಪ್ರಶ್ನೆಗೆಲ್ಲಾ ಉತ್ತರ ಹೇಳ್ತೀನಿ. ಆದ್ರೆ ನೀನು ಕನ್ನಡದಲ್ಲಿ ಮಾತನಾಡ್ಬೇಕು ಆಯ್ತಾ?’ ಎನ್ನುತ್ತಾ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ ಹೇಳು’ ಎಂದಳು.     ‘ವಾಟ್ ಇಸ್ ರ‍್ಯಾಟ್ ಇನ್ ಕನ್ನಡ?!’ ಯೋಚನೆಯಲ್ಲಿ ಮಗ್ನನಾಗಿದ್ದ ಕಿಶೋರನು ‘ಪ್ಲೀಸ್ ಯೂಸ್ ದ ಸ್ಯಾನಿಟೈಸರ್ ಬಿಫೋರ್ ಎಂಟರಿಂಗ್ ದ ಶಾಪ್ ಮ್ಯಾಡಂ’ ಎಂದು ಹೇಳಿದ ಅಂಗಡಿಯವನ ಮಾತು ಕೇಳಿ ‘ರ‍್ಯಾಟ್ ಗೆ ಕನ್ನಡದಲ್ಲಿ ಏನು ಹೇಳ್ತಾರೆ?’ ಅನ್ನೋದನ್ನು ಮರೆತು ಅಮ್ಮನನ್ನು ನೋಡಿದ.               **********

ಕಥಾಯಾನ Read Post »

ಕಾವ್ಯಯಾನ

ಕಾವ್ಯಯಾನ

ನದಿ ಈಗ ದಿಕ್ಕು ಬದಲಿಸಿದೆ ಸ್ಮಿತಾ ಅಮೃತರಾಜ್.ಸಂಪಾಜೆ. ಜುಳು ಜುಳೆಂದು ಹರಿಯುವನನ್ನೂರಿನ ತಿಳಿನೀರಿನ ನದಿಈಗ ಕೆನ್ನೀರ ಕಡಲು. ತಪ್ಪನ್ನೆಲ್ಲಾ ಒಪ್ಪಿಕೊಂಡಂತೆತೆಪ್ಪಗೆ ಹರಿಯುತ್ತಿದ್ದ ನದಿ.. ಒಣಗಿದೆದೆಯ ಮೇಲೆ ಮೊಗೆದುತಣಿಯುವಷ್ಟು ತೇವವನ್ನುನಮಗಾಗಿಯೇ ಕಾಪಿಡುತ್ತಿದ್ದ ನದಿ.. ಅಂಗಳದ ತುದಿಯವರೆಗೂ ಬಂದುಗಲಗಲಿಸಿ ನಕ್ಕು ನೇವರಿಸಿ ಹರಿಯುತ್ತಿದ್ದ ನದಿ.. ಹೌದು! ಇದುವೇ ನದಿಮೊನ್ನೆ ಹುಚ್ಚೆದ್ದು ಕೆರಳಿದ್ದಕ್ಕೆನೆಲದ ಎದೆಯೊಡೆದು ಸೆಲೆ ಸಿಡಿದುಸಾವಿರ ನದಿಯಾಗಿ ಒಸರಿ ಹರಿದವುರಕ್ತ ಕಣ್ಣೀರ ಕೋಡಿ. ದಿಕ್ಕಾಗಿದ್ದ ನದಿ ತಾನೇದಿಕ್ಕು ಬದಲಿಸಿ ಕೆಂಪಗೆ ಹರಿಯುವಾಗನಾನೋ ದಿಕ್ಕು ಕಾಣದೆ ದಿಕ್ಕೆಟ್ಟುನದಿ ಹರಿಯುವ ದಿಕ್ಕಿಗೆ ಮುಖ ಮಾಡುವುದನಿಲ್ಲಿಸಿದ್ದೇನೆ. ಈಗ ನದಿ ತಿಳಿಯಾಗಿದೆಮುಖ ನೋಡಿಕೊಳ್ಳಬಹುದು ಎನ್ನುತ್ತಾರೆಮುಖವಾಡ ಹಾಕಲು ನದಿಗೂ ಸಾಧ್ಯವಾ..?ನನಗೆ ದಿಗಿಲಾಗುತ್ತಿದೆ. ************************************

ಕಾವ್ಯಯಾನ Read Post »

ಇತರೆ

ನನ್ನಿಷ್ಟದ ಕವಿತೆ

ನನ್ನಿಷ್ಟದ ಕವಿತೆ ಮೀನಕಣ್ಣಿನ ಸೀರೆ ಲಲಿತಾ ಸಿದ್ಧಬಸವಯ್ಯಾ.               –  ಮೀನಕಣ್ಣಿನ ಸೀರೆ ಈ ಅಪರೂಪ ಸುಂದರಿಗೆ ಸೀರೆಯ ಬಗ್ಗೆ ಎಂಥ ಮುತುವರ್ಜಿ ಎಷ್ಟೇ ಆಗಲಿ ರಾಜಕುಮಾರಿ ಅವಳು ಒಮ್ಮೆ ಹಾಗೆ ಸುತ್ತಿಕೊಂಡು ಮೈಕಾಂತಿಗೆ ಸೋಕಿಸಿ ಬಿಸಾಡಿದ ಹೊಚ್ಚ ಹೊಸ ಸೀರೆಗಳನ್ನೇ ಉಟ್ಟು ಬೆಳೆದ ನೂರಾರು ದಾಸಿಯರ ನಡುವೆ ಒಡ್ಡೋಲಗ ನಡೆಸಿದವಳು ಸ್ವಯಂವರಕ್ಕೆ ಬರುವ ಮೊದಲು ಸೀರೆಗಳ ಆಯ್ದಾದು ಅದುಬೇಡಇದುಬೇಡ ಬೇಡದ ಗುಪ್ಪೆಗಳ ಬೆಟ್ಟವೇತಯಾರು ಕೊನೆಗೆ ಹತ್ತುಮಗ್ಗಗಳ ನಿಂತನಿಲುವಲ್ಲೇ ಹೂಡಿಸಿ ಅವಳ ಕಣ್ಣೆದುರಲ್ಲೇ ಅಂಚು ಸೆರಗುಗಳ ಸಂಯೋಜಿಸಿ ರಾತ್ರೋರಾತ್ರಿ ನೆಯ್ಯಿಸಿದ ಮೀನು ಕಿವುರಿಗಿಂತಲೂ ನವುರಾದ ರೇಸಿಮೆಗೆ ಮೀನ ಕಣ್ಣಂತಕುಸುರಿ ಕೆಲಸ ಉಟ್ಟು ಬಂದಳೋ ಬಂದಳೋ ಇಡೀ ಗಂಡಸಕುಲವೇ ತಿರುಗಿ ನೋಡುವಂತೆ ನಿಂದಳೋ ನಿಂದಳೋ ನಡುಬಳಕನ್ನು ಗತ್ತಲ್ಲೇ ಸ್ಥಿರಗೊಳಿಸಿ ಏಕಾಗ್ನಿಯಂತೆ ಅಂದೇ ತೀರ್ಮಾನಿಸಿಬಿಟ್ಟ ಅವನು ಇಂಥವಳನ್ನಾಳುವದು ನನ್ನಯೋಗ್ಯತೆಗೆ ಮೀರಿದ್ದು ಏನಿದ್ದರೂ ಕಾಲುಗಳ ಬಳಿ ಕುಳಿತು ಬೇಡಬಹುದಷ್ಟೇ ಅವಳಪ್ಪಣೆಯ ಅವಳೊಳು ಹೋಗಲು ಅಷ್ಟಕ್ಕೂ ಆಸ್ಪದದಕ್ಕಲಿಲ್ಲ ಅವನಿಗೆ, ಬೇಡಹೋಗಲಿ ವೀರಾಧಿ ವೀರಅವರಣ್ಣನಿಗೂ ಪಿಶಾಚನೀಚನ ನೈಚ್ಯಾನುಸಂಧಾನ ಕೊನೆಗೂ ಆಸೆ ತೀರಿಸಿಕೊಂಡಿದ್ದು ಸಭೆಯಲ್ಲಿ ಸೆರಗೆಳೆದು *********************** ಕವಿತೆಯ ಶೀರ್ಷಿಕೆಯೇ ಮೊದಲ ಸೆಳೆತ,ಲವ್ ಅಟ್ ಫಸ್ಟ ಸೈಟ್‌ಅನ್ನೋ ಹಾಗೆ. ಬಹುತೇಕಎಲ್ಲ ಹೆಣ್ಣುಮಕ್ಕಳ ಸಹಜಗುಣವೋ ಏನೋ “ಸೀರೆ”ಎಂದಾಕ್ಷಣ ಕಿವಿನಿಮಿರುವುದು,ಕಣ್ಣರಳುವದು.ಕಪಾಟಿನ ತುಂಬ ಸೀರೆಗಳಿದ್ದರೂ ಅದೇನೋ ಮೋಹ ಹೊಸ ಟ್ರೆಂಡ್ ಸೀರೆ ಬಂತೆಂದರೆ ಈ ಥರದ್ದು ನನ್ನಹತ್ರಇಲ್ಲ ,ಈ ಬಣ್ಣಕ್ಕೆ ಆ  ಬಣ್ಣದಅಂಚಿನ ಕಾಂಬಿನೇಷನ್‌ ಚೆಂದವಿದೆಯೆಂದು ಮತ್ತೆ ಕೊಂಡುಕೊಳ್ಳುತ್ತೇವೆ. ಹೀಗೆ ಅಂದುಕೊಳ್ಳುವದರಲ್ಲಿ ತಪ್ಪೇನಿಲ್ಲ ಅನಾದಿಕಾಲದಿಂದ ಇದು ನಡೆದುಬಂದಿದೆಎನ್ನುತ್ತಾರೆ ಹಿರಿಯ ಸಾಹಿತಿ ಲಲಿತಾ ಸಿದ್ಧಬಸವಯ್ಯಾ.  ಸದ್ಯ ಸೀರೆ ಆಯ್ಕೆಯಲ್ಲಾದರೂ ಇಚ್ಛೆಯಂತೆ ಆರಿಸಿಕೊಳ್ಳಬಹುದು ! ಕವಯತ್ರಿ ಲಲಿತಾ ಸಿದ್ಧಬಸವಯ್ಯಾಅವರು ಮೀನಕಣ್ಣಿನ ಸೀರೆಯ ಮೂಲಕ ಅದ್ಭುತವಾಗಿ ಸ್ತಿç ಸಂವೇದನೆಯನ್ನು ಹಿಡಿದಿಟ್ಟಿದ್ದಾರೆ. ಮೀನ ಕಣ್ಣುಅನ್ನುವ ಶಬ್ದ ತುಂಬ ವಿಶೇಷವಾಗಿ ಅರ್ಥೈಸುತ್ತದೆ. ಜೀವಶಾಸ್ತ್ರೀಯವಾಗಿ ಮನುಷ್ಯನಿಗಿಂತಲೂ ಮೀನು ಕೆಳಮಟ್ಟದ ಪ್ರಾಣಿ, ವಿಸ್ಮಯವೇನೆಂದರೆ ಮೀನಿನ ಕಣ್ಣು ಮನುಷ್ಯನಷ್ಟೇಅಥವಾ ಮನುಷ್ಯನಿಗಿಂತ ಹೆಚ್ಚು ಬೆಳವಣಿಗೆ ಹೊಂದಿದೆಯೆನ್ನಬಹುದು. ಮೀನು ಸದಾ ನೀರಿನಲ್ಲಿರುವ ಪ್ರಾಣಿ. ನಿರಂತರವಾಗಿಅದಕ್ಕೆಆಪತ್ತುತಪ್ಪಿದ್ದಲ್ಲ. ಸುತ್ತಲಿರುವ ವೈರಿಗಳಿಂದ ತನ್ನನ್ನುತಾನು ಕಾಪಾಡಿಕೊಳ್ಳಬೇಕಾಗುವದು ಎಂಬ ಮುನ್ಸೂಚನೆಯ ಸಂಕೇತವೂ ಕವಯಿತ್ರಿಯ ಮನದಲ್ಲಿರಬಹುದು. ಮೀನ ಕಣ್ಣಿನರಚನೆ ಅಕ್ಷರಶಃ ದೂರದರ್ಶಕಅಂದರೆ  ಬೈನಾಕ್ಯುಲರ್‌ತರಹವೇಇದೆ. ಇನ್ನೂ ಒಂದು ಅಡಕವಾಗಿದೆ. ವೈಜ್ಞಾನಿಕ ಮೂಲಗಳ ಪ್ರಕಾರ ಮೀನಕಣ್ಣಿನ ರೆಟಿನಾ ಭಾಗಕ್ಕೆಏನಾದರೂ ಆಘಾತವಾದರೆ ಅದುತನ್ನಷ್ಟಕ್ಕೆತಾನೆ ಗಾಯವನ್ನು ಸರಿಪಡಿಸಿಕೊಳ್ಳುವ ತಂತ್ರೌಷಧಗುಣವಿದೆ. ಈ ಒಳಮರ್ಮವನ್ನು ಯೋಚಿಸಿಯೇ ನಮ್ಮ ಕವಿಯಿತ್ರಿ  ಮೀನಕಣ್ಣನ್ನೇರೂಪಕವಾಗಿ ಬಳಸಿಕೊಂಡಿದ್ದಾರೆ ಎಂದೆಣಿಸಬಹುದು.             ಮುಂದೆಕವನದ ಸಾಲುಗಳನ್ನು ಓದುತ್ತಾ,ಕವಯತ್ರಿಇಲ್ಲಿ ಉಪಯೋಗಿಸಿದ ಕೆಲವು ಶಬ್ದಗಳು ನಮ್ಮನ್ನುಆಕರ್ಷಿಸುತ್ತವೆ ಅವುಗಳೆಂದರೆ ಮುತುವರ್ಜಿ,ಒಡ್ಡೋಲಗ,ಏಕಾಗ್ನಿ….. ಮುಂತಾದವು. ಭೂಲೋಕದಅಪ್ರತಿಮ ಸುಂದರಿಯಂದೇ ಕರೆಯಲ್ಪಡುತ್ತಿದ್ದ ದ್ರೌಪದಿಯ ಸ್ವಯಂವರದ ಪೂರ್ವಸಿದ್ಧತೆಯನ್ನು ಅತ್ಯಂತ ಸೊಗಸಾಗಿ ಹಾಗೂ ರಾಜಕುಮಾರಿಯ ಅದೇ ಗತ್ತುಗಾಂಭೀರ‍್ಯ ಭಾಸವಾಗುವಂತೆ ಬಣ್ಣಿಸಿದ್ದಾರೆ.ಇಡೀ ಗಂಡಸುಕುಲವೇ ಮಾರುಹೋಗುವಂಥ ಸೃಷ್ಟಿಸೌಂದರ‍್ಯವೇ ಅವಳಲ್ಲಿತ್ತು ಎಂದು ಹೊಗಳುತ್ತಾ  ನಂತರದ ಸಾಲುಗಳಲ್ಲಿ ದುಶ್ಯಾಸನನ ಮನದ ಭಾವನೆಗಳೂ ಮಾತಾಡಿವೆ. ಸ್ವಯಂವರದಲ್ಲಿ ಇವಳ ರೂಪರಾಶಿಗೆ ಮನಸೋತ ದುಶ್ಯಾಸನ ತಾನು ದ್ರೌಪದಿಗೆ ತಕ್ಕವನಲ್ಲ, ಏನಿದ್ದರೂ ಅವಳ ಕಾಲಬಳಿಯೇ ತನ್ನಜಾಗಎನ್ನುತ್ತದೆ ಅವನ ಸ್ವಗತ. ಹೋಗಲಿ ತನ್ನಣ್ಣನಿಗೂ ದ್ರೌಪದಿ ದಕ್ಕುವದು ಅಸಾಧ್ಯವೆಂದೆನಿಸುತ್ತದೆ. ಮನದೊಳಗಣ ನೀಚ ತಮಸ್ಸು ಆ ಸೌಂದರ‍್ಯವನ್ನುಒಮ್ಮೆ ಮುಟ್ಟಬೇಕೆಂಬ ಉತ್ಕಟತೆಯೊಂದಿಗೆ ಉಳಿದುಬಿಟ್ಟಿರುತ್ತದೆ. ಹಾಗಾಗಿ ಕೊನೆಗೆ ಸಭೆಯಲ್ಲಿ ಸೆರಗಿಗೆ ಕೈಹಾಕುತ್ತಾನೆ ಎಂಬುದಾಗಿ ದುಶ್ಯಾಸನನ ಸ್ವಗತವನ್ನು ಚಿತ್ರಿಸಿದ್ದಾರೆ. ಇದಿಷ್ಟು ಕವಿತೆಯ ಹೊರಮೈಯೆಂದಾದರೆ …….. ಇನ್ನುಕವಿತೆಯಆಂತರ್ಯಕ್ಕೆಇಣುಕೋಣ,             ಇಲ್ಲಿದ್ರೌಪದಿ ಇಡೀ ಸ್ತಿçಸಂಕುಲವನ್ನೇ ಪ್ರತಿನಿಧಿಸುತ್ತಾಳೆ. ಸಾಮಾನ್ಯವಾಗಿ ಹೆಣ್ಣಿನ ಅಳಲು,ನೋವು,ತೊಳಲಾಟದ ಕುರಿತಾಗಿ ಬರೆದಿರುತ್ತಾರೆ,ಆದರೆಇಲ್ಲಿ ಹೆಣ್ಣಿನ ಆಯ್ಕೆ ಕುರಿತಾಗಿ ಮಾತನಾಡಿದ್ದಾರೆ. ಸೀರೆ ಆಯ್ದುಕೊಳ್ಳುವ ಸ್ವಾತಂತ್ರವನ್ನು ಸಂಭ್ರಮಿಸುತ್ತಿರುವ ಚಿತ್ರಣವಿದೆ. ಇದರಲ್ಲಿನ ಧ್ವನಿ ವಿಶೇಷವೆನಿಸುತ್ತದೆ. ಕವಯಿತ್ರಿಯ ವಿಭಿನ್ನ ವಿಚಾರಲಹರಿಯು ಈ ಕವಿತೆಗೆ ವಿಶಿಷ್ಟತೆಯನ್ನು ತಂದುಕೊಟ್ಟಿದೆ. ಮುಂದೆ ಸ್ವಯಂವರದಲ್ಲಿಯೂ ಈ ಹಕ್ಕು ಅವಳಿಗಿದೆಯೆಂದು ಸೂಚನೆ ಕಾಣುತ್ತದೆ.  ಮೀನಕಣ್ಣುಎಂದಿದ್ದಾರೆ,ನವಿಲು,ನರಿ.ಕುದುರೆಅಥವಾ ಹಕ್ಕಿ,ಹುಲಿಗಳಕಣ್ಣು ಎನ್ನಬಹುದಿತ್ತು ಎಂಬ ಪ್ರಶ್ನೆಕಾಡುತ್ತದೆ, ಅಂತೇಯೇ ಮೀನಕಣ್ಣಿನ ವೈಜ್ಞಾನಿಕ ಸಂರಚನೆಯ ಸತ್ಯಾಸತ್ಯತೆಯು ಅವಳ ಬದುಕಿನಂತೆ ಬೆರಗುಗೊಳಿಸುವಂಥದ್ದು.ಮೀನ ಕಿವಿರುಗಳಿಗಿಂತ ನವಿರಾದರೇಷಿಮೆ ಎಂದು ವರ್ಣಿಸುವಾಗ ಸುಕೋಮಲೆ ಮೃದುಭಾವದ ಹೆಣ್ಣು ಭವಿಷ್ಯದಲ್ಲಿಎದುರಾಗಲಿರುವ ಭೀಕರ ಕಠೋರಗಳನ್ನೂ ದಾಟಬಲ್ಲಳು. ದ್ರೌಪದಿಯು ಮುಂದೆ ನಡೆಯಲಿರುವಯುದ್ಧಕ್ಕೆ ಸನ್ನದ್ಧಳಾಗುವ ದೂರದೃಷ್ಟಿ ಹೊಂದಿದವಳಾಗಿದ್ದಳೆಂದು ಸೂಚ್ಯವಾಗಿ ಹೇಳುತ್ತಿದ್ದಾರೆ ಲೇಖಕಿ. ಹೆಜ್ಜೆ ಹೆಜ್ಜೆಗೂ ಅವಳು ಸಂಕಟವನ್ನುಭವಿಸಲಿದ್ದಾಳೆ,ಆದ್ದರಿಂದ ಅವಳು ಮೈಯಲ್ಲಾಕಣ್ಣಾಗಿರಬೇಕೆಂಬುದರಉದ್ದೇಶವೂ ಬಿಂಬಿತವಾಗುತ್ತದೆ, ಅರ್ಥಾಥ ಮೀನಕಣ್ಣು ಬಹಿರಂಗವಾಗಿ ಸೀರೆ ಮೇಲಿನ ಆಕೃತಿ ಮಾತ್ರವಲ್ಲ, ಸದಾ ಅಂತರಂಗದ ಒಳಗಣ್ಣು ತೆರೆದು ಸುತ್ತಲು ನಡೆಯುತ್ತಿರುವದನ್ನು ಬಹು ಎಚ್ಚರದಿಂದ ಗಮನಿಸಬೇಕೆಂಬ ಮುನ್ಸೂಚನೆ ನೀಡುತ್ತದೆ.ದುಶ್ಯಾಸನನಂತ ನೀಚರು ಮನೆಯ ಒಳಗೂ ಮನೆಯ ಹೊರಗೂಎಲ್ಲಿಯೂಇರಬಹುದು.ಅದಕ್ಕಾಗಿ ಹೆಣ್ಣು ಸದಾಕಾಲ ಜಾಗೃತರಾಗಿರಬೇಕೆಂಬ ಸಂದೇಶವನ್ನೂಕೂಡಾ ಸಾರುವದರಿಂದ ಈ ಕವಿತೆ ಇಂದಿಗೂ ಪ್ರಸ್ತುತವೆನಿಸುತ್ತದೆ. ************************* ವಿಭಾ ಪುರೋಹಿತ್

