ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು

ಚರ್ಚೆ ಅಬ್ಬಾ! ಏನಿದು ವಿಪರ್ಯಾಸ,ಸರಾಸರಿ ನೂರು ವರ್ಷಗಳು ಉರುಳಿದರೂ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೀಯ ಸ್ಥಾನವನ್ನು ಮಹಿಳೆಯರು ಅಲಂಕರಿಸಲಿಲ್ಲವೇಕೆ?  ಎನ್ನುವುದು ತಿಳಿದ ತಕ್ಷಣ ನನಗೆ ಕಾಡುತ್ತಿರುವ ಒಂದು ಬಹುದೊಡ್ಡ ಪ್ರಶ್ನೆಯೇ ಅದು. ಮಹಿಳೆಯರೇ ತಮಗೆ ಆ ಪದವಿ ಬೇಡವೆಂದು ಸುಮ್ಮನುಳಿದಿದ್ದಾರೋ? ಅಥವಾ ಆ ಸ್ಥಾನಕ್ಕೆ ಹೋಗಲು ಅವರಿಗೆ ಅವಕಾಶವನ್ನೇ ನೀಡಲಿಲ್ಲವೋ? ನಾನರಿಯೆ. ಆದರೆ ಇಲ್ಲಿಯವರೆಗೂ ಅಧ್ಯಕ್ಷೀಯ ಪೀಠವನ್ನು ಹತ್ತಲಿಲ್ಲ ಎಂಬ ಸಂಗತಿಯನ್ನಂತು ತಿಳಿದುಕೊಂಡೆ. ಪುರುಷನ ಜೀವನದ ಪ್ರತಿಯೊಂದು ಹಂತದಲ್ಲೂ ಹೆಣ್ಣಿನ ಪಾತ್ರ ಬಹುಮುಖ್ಯವಾದುದು. ಜನ್ಮಕೊಟ್ಟು ಸಾಕಿ ಸಲಹುವ ತಾಯಿಯಾಗಿ, ಪ್ರೀತಿಯ ಸಹೋದರಿಯಾಗಿ, ಅತ್ತಾಗ ಸಾಂತ್ವನ ಹೇಳುವ ಗೆಳತಿಯಾಗಿ, ಮನೆಯಲ್ಲಿ ಎಲ್ಲರ ಪ್ರೀತಿಯ ಚಿಲುಮೆಯ ಮುದ್ದಿನ ಮಗಳಾಗಿ ಇಂದು ಮಹಿಳೆ ಸರ್ವ ಕ್ಷೇತ್ರಗಳಲ್ಲೂ ಸಾಧನೆಯ ದಾಪುಕಾಲನ್ನ ಹಾಕುತ್ತಾ ಜಗತ್ತಿನೆಲ್ಲರ ದೃಷ್ಟಿಯನ್ನು ತನ್ನೆಡೆಗೆ ಸೆಳೆಯುವಂತೆ ಮಾಡಿರುವಾಗ, ಕಸಾಪನ ಅಧ್ಯಕ್ಷೀಯ ಪದವಿ ನೂರು ವರ್ಷಗಳಾದರೂ ಪಡೆಯದೇ ಇರುವುದು ತುಂಬಾ ವಿಷಾದನೀಯ ಹಾಗೆಯೇ ಮಹಿಳೆಯರಿಗೆ ಇದೊಂದು ಸವಾಲಿನ ಪ್ರಶ್ನೆಯು ಹೌದು. ಒಂದು ಕಾಲದಲ್ಲಿ ಅಡಿಗೆ ಮನೆಗೆ ಮಾತ್ರ ಸೀಮಿತವಾಗಿದ್ದ ಮಹಿಳೆ ಈಗ ಸಾಹಿತ್ಯ, ರಾಜಕೀಯ, ಸಾಮಾಜಿಕ, ಧಾರ್ಮಿಕ, ವಿಜ್ಞಾನ, ವೈದ್ಯಕೀಯ, ಬಾಹ್ಯಾಕಾಶ ಹೀಗೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ತನ್ನ ಸಾಧನೆಯ ಛಾಪು ಮೂಡಿಸಿದ್ದಾಳೆ. ನಾನಿಲ್ಲಿ  ಕಸಾಪನ ಬಗ್ಗೆ ಹೇಳುತ್ತಿರುವುದರಿಂದ ಕೇವಲ ಸಾಹಿತ್ಯದ ಬಗ್ಗೆಯಷ್ಟೇ ಕೊಂಚ ಗಮನ ಹರಿಸೋಣ . ಬರಹಗಾರ್ತಿಯರ ಸಂಖ್ಯೆ ತುಂಬಾ ಕಡಿಮೆಯಿದ್ದ ಹಿಂದಿನ ಕಾಲದಲ್ಲಿ, ಪ್ರತಿನಿತ್ಯದ ತಮ್ಮೆಲ್ಲ ಕಷ್ಟ-ಕಾರ್ಪನ್ಯಗಳನ್ನು ದೂರಮಾಡಿಕೊಳ್ಳುವ ಸಲುವಾಗಿ ಹಾಡುಗಳನ್ನು ತಾವೇ ಕಟ್ಟಿ ರಾಗವಾಗಿ ಹಾಡುತ್ತಿದ್ದರು ಅವೇ ಜಾನಪದ ಸಾಹಿತ್ಯ. ಈ ಜಾನಪದ ಸಾಹಿತ್ಯವನ್ನ ಹಿಂದೆ ಬಹುವಾಗಿ ರಚಿಸಿದವರೆಂದರೆ ಮಹಿಳೆಯರೇ. ಆ ಸೊಗಸಾದ ಸಾಹಿತ್ಯ ಆಕೆಯ ಕುಟುಂಬ,ನೋವು-ನಲಿವು, ಅವಳ ಒಂದಿಷ್ಟು ತಳಮಳಗಳಿಗಷ್ಟೇ ಸೀಮಿತವಾಗಿತ್ತು. ಆದರೆ ಜಾನಪದ ಸಾಹಿತ್ಯದ ಸೊಗಡೇ ಅದ್ಬುತ. ಕವಿ ಮಹಲಿಂಗರಂಗರು