ನನ್ನಿಷ್ಟದ ಕವಿತೆ Read Post »

ಕಾವ್ಯಯಾನ

ಕಾವ್ಯಯಾನ

ನಂದಿನಿ ಹೆದ್ದುರ್ಗರವರ ಕವಿತೆ ಅವನ ಅದ್ದಿ ಬರೆದ ಪದ್ಯಗಳುಈಗಲೂ ಹೊಸದಾಗಿಯೇ ಇವೆ… ನಾಜೂಕು ಅಕ್ಷರಗಳ ನೇವರಿಸಿಒಳಗೊಳ್ಳುತ್ತೇನೆ ಹೊಸದೆಂಬಂತೆಪ್ರತಿ ಬಾರಿಯೂ… ತೆರೆದ ಬಾಗಿಲಿನ ಪಂಜರದಿಂದಹಾರಿ ಹೋದ ಹಕ್ಕಿಯೊಂದುಇಳಿಸಂಜೆಗೆ ಮರಳಿದಿನದ ಕಥೆ ಹೇಳುತ್ತದೆ. ಕೆಲವು ಹಳತುಗಳುಹೊಸತಾಗಬಹುದೆಂಬ ಪುಳಕಉಳಿದೇಹೋಗಿದೆ ಇಲ್ಲಿ…! ಹೊಳಪು ಮತ್ತು ಬೆಳಕುಬಚ್ಚಿಡುವುದೂ ಎಂಥಹರಸಾಹಸ ಪ್ರಭುವೇ…!!! ****************

ಕಾವ್ಯಯಾನ Read Post »