ಹೇಳಿರುವಂತೆಯೇ “ಸುಲಿದ ಬಾಳೆಯ ಹಣ್ಣಿನಂದದಿ, ಕಳೆದ ಸಿಗುರಿನ ಕಬ್ಬಿನಂದದಿ,ಅಳಿದ ಉಷ್ಣದ ಹಾಲಿನಂದದಿ ಕನ್ನಡ ಸಾಹಿತ್ಯ”. ಈ ಜಾನಪದ ಸಾಹಿತ್ಯವೂ  ಹಾಗೆಯೇ ಅಷ್ಟೇ ಸುಲಭದ ಮತ್ತು ಓದುವಾಗ ಮನಸ್ಸಿಗೆ ತುಂಬಾ  ಮುದ ನೀಡುವಂತದ್ದು. ಜಾನಪದ ಸಾಹಿತ್ಯವನ್ನು ಆಗಲೇ ಗುರುತಿಸಿ ಪ್ರಶಂಸೆಯನ್ನು ನೀಡಿದ್ದೇ ಹೌದಾದರೆ ಮಹಿಳೆ ಇನ್ನೂ ಹೆಚ್ಚಿನ ಸಾಧನೆಯನ್ನು ಮಾಡುತ್ತಿದ್ದಲೋ ಏನೋ?ಯಾರಿಗೆ ಗೊತ್ತು. ಹಾಗೆಯೇ ಅಲ್ಲಿಂದ ಮಹಿಳಾ ಸಾಹಿತ್ಯದ ಉಲ್ಲೇಖದ ಬಗ್ಗೆ ಯೋಚಿಸುತ್ತಾ ಹೋದರೆ ಸಿಗುವುದು ವೈಭವದ ಸಾಮ್ರಾಜ್ಯವಾದ ವಿಜಯನಗರ ಕಾಲದಲ್ಲಿಯೇ ಗಂಗಾದೇವಿಯ” ವೀರ ಕಂಪಣರಾಯ ಚರಿತ” ಮತ್ತು ತಿರುಮಲಾಂಬ ಅವರು ರಚಿಸಿದಂತ “ವರದಾಂಬಿಕ ಪರಿಣಯಂ”. ವಿಜಯನಗರ ಸಾಮ್ರಾಜ್ಯದ ವೈಭೋಗವನ್ನು ಅದೆಷ್ಟು ಬಾರಿ ಬಣ್ಣಿಸಿದರೂ ಸಾಲದು!! ಆ ಕಾಲದಲ್ಲಿದ್ದ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿ ವೈಭವದಿಂದ ಮೆರೆದ ಹಂಪೆಯಲ್ಲಿನ ಪ್ರತಿಯೊಂದು ಕಲ್ಲುಗಳೂ ಕೂಡ ಹಿಂದಿನ ಗತವೈಭವವನ್ನು ಸಾರಿ ಹೇಳುತ್ತವೆ!! ಅಂದು ಹಂಪಿ ಪಟ್ಟಣವನ್ನು ಕಂಡು ಬೆರಗಾದ ಪೋರ್ಚುಗೀಸ್ ಪ್ರವಾಸಿಗ ದ್ವಾರ್ಟ್ ಬಾರ್ಬೊಸಾ, “ವಜ್ರ, ಮುತ್ತು, ರೇಶ್ಮೆ, ಬೆಲೆಬಾಳುವ ವಸ್ತುಗಳು ಬೀದಿಗಳಲ್ಲೇ ಮಾರಲ್ಪಡುತ್ತದೆ” ಎಂದು ಸಾರಿ ಹೇಳಿದ್ದ!! ಚೈನಾ ದೇಶದ ಬೌದ್ಧ ಬಿಕ್ಷು ಹೂಯನ್ ತ್ಸಾಂಗ್, “ವಿಜಯನಗರದ ಜನರು ಬಹಳ ಸಂತೋಷದಿಂದಿರುವವರು, ಎಲ್ಲಿ ನೋಡಿದರೂ ಭವ್ಯವಾದ ಅರಮನೆಗಳೇ, ರಾಜ ಬೀದಿಗಳಲ್ಲಿ ಅಸಂಖ್ಯಾತ ಮೊತ್ತದ ಚಿನ್ನ, ವಜ್ರ ವೈಡೂರ್ಯಗಳನ್ನು ರಾಶಿ ಹಾಕಿಕೊಂಡು ವರ್ತಕರು ವ್ಯಾಪಾರ ಮಾಡುತ್ತಾರೆ. ನಿಜವಾಗಿಯೂ ಇದೊಂದು ಸ್ವರ್ಗ ಭೂಮಿ” ಎಂದಿದ್ದ!! ಎನ್ನುವ ವಿಷಯವನ್ನು ನಾವೆಲ್ಲ ಇತಿಹಾಸದಲ್ಲಿ ಓದಿಯೇ ಇರುತ್ತೇವೆ. ಈ ಎಲ್ಲ ವೈಭವದ ನಡುವೆ ಮಹಿಳಾ ಸಾಹಿತ್ಯಕ್ಕೆ ಅಷ್ಟೊಂದು ಮನ್ನಣೆ ಅವರೇ ಕೊಡಲಿಲ್ಲವೋ, ಮಹಿಳೆಯರೇ ತಮ್ಮ ಸುತ್ತಲಿನ ಪರಿಧಿಯನ್ನು ಬಿಟ್ಟು ಹೊರಗೆ ನುಸುಳಿ ಬರಲಿಲ್ಲವೋ ಗೊತ್ತಿಲ್ಲ. ಉಳಿದ ರಾಜ ಮಹಾರಾಜರ ಕಾಲದಲ್ಲೂ ಸಹ ಪುರುಷರ ಸಾಹಿತ್ಯದಷ್ಟು ಸ್ತ್ರೀ ಸಾಹಿತ್ಯ ಪ್ರಚಾರಕ್ಕೆ ಬರದೇ ಹೋಯಿತು. ಒಂದಿಷ್ಟು ಆಧುನಿಕ ಕನ್ನಡ ಸಾಹಿತ್ಯದ ಕಡೆ ಕಣ್ಣಾಡಿಸಿ ನೋಡಿದರೆ ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರಬಂಧ ಎಲ್ಲಾ ಸಾಹಿತ್ಯ ಪ್ರಕಾರಗಳಲ್ಲಿಯೂ ಇಂದು ಮಹಿಳೆ ಪರಿಣಿತಳಾಗಿದ್ದಾಳೆ. ನನಗಂತೂ ದ್ವಿತೀಯ ಪಿಯುಸಿ ಓದುವಾಗ ಶ್ರೀಮತಿ ನೇಮಿಚಂದ್ರರು ಬರೆದ “ಆಯ್ಕೆ ಇದೆ ನಮ್ಮ ಕೈಯಲ್ಲಿ” ಎನ್ನುವ ಅನುಭವ ಕಥನವಂತೂ ನಾ ಓದಿದಾಗ ನನ್ನ ಮನಸನ್ನೇ ಸೂರೆ ಮಾಡಿತ್ತು. ನಿರಾಸೆಯ ಮಡಿಲಿಗೆ ಬೀಳದೇ ಎಚ್ಚರಿಕೆಯ ಎಲ್ಲೆಯಲ್ಲಿ ಬದುಕನ್ನು ಬದಲಿಸಿಕೊಳ್ಳುವ, ಸಾಧಿಸುವ ತಾಳ್ಮೆ, ಸಹನೆಗಳ ಅಗತ್ಯವನ್ನು ತುಂಬಾ ಮನಮುಟ್ಟುವಂತೆ ಅಲ್ಲಿ ಬರೆದಿದ್ದಾರೆ. ಹೀಗೆ ಮಹಿಳಾ ಸಾಹಿತ್ಯವನ್ನು ಕಟ್ಟಿ ಇಲ್ಲಿಯವರೆಗೆ ತಂದು ನಿಲ್ಲಿಸಿದ ಕೀರ್ತಿ ನಮ್ಮ ಸಾರ ಅಬೂಬಕ್ಕರ, ಮಾಲತಿ ಪಟ್ಟಣಶೆಟ್ಟಿ, ನೇಮಿಚಂದ್ರ, ಸುಧಾಮೂರ್ತಿ, ಟಿ. ಸುನಂದಮ್ಮ, ಲಲಿತಾ ಸಿದ್ಧಬಸವಯ್ಯ, ಸುಕನ್ಯಾ ಮಾರುತಿ, ಹೀಗೆ ಹೆಸರುಗಳ ಪಟ್ಟಿ ಒಂದರ ನಂತರ ಒಂದರಂತೆ ಬೆಳೆಯುತ್ತಲೇ ಹೋಗುತ್ತದೆ. ದ. ರಾ. ಬೇಂದ್ರೆಯವರು ತಮ್ಮ ಭಾವಗೀತೆಯಾದ “ಹಕ್ಕಿ ಹಾರುತಿದೆ ನೋಡಿದಿರಾ” ಇದರಲ್ಲಿ ಕಾಲ ಪಕ್ಷಿಯ ಹೊಡೆತಕ್ಕೆ ಮಾನವ ಪ್ರಪಂಚದಲ್ಲಿ ಅನೇಕಾನೇಕ ಬದಲಾವಣೆ ಆಗುತ್ತಲೇ ಇರುತ್ತದೆ, ಇಂದು ಇದ್ದಂತೆ ಮುಂದೆ ಎಂದಿಗೂ ಇರಲಾರದು ಎನ್ನುವ ಮಾತಿನಂತೆ ಕಾಲಘಟ್ಟಗಳು ಬದಲಾದ ಹಾಗೆ ಮಹಿಳಾ ಸಾಹಿತ್ಯ ಲೋಕ ಕೂಡ ತುಂಬಾ ಮುಂದುವರಿದಿದೆ. ಪ್ರವಾಸ, ಕೃಷಿ, ಸಾಮಾಜಿಕ, ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ, ಕೌಟುಂಬಿಕ ಹೀಗೆ ಎಲ್ಲವನ್ನೂ ಒಳಗೊಂಡ ಸಾಹಿತ್ಯವನ್ನು ರಚಿಸುವಷ್ಟು ಪ್ರಬಲವಾಗಿದ್ದಾಳೆ. ಹೀಗಿರುವಾಗ ಅವಳಿಗೆ ಅಧ್ಯಕ್ಷೀಯ ಗದ್ದುಗೆ ಸಿಗಲೇ ಬೇಕು. “ತೊಟ್ಟಿಲು ತೂಗುವ ಕೈ ಜಗತ್ತನ್ನೇ ತೂಗಬಲ್ಲದು” ಇನ್ನೂ ಕಸಾಪನ ಅಧ್ಯಕ್ಷತೆಯ ಸ್ಥಾನದಲ್ಲಿ ಕೂರಲು ಆಕೆಗೆ ಅರ್ಹತೆ ಇಲ್ಲವೇನು?? ಅಥವಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನವೆಂಬ ತೊರೆಗೆ ಸ್ತ್ರೀ ಮತ್ತು ಪುರುಷರೆಂಬ ಪ್ರತ್ಯೇಕ ಧಾರೆಗಳ ಹರಿವೇನಾದರು ಇದೆಯೇನು? ಅಧ್ಯಕ್ಷ ಪದವಿಯ ಆಯ್ಕೆಯಲ್ಲಿ ಮಹಿಳೆಯರಿಗೂ ಮೀಸಲಾತಿ ಸೌಲಭ್ಯ ಸಿಗುವಂತಾಗಿ ಇನ್ನೂ ಹೆಚ್ಚಿನ ಉತ್ತೇಜನ ಅವರಿಗೆ ದೊರಕುವ ಮೂಲಕ ಸಾಹಿತ್ಯ ಲೋಕ ಅನೇಕಾನೇಕ ಮಹಿಳಾ ಸಾಹಿತ್ಯ ರತ್ನದ  ಮಣಿಗಳನ್ನು ಪಡೆದು ಸಾಹಿತ್ಯ ಕ್ಷೇತ್ರ ಬಾನೆತ್ತರಕ್ಕೆ ಬೆಳೆಯಲಿ ಎನ್ನುವುದು ನನ್ನದೊಂದು ಆಶಯ. “ಕನ್ನಡವೇ ಸತ್ಯ ಕನ್ನಡವೇ ನಿತ್ಯ” ********************************** ಪೂಜಾ ನಾರಾಯಣ ನಾಯಕ್..