ಕಥಾಗುಚ್ಛ

ಕೊರೊನಾ ಮತ್ತು ಕಲಾವಿದೆ ಬೇಗಂ…

ಕಥೆ ಕೊರೊನಾ ಮತ್ತು ಕಲಾವಿದೆ ಬೇಗಂ… ಮಲ್ಲಿಕಾರ್ಜುನ ಕಡಕೋಳ ಕೈ ಕಾಲುಗಳಲ್ಲಿ ಥರ್ಕೀ ಹುಟ್ಟಿದಂಗಾಗಿ ನಡುಗ ತೊಡಗಿದವು. ಮೈಯೆಲ್ಲ ಜಲ ಜಲ ಬೆವೆತು ಹೋಯ್ತು. ಎದೆಗುಂಡಿಗೆ ಹಿಂಡಿದಂಗಾಯ್ತು. ಎದ್ದು ಹೋಗಿ ನೀರಿನ ತಂಬಿಗೆ ತುಂಬಿಕೊಳ್ಳಬೇಕೆಂದು ರಗಡ ಪ್ರಯತ್ನ ಮಾಡಿದರೂ ಎದ್ದೇಳಲು ಸಾಧ್ಯವಾಗಲಿಲ್ಲ. ಯಾರಿಗಾದರೂ ಫೋನ್ ಮಾಡಬೇಕೆಂದ್ರೆ ಅವಳ ಡಬ್ಬಾ ಫೋನಲ್ಲಿ ದುಡ್ಡಿಲ್ಲ. ಎರಡು ತಿಂಗಳಿಂದ ಅದು ಬರೀ ಇನ್ಕಮಿಂಗ್ ಸೆಟ್ ಆಗಿತ್ತು. ” ದೈವಹೀನರಿಗೆ ದೇವರೇಗತಿ ” ಎಂಬ ಸಾಳುಂಕೆ ಕವಿಗಳ ನಾಟಕವೊಂದರ ಡೈಲಾಗ್ ನೆನಪಾಗಿ, ದೇವರನ್ನೇ ನೆನೆಯುತ್ತ ಹೋಳುಮೈಯಲ್ಲಿ ಮಲಗಿದ್ದ ಸ್ಥಿತಿಯಲ್ಲಿಯೇ ಅಲ್ಲಾಡದಂತೆ ಮಲಗಿದಳು ಚಾಂದಬೇಗಂ. ಮನುಷ್ಯರ ಬದುಕಿನ ಏನೆಲ್ಲವನ್ನೂ ಕಸಗೊಂಡು ಮೂರಾಬಟ್ಟೆ ಮಾಡುವ ಕರಾಳ ಕೊರೊನಾ ಉಪಟಳ ಕೇಳಿ, ಕೇಳಿ ಎದೆಝಲ್ ಎನಿಸಿಕೊಂಡಿದ್ದಳು. ಜೀವ ಕಾಠರಸಿ ಹೋಗಿತ್ತು. ನಿತ್ಯವೂ ಉಪವಾಸ, ವನವಾಸದಿಂದ ನೆಳ್ಳಿ ನೆಳ್ಳಿ ಸಾಯುವ ಬದಲು ಕೊರೊನಾ ಬಂದು ಪಟಕ್ಕಂತ ತನ್ನ ಪ್ರಾಣ ಕಸಗೊಂಡು ಹೋದರೆ ಸಾಕೆಂಬ ಕಠಿಣ ನಿರ್ಧಾರಕ್ಕೆ ಬಂದಿದ್ದಳು. ಹೀಂಗೆ ಎರಡು ತಿಂಗಳಕಾಲ ಆಕೆ ಒಂಟಿಯಾಗಿ ಮನೆಯಲ್ಲೇ ಇರುವಾಗ ಕೊರೊನಾ ಬರುವುದಾದರೂ ಹೇಗೆ.? ಇದೀಗ ತನಗೆ ಆಗುತ್ತಿರುವ ಹೃದಯ ಸಂಬಂಧಿ ದೈಹಿಕ ವೈಪರೀತ್ಯ ಕುರಿತು ಎಳ್ಳರ್ಧ ಕಾಳಿನಷ್ಟೂ ತಿಳಿವಳಿಕೆ ಅವಳದಲ್ಲ. ಜನಸಂಪರ್ಕವಿಲ್ಲದೇ ಹೀಗೆ ವಾರಗಟ್ಟಲೇ ಮನೆಯಲ್ಲಿ ಏಕಾಂಗಿಯಾಗಿ ನರಳುತ್ತಿರುವ ಆಕೆಗೆ ಹೊಟ್ಟೆತುಂಬಾ ಉಂಡ ನೆನಪಿಲ್ಲ. ಮಾರಿಕಾಂಬೆ ಜಾತ್ರೆ ಕ್ಯಾಂಪಿನ ನಾಟಕ ಶುರುವಾಗಿ ನಾಲ್ಕನೇ ದಿನಕ್ಕೆ ” ಕಂಪನಿ ಬಂದ್ “ಮಾಡಬೇಕೆಂಬ ಕೊರೊನಾ ಮಾರಿಯ ಲಾಕ್ ಡೌನ್ ಆರ್ಡರ್ ಬಂತು. ” ನೀವೆಲ್ಲ ನಿಮ್ನಿಮ್ಮ ಊರಿಗೆ ಹೋಗ್ರೀ ನಾಟ್ಕ ಚಾಲೂ ಆಗೋ ಮುಂದ ಹೇಳಿ ಕಳಿಸ್ತೀವಂತ ” ಜಂಭಯ್ಯ ಮಾಲೀಕರು ಮುಖದ ಮಾಸ್ಕ್ ಸರಿಸಿ, ಒಂದೇ ಉಸುರಲ್ಲಿ ಆದೇಶ ಹೊರಡಿಸಿ ಕಾರುಗಾಡಿಹತ್ತಿ ಹೊಂಟುಹೋದರು. ಲೈಟಿಂಗ್ ಹುಡುಗ ಸಾಜಿದ್ ಹತ್ತಿರ ಬಸ್ ಚಾರ್ಜ್ ಇಸ್ಗೊಂಡು ಊರಿಗೆ ಬಂದಳು ಬೇಗಮ್. ಹೌದು ನಾಟಕ ಕಂಪನಿ ಮಾಲೀಕರ ಬಳಿ ಮನವಿಮಾಡಿ ಹಣ ಪಡೆಯಲು ತಾನೇನು ಹೀರೊಯಿನ್, ಇಲ್ಲವೇ ಹಾಸ್ಯ ಕಲಾವಿದೆ ಅಲ್ಲವಲ್ಲ, ಎಂದು ತನ್ನೊಳಗೆ ತಾನೇ ಮಾತಾಡಿ ಕೊಂಡಳು. ಅಷ್ಟಕ್ಕೂ ವಯಸ್ಸಿನಲ್ಲಿ ತನಗಿಂತಲೂ ಚಿಕ್ಕವರಾದ ಕಂಪನಿ ಮಾಲೀಕ ಜಂಭಯ್ಯ, ಕಲಾವಿದರಿಂದ ಯಾವತ್ತೂ ಅಂತರ ಕಾಪಾಡಿಕೊಳ್ಳುತ್ತಿದ್ದರು. ಮಾಲೀಕರ ಹತ್ತಿರ ಸಲುಗೆಯಿಂದ ಮಾತಾಡುವ ಧೈರ್ಯ, ಕಂಪನಿ ಮ್ಯಾನೇಜರ್ ಯಡ್ರಾಮಿ ಮಲಕಣ್ಣರಿಗೆ ಮಾತ್ರ. ಅರವತ್ತರ ಆಸುಪಾಸಿನಲ್ಲಿರುವ ಚಾಂದಬೇಗಂ, ತಾಯಿ ಪಾತ್ರಕ್ಕೆ ಹೇಳಿ ಮಾಡಿಸಿದ ಕಲಾವಿದೆ. ಅದರಲ್ಲೂ ಕೌಟುಂಬಿಕ ನಾಟಕಗಳ ದುಃಖದ ಪಾತ್ರಗಳೆಂದರೆ ಆಕೆಗೆ ಖಂಡುಗ ಖುಷಿ. ಭಲೇ, ಭಲೇ ಕಟುಕರ ಕರುಳು ಚುರುಕೆನಿಸಿ ಕಣ್ಣೀರು ತರಿಸುವ ಅಭಿಜಾತ ಅಭಿನೇತ್ರಿ. ಹರೆಯದಲ್ಲಿ ಆಕೆ ಮಾಡಿದ ಹಿರೋಯಿನ್ ಪಾತ್ರ ನೋಡಿದವರಲ್ಲಿ ಇವತ್ತಿಗೂ ನೆನಪಿನ ಮಹಾಪುಳಕ. ಅಭಿಮಾನಿಗಳು ಆಕೆಯನ್ನು “ಚಾಂದನಿ” ಅಂತಲೇ ಕರೀತಿದ್ರು. ಹತ್ತಾರು ಟೀವಿ ಧಾರಾವಾಹಿಗಳಲ್ಲಿ, ಶತ ದಿನೋತ್ಸವ ಕಂಡ ನಾಕೈದು ಸಿನೆಮಾಗಳಲ್ಲೂ ಆಕೆಗೆ ಉತ್ತಮ ಅವಕಾಶಗಳೇ ಸಿಕ್ಕಿದ್ದವು. ದೂರದ ಬೆಂಗಳೂರಿನ ಟೀವಿ, ಸಿನೆಮಾ ಲೋಕದಿಂದ ಕೈತುಂಬಾ ರೊಕ್ಕ ಸಿಗಲಿಲ್ಲ. ಆದರೆ ಸಾರ್ವಜನಿಕವಾಗಿ ಆಕೆಗೆ ದೊಡ್ಡ ಹೆಸರು ಮಾತ್ರ ಸಿಕ್ಕಿತ್ತು. ಆ ಹೆಸರಿನಿಂದಾಗಿಯೇ ನಾಟಕ ಕಂಪನಿಗಳಲ್ಲಿ ಆಕೆಗೆ ಹೆಚ್ಚು ಅವಕಾಶ. ಟೀವಿ, ಸಿನೆಮಾ ತಾರೆಯೆಂಬ ಹೆಗ್ಗಳಿಕೆ ಕಂಪನಿ ಮಾಲೀಕರಿಗೆ ಮತ್ತು ಪ್ರೇಕ್ಷಕರಿಗೆ. ಅವಳ ಪತಿ ಕುಮಾರಣ್ಣ ಸಹಿತ ಹೆಸರಾಂತ ರಂಗನಟ. ಆತ ಕುಡಿದು, ಕುಡಿದು, ಕುಡಿದೇ ಪ್ರಾಣ ಬಿಟ್ಟಿದ್ದ. ಸಾಯುವ ದಿನವೂ ಕುಮಾರಣ್ಣ ಸೊಗಸಾಗಿ ವಿಲನ್ ರೋಲ್ ಮಾಡಿದ್ದ. ಇನ್ನೇನು ಊಟಕ್ಕೆ ಕುಳಿತು ಕೊಳ್ಳಬೇಕೆನ್ನುವಾಗ ಎದೆಗುಂಡಿಗೆ ಹಿಂಡಿ, ಜಲಜಲ ಬೆವೆತು ಹೃದಯಾಘಾತದಿಂದ ಒಂದೇ ಏಟಿಗೆ ತೀರಿಹೋಗಿದ್ದ. ಸಾಯುವ ಮುನ್ನ ಅವನು ಮಾಲೀಕರಲ್ಲಿ…” ನನ್ನ ಬೇಗಮ್ ಬದುಕಿರೋವರೆಗೂ ಪಾತ್ರ ಮಾಡ್ತಾಳೆ. ಕಂಪ್ನಿ ಬಿಡಿಸಬೇಡಿರೆಂದು ” ಅಂಗಲಾಚಿ ಬೇಡಿಕೊಂಡಿದ್ದ. ಹೆಂಡತಿಯ ತೊಡೆಯ ಮೇಲೆ ಪ್ರಾಣ ಬಿಟ್ಟಾಗ ಬೇಗಮ್ ಬಿಕ್ಕಿ ಬಿಕ್ಕಿ ಅಳುತ್ತಿದ್ದುದು ಕಂಡವರಿಗೆಲ್ಲ ಕರುಳು ಚುರುಕ್ಕೆಂದು ” ಪಾಪ ಇಬ್ಬರದು ಜಾತಿ ಬ್ಯಾರೇ ಬ್ಯಾರೇ ಆಗಿದ್ರು ಕುಮಾರಣ್ಣ ಪುಣ್ಯಮಾಡಿದ್ದ ಹಂಗ ನೋಡಕೊಂಡಳು ” ಅಂತ ಕಂಪನಿ ಕಲಾವಿದರೆಲ್ಲರೂ ಕಣ್ಣೀರು ಸುರಿಸಿದ್ರು. ಶಹರ ಮಾತ್ರವಲ್ಲ ದೇಶದ ತುಂಬೆಲ್ಲ ಲಾಕ್ಡೌನ್ ಘೋಷಣೆ ಆದಮೇಲಂತೂ ಬೇಗಮ್ಮಳದು ತುಂಬಾನೇ ಸಂಕಟದ ಬದುಕು. ವಾರವೊಪ್ಪತ್ತು ಅಕ್ಕಪಕ್ಕದವರು ನೆರವಾದರು. ಆಮೇಲೆ ಎದುರಾದುದು ಅವಳ ಕಣ್ಣೀರೂ ಬತ್ತಿ ಹೋಗುವಂಥ ಸಂಕಷ್ಟಗಳು. ಯಾವ ನಾಟಕದಲ್ಲೂ ಕಂಡೂ ಕೇಳರಿಯದ, ಯಾವ ಕವಿಕಲ್ಪನೆಗೂ ನಿಲುಕದ, ಊಹಿಸಲೂ ಸಾಧ್ಯವಾಗದ ನರಕಯಾತನೆ. ದೇವರುಕೊಟ್ಟ ಗಾಳಿ, ನಗರಸಭೆಯವರು ಬಿಡುತ್ತಿದ್ದ ಕೊಳಾಯಿ ನೀರೇ ಅವಳ ಪಾಲಿಗೆ ಅನ್ನ ಆಹಾರ ಏನೆಲ್ಲ ಆಗಿತ್ತು. ಮನೆ ಹೊರಗಡೆ ಹೋಗುವಂತಿಲ್ಲ. ಎಷ್ಟು ದಿನಾಂತ ನೀರು ಕುಡಿದು ಬದುಕಲು ಸಾಧ್ಯ.? ಬೀಪಿ, ಸಕ್ಕರೆ ಕಾಯಿಲೆಗೆ ಅವಳು ಸೇವಿಸುತ್ತಿದ್ದ ಗುಳಿಗೆಗಳು ಮುಗಿದು ತಿಂಗಳು ಮೇಲಾಯ್ತು. ಗುಳಿಗೆಗಳಿದ್ದರೂ ಉಪವಾಸದ ಖಾಲಿ ಹೊಟ್ಟೆಯಲ್ಲಿ ಗುಳಿಗೆ ನುಂಗುವುದು ದುಃಸಾಧ್ಯ. ಹೀಗೇ ಉಪವಾಸದಿಂದ ತಾನು ಸತ್ತು ಹೋಗುವುದು ಖಚಿತವೆಂದು, ಗಂಡನನ್ನು ಮನದಲ್ಲೇ ಮತ್ತೆ, ಮತ್ತೆ ನೆನೆದು ಕೊಂಡಳು. ಇದ್ದಕ್ಕಿದ್ದಂತೆ ರಾತ್ರಿ ಅವಳ ಫೋನ್ ರಿಂಗಾಯ್ತು. ಸಾವಿನ ಅಂಚಿನಲ್ಲಿರುವ ತನಗ್ಯಾರು ಫೋನ್ ಮಾಡ್ತಾರೆ ಅದು ಮೊಬೈಲ್ ಕಂಪನಿ ಕಾಲ್ ಇರಬಹುದೆಂದು ನಿರಾಸೆಯಿಂದ ಬೇಗ ಎತ್ತಿಕೊಳ್ಳಲಿಲ್ಲ. ” ಹಲೋ ನಾವು ಸಂಘದವರು ಮಾತಾಡ್ತಿದ್ದೀವಿ ನೀವು ಕಲಾವಿದೆ ಚಾಂದ್ ಬೇಗಮ್ ಹೌದಲ್ರೀ ? ” ಅದೆಷ್ಟೋ ದಿನಗಳ ನಂತರ ಆ ಕಡೆಯಿಂದ ಮೊದಲ ಬಾರಿಗೆ ಮನುಷ್ಯನ ಧ್ವನಿ ಕೇಳಿ, ಕಳೆದುಹೋದ ಪ್ರಾಣಪಕ್ಷಿ ಮರಳಿ ಬಂದಂಗಾಯ್ತು. ಹಾಸಿಗೆಯಿಂದ ಎದ್ದು ಕುಂತು ” ಹೌದ್ರೀ ನಾನೇ, ನಾನೇ ಬೇಗಮ್., ತಾವ್ಯಾರು ? ” ಕಣ್ತುಂಬಿ ಕೇಳಿದಳು.” ನಾವು ನಿಮ್ಮ ಅಭಿಮಾನಿಗಳು. ನಾಳೆ ನಿಮಗೆ ರೇಷನ್ ಕಿಟ್, ಚಪಾತಿ ಊಟ ತಗೊಂಡ ಬರ್ತಿದಿವಿ ನಿಮ್ಮನಿ ಅಡ್ರೆಸ್ ಹೇಳ್ರಿ”. ಕೇಳುತ್ತಿದ್ದಂತೆ, ಅಪರಿಮಿತ ಸಂತಸದ ಧ್ವನಿಯಲ್ಲಿ ವಿಳಾಸ ತಿಳಿಸಿದಳು.” ಅಬ್ಬಾ!! ದೇವರು ಇದ್ದಾನೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕೇ? ” ತನಗೆ ತಾನೇ ಸಾಂತ್ವನ ಹೇಳಿಕೊಂಡಳು. ಬೆಳಕು ಹರಿಯುವುದನ್ನೇ ತದೇಕ ಚಿತ್ತದಿಂದ ಕಾಯತೊಡಗಿದಳು. ಊಟ, ನಿದ್ರೆ ಎಂಬೋದು ಕನಸಿನಲ್ಲೂ ಕಂಡಿರಲಿಲ್ಲ. ಯಾವ ಯಾವುದೋ ನಾಟಕಗಳ ಹತ್ತಾರು ನೃತ್ಯಗಳು, ಕಥನಗಳು, ಸಂಭಾಷಣೆಗಳು ಅವಳೆದುರು ಫ್ಲ್ಯಾಶ್ಬ್ಯಾಕ್ ತರಹ ಸುರುಳಿ ಸುರುಳಿಯಾಗಿ ಸುಳಿಯತೊಡಗಿದವು. ಹಸಿವಿನ ಪಾತ್ರಗಳನ್ನು ಅಭಿನಯಿಸಿ ತೋರಿಸಿದ ತನಗೆ ಹಸಿವನ್ನು ಸಾಕ್ಷಾತ್ ಬದುಕುತ್ತಿರುವ ಅಗ್ನಿಪರೀಕ್ಷೆಯ, ಕಟುಸತ್ಯದ ಅನುಭವ. ಅದ್ಯಾಕೋ ಜೋಂಪು ಹತ್ತಿದಂಗಾಯ್ತು. ಆ ಜೋಂಪಿನಲ್ಲೇ ಚಪಾತಿ ಊಟ, ರೇಷನ್ ಕಿಟ್ ಕಣ್ಮುಂದೆ ಬಂದು ನಿಂತವು. ಕೋಲ್ಮಿಂಚು ಹೊಡೆದಂಗಾಗಿ ಗಾಬರಿಯಿಂದ ಸವಂಡು ಮಾಡಿ ಎದ್ದುಕುಂತಳು. ಕಣ್ಣೊರೆಸಿಕೊಂಡು, ಹಾಳಾದದ್ದು ಹಾಳಪ್ಪುಗೆ, ಕನಸಿರಬೇಕು. ಇನ್ನೂ ಹೊತ್ತು ಹೊಂಟಿಲ್ಲ. ಆದರೂ ನಿದ್ದೆ ಮಾಡೋದೇ ಬ್ಯಾಡಂತ ನಾಟಕದ ಚೋಪಡಿಯೊಂದನ್ನು ಹಿಡಕೊಂಡು ಓದುತ್ತಾ ಕುಂತಳು. ಸಣ್ಣದೊಂದು ಸಪ್ಪಳಾದರೂ ಸಾಕು, ಸಂಘದವರು ಬಂದರೇನೋ ಎಂದು ಶಾಂತಳಾಗಿ ಕುಂತು ಬಾಗಿಲು ಬಡಿತದ ಸವುಂಡಿಗಾಗಿ ಕಾಯತೊಡಗಿದಳು. ಸಂಘದವರಿಗೆ, ಯಾವಾಗ ಬರ್ತೀರಂತ ಮತ್ತೊಮ್ಮೆ ಕೇಳಿ ಖಚಿತ ಪಡಿಸಿಕೊಳ್ಳಲು ಅವಳ ಡಬ್ಬಾ ಫೋನಲ್ಲಿ ರೊಕ್ಕಾ ಇಲ್ಲ. ಹೇಗಿದ್ದರೂ ನಾಳೆ ಸಂಘದವರು ಬರ್ತಾರೆ ಅವರ ಕಡೆಯಿಂದ ಮಿಸ್ ಕಾಲ್ ಕೊಡುವಷ್ಟಾದರೂ ಫೋನಿಗೆ ರೊಕ್ಕ ಹಾಕಿಸಿಕೊಂಡರಾಯಿತೆಂದು ಲೆಕ್ಕ ಹಾಕಿಕೊಂಡಳು. ಮುಂಜಾನೆ ಹತ್ತುಗಂಟೆಯಾದರೂ ಸಂಘದವರ ಸುಳಿವಿಲ್ಲ. ನನ್ನ ಹಣೆಬರಹ ಇಷ್ಟೇ. ನನಗೆ ಸಾವೇಗತಿ ಎಂದುಕೊಂಡು ಹಾಸಿಗೆ ಮೇಲೆ ಉರುಳಿ ಕೊಳ್ಳಬೇಕೆನ್ನುವಷ್ಟರಲ್ಲಿ ಜೀಪು, ಕಾರುಗಳ ಸವಂಡು, ಆಮೇಲೆ ಬಾಗಿಲು ಬಡಿದ ಸಪ್ಪಳಾಯಿತು. ” ಬೇಗಮ್ಮರೇ..ಚಾಂದಬೇಗಮ್ಮರೇ..” ದನಿ ಕೇಳಿದಾಗ ” ನನಗಿನ್ನು ನೂರು ವರ್ಷ ಆಯಸ್ಸು. ನಾನು ಸಾಯಲಾರೆ ” ಸಂತಸದ ನಿಟ್ಟುಸಿರು ಬಿಟ್ಟಳು. ಹೇರ್ ಡೈ ಇಲ್ಲದೇ ಪೂರ್ತಿ ಬೆಳ್ಳಗಾಗಿದ್ದ ತಲೆಗೂದಲು, ಅಸ್ತವ್ಯಸ್ತವಾಗಿದ್ದ ಸೀರೆ ಸರಿಪಡಿಸಿಕೊಂಡಳು. ಕನ್ನಡಕ ಧರಿಸಿ ಎದ್ದೇಳಬೇಕೆನ್ನುವಷ್ಟರಲ್ಲಿ ಕಣ್ಣಿಗೆ ಬವಳಿ ಬಂದಂಗಾಗಿ, ಒಂದರಗಳಿಗೆ ತಡೆದು ಬಾಗಿಲು ತೆರೆದು ಹೊರಬಂದಳು. ಮುರ್ನಾಲ್ಕು ಮಂದಿ ಮಹಿಳೆಯರು ಸೇರಿದಂತೆ ಏಳೆಂಟು ಮಂದಿ ಸಂಘದ ಕಾರ್ಯಕರ್ತರು, ಹತ್ತೊಂಬತ್ತನೇ ವಾರ್ಡಿನ ಮಾಜಿ ಕಾರ್ಪೋರೇಟರ್ ಕಟ್ಟೀಮನಿ, ಅವರ ಅನುಯಾಯಿಗಳು . ಅವರನ್ನೆಲ್ಲ ನೋಡಿದ ಅವಳಿಗೆ ಸಂಜೀವಿನಿ ಪರ್ವತವನ್ನೇ ನೋಡಿದಷ್ಟು ಸಂತಸ, ಸಂಭ್ರಮ ಪಟ್ಟಳು. ಅವರೆಲ್ಲ ಮುಖಕ್ಕೆ ಕಟ್ಟಿಕೊಂಡಿದ್ದ ಮಾಸ್ಕ್ ತೆಗೆದು ಎಲ್ಲರೂ ಸಾಲಾಗಿ ನಿಂತರು. ನಡುವೆ ನಿಲ್ಲಿಸಿದ್ದ ಕಲಾವಿದೆ ಚಾಂದಬೇಗಮ್ಮಳ ಕೈಗೆ ಚಪಾತಿ ಊಟದ ಬಾಕ್ಸ್, ಮುಂದೆ ರೇಷನ್ ಕಿಟ್ ಇಟ್ಟರು. ಫೋಟೋಗ್ರಾಫರ್ ಗಣೇಶನಿಗೆ ಫೋನ್ ಮೇಲೆ ಫೋನ್ ಮಾಡುತ್ತಲೇ ಇದ್ದರು. ಅರ್ಧಗಂಟೆ ಕಾಯ್ದು ಕಾಯ್ದು ಸುಸ್ತಾಗಿ ಮೊಬೈಲ್ ಫೋಟೋಗಳೇ ಗತಿಯಾದವು ಅನ್ನೋವಾಗ ಫೋಟೋಗ್ರಾಫರ್ ಬಂದ. ಬಗೆ ಬಗೆಯ ಏಳೆಂಟು ಫೋಟೊ ತೆಗೆಸಿಕೊಂಡರು. ಮಾಜಿ ಕಾರ್ಪೊರೇಟರ್ ಕಟ್ಟೀಮನಿ, ಬೇಗಮ್ ಅಭಿನಯಿಸಿದ ಸಿನೆಮಾ, ನಾಟಕಗಳ ಪಾತ್ರಗಳನ್ನು ಕೊಂಡಾಡಿದ. ಕಲಾವಿದೆಗೆ ಸಂತಸದ ಸಮುದ್ರದಲ್ಲಿ ತೇಲಿಹೋದ ಪರಮಾನಂದ. ಕೊರೊನಾ ಸಂತ್ರಸ್ತರಿಗೆ ಪ್ಯಾಕೇಜ್ ತಲುಪಿಸಲು ಕೊಟ್ಟ ಕಾರ್ಪೊರೇಟ್ ಕಂಪನಿಗೆ ನೆರವಿನ ವಿಡಿಯೋ ಮತ್ತು ಫೋಟೋ ತಲುಪಿಸಿದರೆ ಸಾಕಿತ್ತು. ಕಟ್ಟೀಮನಿ ಟೀಮ್ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿತ್ತು. ಸಂಘದವರೆಲ್ಲರೂ ತಮ್ಮ ಕಾರು, ಜೀಪುಗಳತ್ತ ಚಲಿಸುತ್ತಿದ್ದರು. ಇನ್ನೇನು ಬೇಗಮ್ ಮನೆಯೊಳಕ್ಕೆ ಕಾಲಿಡಬೇಕು. ಅಷ್ಟರಲ್ಲಿ ಅವರಲ್ಲೊಬ್ಬ ಓಡೋಡಿ ಬಂದು ಕಾರ್ಪೊರೇಟರಣ್ಣ ಹೇಳಿ ಕಳಿಸಿದ್ದು ” ಅಮ್ಮಾ ತಪ್ಪು ತಿಳ್ಕೊಬೇಡ್ರಿ, ಮುಂದಿನ ಓಣಿಯಲ್ಲಿ ಇನ್ನೊಬ್ಬ ಕಲಾವಿದೆ ಇದ್ದಾರೆ. ಅವರಿಗೂ ಚಪಾತಿ ಊಟದ ಬಾಕ್ಸ್ , ರೇಷನ್ ಕಿಟ್, ಕೊಟ್ಟಂಗ ಮಾಡಿ ಫೋಟೋ ತೆಗೆಸಿಕೊಂಡು ವಾಪಸ್ ನಿಮಗೇ ತಂದು ಕೊಡುವುದಾಗಿ” ಹೇಳಿ ಇಸ್ಗೊಂಡು ಹೋದ. ಹಾಗೆ ಹೋದವರು ಸಂಜೆ, ರಾತ್ರಿಯಾದರೂ ಮರಳಿ ಬರಲೇ ಇಲ್ಲ. ಊಟದ ಬಾಕ್ಸ್, ರೇಷನ್ ಕಿಟ್ ತರಲಿಲ್ಲ. ಕಲಾವಿದೆಯ ಉಪವಾಸಕ್ಕೆ ಅಂತ್ಯವಿಲ್ಲದಂತಾಯಿತು. ಹಿರಿಯ ರಂಗಚೇತನ ಚಾಂದಬೇಗಮ್ ತನ್ನೊಳಗಿನ ಎಲ್ಲ ಚೈತನ್ಯಗಳನ್ನು ಅಕ್ಷರಶಃ ಕಳಕೊಂಡಳು. ಸಂತ್ರಸ್ತ ಕಲಾವಿದೆಗೆ ನಕಲಿ ನೆರವಿನ ಪ್ರಕ್ರಿಯೆಯ ಮೊಬೈಲ್ ವಿಡಿಯೋ ಮಾಡಿಕೊಂಡಿದ್ದ ಸಂಘದ ಸದಸ್ಯನೊಬ್ಬನಿಂದ ವಿಡಿಯೋ ವೈರಲ್ಲಾಗಿ ಮರುದಿನ ಪತ್ರಿಕೆ, ಟೀವಿಗಳಲ್ಲಿ ಸಂತ್ರಸ್ತ ಹಿರಿಯ ಕಲಾವಿದೆಗೆ ಆಗಿರುವ ಅವಮಾನದ ಸಚಿತ್ರ ಕಥೆ, ಮೋಸದ ಜಾಲ ಬಯಲಾಯಿತು. ರಾಜ್ಯಾದ್ಯಂತ ದೊಡ್ಡ ಸುದ್ದಿಯಾಯಿತು. ಹಿರಿಯ ಕಲಾವಿದೆಗೆ ಆಗಿರುವ ಅನ್ಯಾಯ, ಅವಮಾನ ಖಂಡಿಸಿ ಹೇಳಿಕೆಗಳ ಮೇಲೆ ಹೇಳಿಕೆಗಳು ಕೇಳಿಬಂದವು. ಅದೆಲ್ಲವನ್ನು ಮೂಕವಿಸ್ಮಿತಳಾಗಿ ಗಮನಿಸಿದ ಕಿರುತೆರೆಯ ಹೆಸರಾಂತ ತಾರೆ ಮಹಾನಂದಾ ಒಂದುಲಕ್ಷ ಹಣದೊಂದಿಗೆ ಬಗೆ, ಬಗೆಯ ಊಟ, ತಿಂಡಿ, ತಿನಿಸು ಸಿದ್ದಪಡಿಸಿಕೊಂಡು, ಬೀಪಿ, ಶುಗರ್ ಕಾಯಿಲೆಗೆ ಸಂಬಂಧಿಸಿದ ಹತ್ತಾರು ಬಗೆಯ ಗುಳಿಗೆ ಪೊಟ್ಟಣಗಳ ಕಟ್ಟುಗಳು, ಒಂದು ಬಾಕ್ಸ್ ಕೊರೊನಾ ರಕ್ಷಾಕವಚದ ಮಾಸ್ಕ್ ಸಮೇತ ಕಾರಲ್ಲಿ ತನ್ನ ಗೆಳತಿಯರೊಂದಿಗೆ ಕಲಾವಿದೆ ಚಾಂದಬೇಗಮ್ಮಳನ್ನು ಹುಡುಕಿಕೊಂಡು ಗಣೇಶ ಪೇಟೆಯ ಅವರ ಮನೆ ಬಾಗಿಲಿಗೆ ಬಂದರು. ತನ್ನ ಜೀವಮಾನದಲ್ಲಿ ರಂಗಭೂಮಿಯ ಹಿರಿಯ ಕಲಾವಿದೆಗೆ ನೆರವಾಗುವ ಅವಕಾಶ, ಸಂತಸ, ಸಂಭ್ರಮ ಮಹಾನಂದಾಗೆ. ಮಹಾನಂದಾ ಮತ್ತು ಆಕೆಯ ಗೆಳತಿಯರು ನಾಕೈದು ಬಾರಿ ಜೋರಾಗೇ ಬಾಗಿಲು ಬಡಿದರೂ ಬಾಗಿಲು ತೆಗೆಯಲಿಲ್ಲ. ಅನುಮಾನಪಟ್ಟು ಅಕ್ಕಪಕ್ಕದ ಜನರನ್ನು ಕೇಳಿದರೂ ಅವರು ಸರಿಯಾದ ಮಾಹಿತಿ ಹೇಳಲಿಲ್ಲ. ಅಷ್ಟೊತ್ತಿಗೆ ಮಾಧ್ಯಮದವರು ಬಂದರು. ಆಗ ನೋಡಿ ಜನ ಒಬ್ಬೊಬ್ಬರೇ ಕ್ಯಾಮರಾ ಮುಂದೆ ಬರಲು ನಾಮುಂದು ತಾಮುಂದು ಎಂದು ಸೀರೆಯ ಸೆರಗು, ಅಂಗಿಯ ಕಾಲರು, ತಲೆಯ ಕ್ರಾಪು

ಕೊರೊನಾ ಮತ್ತು ಕಲಾವಿದೆ ಬೇಗಂ… Read Post »

ಕಾವ್ಯಯಾನ

ಕಾವ್ಯಯಾನ

ಪ್ರಕೃತಿ ಪಾರ್ವತಿ ಸಪ್ನಾ ಶತಮಾನಗಳ ಲೆಕ್ಕವಿಲ್ಲದೇಇದ್ದಲ್ಲೇ ಇದ್ದು ಸತತವಾಗಿಮಾನವನ ಕೈಯಲ್ಲಿನಾಶವಾಗುತ್ತಿರುವ ಪ್ರಕೃತಿಕೇಳಲಿಲ್ಲನಾನು ಯಾರೆಂದು ! ಕರಿಮೋಡ ಸುತ್ತುತ್ತಲೇ ಇದೆನೀಲಿ ಬಾನು ಇದ್ದಲ್ಲೇ ಇದೆಸೂರ್ಯ ಚಂದ್ರರಿಗೇ ಪುರಸೊತ್ತಿಲ್ಲಆದರೂ ನಮ್ಮನೆಂದು ಕೇಳಲಿಲ್ಲ.ನಾನು ಯಾರೆಂದು ! ಕೋಟಿ ಜೀವ ರಾಶಿಗೆಜಲವೇ ಬೇಕು ಭೂಮಿಗೆದಾಹ ನೀಗಿ ಬದುಕ ಕೊಟ್ಟುಕಡಲ ಸೇರುವ ನೀರಿಗೆಈಗಲೂ ಅರಿವಿಲ್ಲ ನೋಡುನಾನು ಯಾರೆಂದು ! ಏನೇನೂ ಅಲ್ಲದತನ್ನ ಮೂಲ ತಿಳಿಯದಮಾನವೀಯತೆ ಮರೆತುಯಾರೊಂದಿಗೂ ಬೆರೆಯದಮಾನವ ಜನ್ಮವೇಒಮ್ಮೆ ನಿನ್ನನ್ನೇ ಪ್ರಶ್ನೆ ಮಾಡಿಕೋ ನಾನು ಯಾರೆಂದು ! *********************

ಕಾವ್ಯಯಾನ Read Post »

You cannot copy content of this page

Scroll to Top