ಕಸಾಪಗೆ ಮಹಿಳಾ ಅದ್ಯಕ್ಷೆ ಬೇಕು Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ಮಿಲನ ವೀಣಾ ರಮೇಶ್ ಮದುವನದ ಅಂಗಳದಲಿಮಧುರ ಮೌನ ಹಾಸಿದೆಮಧು ಮನಸುಗಳು ಬೆಸೆದಿರೆ,ಮಧು ಅರಸುವ ದುಂಬಿಗಳುಮಧುವಿಹಾರದ ಹಿಗ್ಗಿನಲಿ ಹಸಿರ ಹಂದರದೊಳಗೆಗಂಧರ್ವರೆ ಧರೆಗಿಳಿದಂತೆಮುದ ನೀಡಿ ಮತ್ತೇರಿಸಿದಆಲಾಪದ ದುಂಬಿಗಳುಮಧು ಹನಿಯೊಂದುಜಾರಿದೆ,ಕೆನ್ನೆ ಮಾತಾಡಿದೆತುಸು ಬಣ್ಣದಲಿ,ಅದರುತಿದೆ ಅಧರಗಳು ಭಾವಗಳ ಅರಮನೆಯಲಿಮಧುಮಂಚದ ಉಯ್ಯಾಲೆಪ್ರೇಮರಾಗದಿ ತೂಗುತಿರೆಸವಿಗನಸುಗಳು ಬಿಗಿದಪ್ಪಿನನ್ನೊಡಲಲಿ ಕೂತಿರೇ ಮಧುಚಂದಿರನು ಕರೆದಿರೆಮೆಲ್ಲನೆತನುಮನಗಳು ಹೆಣೆದಿದೆಪ್ರೇಮದ ಚಿಲುಮೆಅಧರ ಸುಖದೊಳಗಿನಮದಿರೆ,ಯ ಬೆಚ್ಚನೆಯಹಿತದೊಳಗೆ ಮಧುಮಿಲನದ ಅರಸಿಗೆಚೈತ್ರವಸಂತನ ಆಗಮನದ ಸಂತಸಮತ್ತದೇ ಪ್ರತಿಪದೆಗೆಸಂಭ್ರಮದ ಮಧುಮಾಸ *********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕವಿತೆ ನಾಲ್ಕು ಹೆಜ್ಜೆ ನಡೆಯಬಹುದಿತ್ತು ಪ್ಯಾರಿಸುತ ನಾಲ್ಕು ಹೆಜ್ಜೆ ನಡೆಯಬಹುದಿತ್ತು ನೀನುಒಂದೇ ಒಂದು ಹೆಜ್ಜೆ ಮುಂದೆ ಹಾಕಲಿಲ್ಲಕೈಕೈ ಹಿಡಿದು,ಭುಜಕೆ ಭುಜವ ರಕ್ಷಿಸಿಮೆಚ್ಚಿಕೊಂಡಿದ್ದೆ ನಾನುಹಿಡಿದ ಕೈ ಕೊಸರಿಕೊಂಡು ಅಲ್ಲೇ ನಿಂತೆ ನೀನುನಾನು ನೀನು ಮತ್ತು ಭವಿಷತ್ತಿನ ನಮ್ಮೆರಡುಮುದ್ದು ಮಕ್ಕಳಿಗೆ ನೀತಿಯನ್ನುನೀಡಬಹುದಿತ್ತು ನಾವು…ಇಬ್ಬರಲ್ಲಿ ಯಾರೋ ಒಬ್ಬರು ನೀತಿಗೆಟ್ಟಿದ್ದೇವೆಪುಟ ಹಿಮ್ಮುಖವಾಗಿ ಹಾರಿದಂತೆಲ್ಲಇಬ್ಬರು ಸ್ವಚ್ಛಂದ ಪ್ರೇಮಿಗಳು ಅನ್ನುವಅದೆಷ್ಟು ಪುರಾವೆಗಳು ಉಲ್ಲೇಖಿತವಾಗಿವೆಕೆಲವು ಪುಟಗಳು ಮಾಸಿ ಹರಿದು ಹೋಗಿವೆಅದರಲ್ಲೇನಾದರೂ ದಾಖಲಿಸಿದ್ದುಉಳಿದಿರಬಹುದೇನೋ…?! ನಾಲ್ಕು ಹೆಜ್ಜೆ ಮುಂದೆ ಹೋಗಿ,ತಿರುಗಿ ನೋಡಿದೆ ನಾನುನನ್ನ ಹೆಜ್ಜೆ ಅಳಿಸಿ,ಗುರುತು ಸಿಗದೆ ಹಲ್ಲು ತೋರಿದೆ ನೀನುನೀನು ನಿಂತ ಜಾಗದಲ್ಲಿ ಬೇರೊರಿದ್ದ ನೆನಪುಗಳು ನನ್ನವುಪಡೆದ ಪ್ರೇಮ ಮಂಜುಗಡ್ಡೆ ಅನಿಸಿ ಕರುಗಿತುಆಗ ಇನ್ನೇನು ಇರುತ್ತೆ ಬಾಳಲಿ…ಒಂದಷ್ಟು ಹಸಿ ಸುಳ್ಳುಗಳುಮತ್ತಷ್ಟು ಕಹಿ ನೆನಪುಗಳುಮಲ್ಲಿಗೆ ಬಳ್ಳಿಯ ಸುತ್ತಗಿರಿಕಿ ಹೊಡೆಯುತ್ತಾ ನೆರಳುಸೂಸುವ ನೆಪದಲ್ಲಿ ಕಾಡಲು ಅಣಿಗೊಳ್ಳುತ್ತಿವೆಯಾವ ಬಿಸಿಲಿಗೆ ಮೈ ಮನಸು ದಣಿಯುತ್ತಿತ್ತೋಅದೇ ಬಿಸಿಲು ಮುದಿ ವಯಸ್ಸಿಗೆ ಬೆನ್ನುಬಿದ್ದಂತಿದೆಯಾವ ಹಾಡುಗಳಿಗೆ ಮೈ ಮನಸು ಕುಣಿಸುತ್ತಿದ್ದೇವೋಅದೇ ಹಾಡಿಗೆ ಕೈಬೆರಳು ಮಾತ್ರ ನರ್ತಿಸುವಂತಾಗಿದೆಕಣ್ಣುಗಳಲ್ಲಿ ಕಣ್ಣನಿಟ್ಟು ಕಾಣುತ್ತಿದ್ದಕನಸುಗಳು ರೆಕ್ಕೆ ಕತ್ತರಿಸಿಕೊಂಡಿವೆಮೆತ್ತನೆ ಎದೆಯ ಮೇಲೆ ಹತ್ತುತ್ತಿದ್ದಸೊಂಪಾದ ನಿದಿರೆ ಬೇಸರ ತಂದಿದೆಸದಾಕಾಲ ಮೂಲೆ ಸೇರಿ ತುಕಡಿಸುತ್ತಿದ್ದವಾಲುವ ಕುರ್ಚಿಅಂಗಳದಲ್ಲಿ ಬಂದು ಕುಳಿತು ಪುರಾಣ ಪ್ರಕಟಿಸಿದೆಇಷ್ಟೆಲ್ಲ ಘಟಿಸಿದರೂ ಮೇಲೂನಾಲ್ಕು ಹೆಜ್ಜೆ ಜೊತೆಗೂಡಬೇಕಿತ್ತು ನೀನು *********************

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಲೀನವಾಗುವೆ ಕವಿತೆ ಸರಿತಾ ಮಧು ದಟ್ಟ ಕಾನನದ ನಡುವೆದಿಟ್ಟ ಹೆಜ್ಜೆಯನಿಟ್ಟು ನಡೆವೆಸುತ್ತಲೂ ಜೀಂಗುಡುವ ಸದ್ದು‌ಕತ್ತನೆತ್ತಲು ಕಾರ್ಮೋಡಗಳ ಕತ್ತಲುಅಡಿಇಡಲು ಕಲ್ಲು ಮುಳ್ಳಿನ ಹಾದಿಅಲ್ಲೇ ನಿಂತರೆ ಕ್ರೂರಮೃಗಗಳ ಭೀತಿ ಮುಗಿಲೆತ್ತರದ ಮರಗಳಿಗೆ ಒರಗಲೇ ಸ್ವಲ್ಪಮುಗಿದ ಹಾದಿಗೊಮ್ಮೆ ತಿರುಗಲೇ ಸ್ವಲ್ಪ ಭಯ , ಹಾ ! ಭಯದಣಿವ ಲೆಕ್ಕಿಸದೇ ಓಡಿದೆ ಮತ್ತೆನಾ ಕಳೆದುಕೊಂಡ ನನ್ನ ಸಾಮ್ರಾಜ್ಯಕ್ಕೆಅದು ಮಾತ್ರ ಎಂದಿಗೂ ನನ್ನದೇನಾನಲ್ಲಿ , ನಾನು ನನಗಾಗಿ ಮಾತ್ರಏಕಾಂತತೆಯ ಮೌನದೊಳಗೆಲೀನವಾಗುವುದೆನ್ನ ಮನ.. ******************************

ಕಾವ್ಯಯಾನ Read Post »

ಕಾವ್ಯಯಾನ

ಪ್ರಶ್ನಿಸು ಪ್ರಶ್ನಿಸುತ್ತಲೇ ಇರು

ಕವಿತೆ ನಾಗರಾಜ ಹರಪನಹಳ್ಳಿ ಮುಗ್ಧತೆ ಸೌಂದರ್ಯವಹಾಗೆಲ್ಲ ಬೀದಿಗಿಡಲಾಗದುಒಲವೇಬೀದಿಯಲ್ಲಿ ಉರಿವ ಕಣ್ಣುಗಳಿವೆ ಹಾದಿ ಬೀದಿಗಳಲ್ಲಿ ಕರೋನಾ ಭಯಅದನ್ನೂ ಮೀರಿದ ಖದೀಮರ‌ ಸಂಚಿದೆಯಿಲ್ಲಿ ;ಸಮಾಜ ಇನ್ನೂ ಬದಲಾಗಿಲ್ಲಬದಲಿಸಲು ಯತ್ನಿಸಿದ ಬುದ್ಧ, ಬಸವ ,ಅಕ್ಕಅಲ್ಲಮ ಸೋತಿದ್ದಾರೆ….ಪುರೋಹಿತಶಾಹಿಯ ಕುತಂತ್ರಕೆ ಆನೆಕಾಲಿನ ಸಂಕೋಲೆಗೆ ಸಿಲುಕಿನೆಲಕೆ ಹತ್ತಿದ ರಕ್ತದ ಕಲೆ ಕಲ್ಯಾಣದ ಬೀದಿ ಬೀದಿಗಳಲಿಮತ್ತೆ ಅರಳಲಿ; ಅವೇ ಕಲ್ಯಾಣದ ಕ್ರಾಂತಿಯ ಹೂಚಿತ್ರಗಳಾಗಲಿ :ಅತ್ತ ಅತ್ತತ್ತ ಒಮ್ಮೆ ಹೊರಳಿ ನೋಡುಯಾವ ಹೆಸರುಗಳ ಇತಿಹಾಸದಲ್ಲಿ ಹೂಳಲಾಗಿದೆಯೋ ಅಲ್ಲಿಂದಲೇ ಕಸುವು ಪಡೆದುಕೊ ಗೆಳತಿ, ಆ ಕನಸುಗಳ ಹಂಚು ಕಲ್ಯಾಣದ ಬೀದಿಗಳಲಿ ,ಹಾದಿಗಳಲಿಅವು ಹಾದಿಬೀದಿಗಳ ಹಾಡಾಗಲಿ ಗೋಮುಖ ವ್ಯಾಘ್ರಗಳುಖೆಡ್ಡತೋಡಿ ಸಹೋದರಿಯರಮೆದುಳಿಗೆ ವಿಷಉಣಿಸಲು ಸಜ್ಜಾದರೆಹೆಣ್ಣಿಂದಲೇ ಹೆಣ್ಣ ಹಣಿಯಲು ಬಲೆ ಎಣೆದರೆ ನಾ ಸುಮ್ಮನೇ ಕುಳಿತಿರಲೇ ? ವಿಷ ಕಂಡು ನಾನು ಮೌನಿಯಾಗಲೇ ??ನೀ ತಿಳಿದವಳು ; ಮರಳಿ ಬಂದಾಳು …ಹುಸಿ ನಕ್ಕು , ಹೂ ನಗೆ ಚೆಲ್ಲಿಯೆಂದು ಅಂದುಕೊಳ್ಳಲೇ ?? ನೀ ಅಲ್ಲಿನ ಆಸೆ ಅಮಿಷ ಪ್ರಶಸ್ತಿಗಳ ಕಾಲಿಂದ ಒದೆಯುವೆ ಎಂಬುದು ಗೊತ್ತು ನನಗೆ ;ಆದರೆ ಲೋಕಾಪಾವಾದವ ಪರಿವಾರ ಹುಟ್ಟಿಸದೇ ಬಿಡದು….ಹೂಮಾಲೆಯ ಹಗ್ಗ ಮಾಡಿ ಉರುಲು ಹಾಕಿಯೇ ಸಿದ್ಧ ಸನಾತನಿಗಳು ,ಅದು ಅವುಗಳ ಜಾಯಮಾನ ನೀ ಅಲ್ಲಿ ಸೌಜನ್ಯವನ್ನೇ ಬಿತ್ತಿದರೂ ಸಂಕೋಲೆ ತಪ್ಪದು ಅಲ್ಲಿ ಆ ಸಂಘ ಸಮೂಹದಲ್ಲಿ ಇರದಿದ್ದರೂ ತಪ್ಪದು ಅಪವಾದ ಖಚಿತ :ಸ್ತ್ರೀ ಕುಲಕೆ ಅವಮಾನಗಳ ಹೊರಿಸಿ‌ ಬಂಧಿಸಿದ ಜಗತ್ತಿದು ಸೀತೆಯನ್ನೇ ಆಗ್ನಿ ಪ್ರವೇಶ ಮಾಡಿಸಿದ ಪರಿವಾರದ ದಂಡಿದುಬೇಡ ಗೆಳತಿಬಂಗಾರದ ಕಿರಣದಿಂದ ನಿನ್ನ ಸುಟ್ಟಾರುಧಿಕ್ಕರಿಸು, ಧಿಕ್ಕರಿಸಿ‌ ಬಾ ಪರಿವಾರವಒಂಟಿಯಾಗಿ ನಿಲ್ಲು, ಬಾಳ ಗೆಲ್ಲು ಪರಿವಾರದ ವಿಷವ ಕಂಡವ ನಾನುಗೌರಿ ಕೊಂದವರ ಜೊತೆ ಎಂಥ ಮಾತು ಗೆಳತಿ??ಬಾ , ಬಂದು ಬಿಡುನೀ ಈ ನೆಲದ ಕಾವ್ಯವಾಗುಪ್ರಶ್ನಿಸು, ಪ್ರಶ್ನಿಸುತ್ತಲೇ ಇರು **********************************

ಪ್ರಶ್ನಿಸು ಪ್ರಶ್ನಿಸುತ್ತಲೇ ಇರು Read Post »

ಅಂಕಣ ಸಂಗಾತಿ, ಕಬ್ಬಿಗರ ಅಬ್ಬಿ

ಬಾನ್ಸುರಿ ಮತ್ತು ರಾಧೆ

ಕಬ್ಬಿಗರ ಅಬ್ಬಿ – ಸಂಚಿಕೆ -6 ಭೂಪೇಶ್ವರೀ ರಾಗದ ಆಲಾಪದ ಮಂದ್ರಸ್ಥಾಯಿಯ ಸ್ವರಗಳು, ಸಾಯಂಕಾಲದ ಸಾಂದ್ರತೆಯನ್ನು ಜೇನಿನಂತಾಗಿಸಿ, ಧಾರೆಯೆಷ್ಟು ಎಳೆಯಾದರೂ ಕಡಿಯದಂತೆ, ವಾತಾವರಣವನ್ನು ಆರ್ದ್ರವಾಗಿಸಿತ್ತು. ಗಾಯಕನ ( ಒ ಎಸ್. ಅರುಣ್‌) ನಾಭಿಯಿಂದ ಹೊರಟ ಸ್ವರಕಂಪನದ ತರಂಗ, ಎದೆಯನ್ನು ಹೊಕ್ಕು, ಭಾವ ಹೀರಿ, ಕಂಠದಿಂದ ಹೊರಹರಿಯುವಾಗ,  ಆಗಷ್ಟೇ ಸೋನೆ ಮಳೆ ನಿಂತು, ವಾತಾವರಣದ ತಂಪೊಳಗೂ ಆರ್ದ್ರ ಭಾವ. ಬಾನ್ಸುರಿಯ ದಪ್ಪ ಬಿದಿರಿನ ರಂಧ್ರಗಳಿಂದ ಸ್ವಾತಂತ್ರ್ಯ ಪಡೆದ ನಾದಸೆಲೆ ಅಂತರಂಗದ ಅಂತರ್ನಾದವೇ ಆಗಿತ್ತು. ತಬಲಾದ ಮೇಲೆ ಹೂಪಕಳೆಗಳು ತಡವಿದಂತೆ ವಾದಕನ ಬೆರಳುಗಳು, ಎದೆಗೆ ಎದೆ ಸೇರಿ ಅನುರಣಿಸಿದ ಸ್ಪಂದನವಾಗಿತ್ತು.  ಈ ರಾಗವೂ ಹಾಗೇ, ಇದರಲ್ಲಿ ಕೋಮಲ ಧೈವತದ ಸ್ಪರ್ಶ, ದೈವಿಕ ವಿರಹಸ್ವನವನ್ನು ಮನಸ್ಸಿನ ಕೋಣೆಯೊಳಗೆ ತುಂಬಿ, ನಿಧಾನವಾಗಿ ಮುಚ್ಚಿ ಆಸ್ವಾದಿಸುವಾಗ, ಕಣ್ರೆಪ್ಪೆಗಳು ತೆರೆಯಲಾಗದಷ್ಟು, ಹಿತಭಾರವೆನಿಸಿ, ಮಾನಸ ಲೋಕದೊಳಗಿದ್ದೆ. ಜಯದೇವ ಕವಿ, ‘ಗೀತಗೋವಿಂದ’ ಎದೆಗಿಳಿಸುವಾಗ, ಬಹುದಿನದಿಂದ ಮಿಲನ ಕಾಣದೆ ನೊಂದ,ರಾಧೆಯನ್ನು, ಕೃಷ್ಣ, ಹೃದಯತುಂಬಿ ಆರ್ತ ದನಿಯಲ್ಲಿ ಸಲ್ಲಪಿಸಿ ಆಕೆಯ ಕೋಮಲ ಪ್ರೀತಿಯ ನೋವನ್ನು ಹರಿಸುವ ಸಾಲುಗಳು, “ಪ್ರಿಯೇ… ಚಾರುಶೀಲೆ.. ಮುಂಚ ಮಯಿ ಮಾನಮ್ ಅನಿದಾನಮ್ ಸಪದಿ ಮದನಾಲಲೋ ದಹತಿ ಮಮ ಮಾನಸಮ್ ದೇಹಿ ಮುಖಕಮಲಮಧುಪಾನಮ್” (ಚಾರುಶೀಲೇ..ಮನಸ್ಸನ್ನು ದಹಿಸುತ್ತಿರುವನು ಮದನ!, ಪ್ರಿಯೇ, ದೇಹಿ! ಮುಖಕಮಲ ಮಧುಪಾನಮ್!) ಈ ಸಾಲುಗಳು ಸಂಗೀತಸ್ವರಗಳಿಗೆ ಹೊತ್ತೊಯ್ಯಲಾಗದಷ್ಟು ಭಾರವಾಗಿ, ಮನತುಂಬುವಾಗ, ಭಾವ ಜೊಂಪು ಎದೆಗಿಳಿದು ವಿರಹದ  ನೋವು ಅದೆಷ್ಟು ಹಿತಕರ ಅನುಭೂತಿ, ಅಲ್ಲವೇ!. ಜಯದೇವ ಈ ಅನುಭವ ಸಾಂದ್ರತೆಯಲ್ಲಿ ಬರೆಯುತ್ತಾನೆ! “ಸ್ಮರಗರಲ ಖಂಡನಮ್ ಮಮ ಶಿರಸಿ ಮಂಡನಮ್ ದೇಹಿ ಪದ ಪಲ್ಲವಮುದಾರಮ್’ ಜ್ವಲತಿ ಮಯಿ ದಾರುಣೋ ಮದನ ಕದನಾನಲೋ ಹರತು ತಪುದಾಹಿತ ವಿಕಾರಮ್” “ರಾಧೇ! ಚಾರುಶೀಲೇ, ನಿನ್ನ ಪಾದಗಳನ್ನು, ನನ್ನ ಶಿರಸ್ಸಿನ ಮೇಲಿರಿಸಿ,  ನನ್ನನ್ನು ಜ್ವಲಿಸುತ್ತಿರುವ ಮದನನನ್ನು ತಂಪಾಗಿಸು!”  ಎಂದು ಅಂಗಲಾಚುವ ಕೃಷ್ಣ!, ಜಯದೇವನಿಗೆ, ‘ಈ ಸಾಲುಗಳನ್ನು, ತಾನು ಹೇಗೆ ಬರೆದೆ?. ಕೃಷ್ಣ, ದೇವರಲ್ಲವೇ, ಆತನ ತಲೆಯೆಷ್ಟು ಪವಿತ್ರ, ಅದರ ಮೇಲೆ ರಾಧೆಯ ಪಾದ.. ಛೇ,ಇಂತಹ ಆಲೋಚನೆ ನನಗೆ ಹೇಗಾದರೂ ಬಂತು? ‘ ಎಂದು ದುಃಖವಾಗಿ, ಬರೆದ ಸಾಲುಗಳನ್ನು ಅಳಿಸಿ, ಹಾಳೆಗಳನ್ನು, ಪತ್ನಿ, ಪದ್ಮಾವತಿಯ ಕೈಗಿತ್ತು, ಮೀಯಲು ಹೋದನಂತೆ. ನದಿಯ ತಂಪು ನೀರಿಗನ ಹರಿವಿಗೆ ಮೈಯೊಡ್ಡಿ, ಒಳಹೊರಗೆ ಶುಚಿಯಾಗಿ ಪುನಃ ಬರೆಯಲು ಕುಳಿತರೆ, ಅಳಿಸಿ ಹೋದ ಅಕ್ಷರಗಳು ಹಾಳೆಗಳಲ್ಲಿ ಪುನಃ ಮೊದಲಿನ ಹಾಗೆಯೇ ಬರೆಯಲ್ಪಟ್ಟಿವೆ. “ಪದ್ಮಾವತೀ!, ಪ್ರಿಯೇ!, ಏನಿದಚ್ಚರಿ..ಈಗ ಅಳಿಸಿ ಹೋಗಿ, ಮಿಂದು ಬರುವಾಗ, ಪುನಃ ಅದೇ ಸಾಲುಗಳು!” ಪದ್ಮಾವತಿ ಉಲಿಯುತ್ತಾಳೆ,  “ಸ್ವಾಮೀ, ನೀವೇ ಮಧ್ಯದಲ್ಲಿ ಬಂದು, ಆ ಸಾಲುಗಳನ್ನು ಬರೆದು, ಹೀಗೇ ಇರಲಿ! ಎಂದು ಮೀಯಲು ಹೋದಿರಲ್ಲಾ!” ಕೃಷ್ಣನೇ ಬಂದು ಅಳಿಸಿದ ಅದೇ ಸಾಲುಗಳನ್ನು, ಬದಲಿಸದೆ ಬರೆದದ್ದು ಮನಸ್ಸಿಗಿಳಿದಾಗ, ಜಯದೇವ, ಭಾವೋತ್ಕರ್ಷ ಅನುಭವಿಸಿ, ಕೃಷ್ಣದರ್ಶನ ಪಡೆದ ಹೆಂಡತಿಯ ಕಾಲು ಮುಟ್ಟಿ ನಮಸ್ಕರಿಸಿ,  ಆ ಕಾವ್ಯಭಾಗದಲ್ಲಿ, ಪದ್ಮಾವತೀರಮಣ ಎಂಬ ಅಂಕಿತವನ್ನೂ ಹಾಕುತ್ತಾನೆ. ಕೃಷ್ಣ ಬದುಕನ್ನು, ಇತರರನ್ನು ತಲಪಿದ ರೀತಿಯೇ ಹಾಗೆ. ರಾಧೆಯ ಪಾದಸ್ಪರ್ಶ ಕೃಷ್ಣನ ತಲೆಯ ಮೇಲೆ, ಆತನನ್ನು ಸಣ್ಣದಾಗಿಸುವುದಿಲ್ಲ. ಆತನ ಆತ್ಮಾನುಯಾಯಿ, ಜಯದೇವ, ತನ್ನ ಹೆಂಡತಿಯ ಪಾದಮುಟ್ಟಿ ನಮಸ್ಕರಿಸಿದ್ದೂ ಆಶ್ಚರ್ಯವೇ?. ಈ ಅನುಭೂತಿ, ಪ್ರೀತಿ ದೇಹದ ಗಡಿ ದಾಟಿ,ಆತ್ಮಸಂಬಂಧಗಳಿಗೆ ಸ್ವರಸಂಯೋಜನೆ ಮಾಡೋವಾಗ, ಅದರಲ್ಲಿ ತುರೀಯಾವಸ್ತೆಯನ್ನು ಅನುಭವಿಸುವಾಗ, ಪಾದ, ಶಿರಸ್ಸು, ಇತ್ಯಾದಿಗಳು,ಕಾವ್ಯದ ಅಕ್ಷರಗಳಾಗಿ ಮಾತ್ರ ಉಳಿಯುತ್ತವೆ. ಭಕ್ತಿಯ ಮೂಲದಲ್ಲಿ, ಸಮರ್ಪಣೆಯಿದೆ. ಅದು ಒಂದು  ಚಿಂತನಾ ಮನೋಸ್ಥಿತಿಯಿಂದಲೂ ಉನ್ನತ ಮಟ್ಟದ್ದು. ರಾಧೆಯ ಪ್ರೀತಿ, ಪಾತ್ರವಿರದ ತೊರೆ! ಅಂತ ಬರೆಯುವ ಹೆಚ್. ಎಸ್ ವೆಂಕಟೇಶ ಮೂರ್ತಿ ಅವರ ಸಾಲುಗಳನ್ನು ನೋಡಿ. ” ಮಹಾ ಪ್ರವಾಹ ಮಹಾ ಪ್ರವಾಹ ತಡೆಯುವರಿಲ್ಲ, ಪಾತ್ರವಿರದ ತೊರೆ ಪ್ರೀತಿ ತೊರೆದರು ತನ್ನ ತೊರೆಯದು ಪ್ರಿಯನ, ರಾಧೆಯ ಪ್ರೀತಿಯ ರೀತಿ “ ರಾಧೆಯ ಪ್ರೀತಿ, ಅದು,ಉಕ್ಕಿ ಹರಿಯುವ ಪ್ರವಾಹ. ಅದರ ಹರಿವಿಗೆ ಸಾಧಾರಣ ನದಿಗಳಿಗೆ ಇರುವಂತೆ, ದಡಗಳಿಲ್ಲ, ನದೀಪಾತ್ರವಿಲ್ಲ. ಉಕ್ಕಿ, ಬೇಕಾದಂತೆ ಹರಿಯುವ, ತಡೆಕಟ್ಟು ಇಲ್ಲದ, ಶಕ್ತಿ ಪ್ರೀತಿಗೆ. ಎಲ್ಲವನ್ನೂ ತನ್ನೊಳಗೆ ಮುಳುಗಿಸಿ, ಆವರಿಸಿ, ಹರಿಯುವ ಮಹಾ ಪ್ರವಾಹ ಅದು. ಈ ಕವಿತೆಯ ಮೊದಲ ಸಾಲುಗಳಲ್ಲಿ, ಹೆಚ್.ಎಸ್.ವಿ ಅವರು, ರಾಧೆ ಮತ್ತು ಕೃಷ್ಣನ ಪ್ರೀತಿಯ ಬಗ್ಗೆ ಹೀಗೆ ಬರೆಯುತ್ತಾರೆ. ” ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು” ಲೋಕದ ಕಣ್ಣು, ಲೌಕಿಕ ಕಣ್ಣು, ಭೌತಿಕ ವ್ಯಾಪಾರೀ ಜಗತ್ತಿನ ಕಣ್ಣಿಗೆ, ರಾಧೆ, ಬರೇ ಒಬ್ಬ ಹೆಣ್ಣು. ಆದರೆ, ಕವಿಗೆ, ಈ ರಾಧೆ, ಪ್ರೀತಿಯ ಕಣ್ಣು. ಕೃಷ್ಣನ ತೋರುವ, ಪ್ರೀತಿಯು ನೀಡಿದ ಕಣ್ಣು. ಪ್ರೀತಿಯಲ್ಲಿ ಸ್ವಾರ್ಥ ಇರಲ್ಲ. ಪ್ರೀತಿಯಲ್ಲಿ ಕೊಡು ಕೊಳ್ಳುವಿಕೆಯ ಅರ್ಥಶಾಸ್ತ್ರ ಇರಲ್ಲ. ಪ್ರೀತಿಯಲ್ಲಿ ಪ್ರತಿಫಲದ ನಿರೀಕ್ಷೆ ಇರಲ್ಲ. ಶುದ್ಧಾಂತಃಕರಣದ ಅನಿರ್ವಚನೀಯ ಅನುಭೂತಿ ಅದು. ಸಂಪೂರ್ಣ ಸಮರ್ಪಣಾ ಭಾವದ ಅನುಭೂತಿ. ಅಂತಹ ಪ್ರೀತಿಯೇ ಕೃಷ್ಣದರ್ಶನ. ಆ ದರ್ಶನ,ಆ ಕಣ್ಣು, ಆ ಪ್ರೀತಿ ಯೇ , ರಾಧೆ ಅಂತ ಕವಿ ಹೇಳುವುದು, ಎಷ್ಟು ಗಹನವಾದದ್ದು ಅಲ್ಲವೇ. ” ನಾನು ನನ್ನದು ನನ್ನವರೆನ್ನುವ ಹಲವು ತೊಡಕುಗಳ ಮೀರಿ ಧಾವಿಸಿ ಸೇರಲು ಬೃಂದಾವನವ ರಾಧೆ ತೋರುವಳು ದಾರಿ “ ನಾನು, ನನ್ನವರು, ಎನ್ನುವ ತೊಡಕುಗಳನ್ನು ತೊರೆದು, ಪ್ರೀತಿಸುವ ದಾರಿ ರಾಧೆಯದ್ದು. ಇಲ್ಲಿ, ನಾನು, ನನ್ನವರನ್ನು ತೊರೆಯುವುದು,ಎಂದರೆ ಸರ್ವಸಂಗ ಪರಿತ್ಯಾಗಿಯಾಗಿ ಸನ್ಯಾಸಿಯಾಗುವುದಲ್ಲ. ನಾನು, ಎಂಬ, ನನ್ನವರು ಎಂಬ ಐಡೆಂಟಿಟಿ, ತೊರೆದಾಗ, ಎಲ್ಲವನ್ನೂ, ತಾನಾಗಿ ಕಾಣುವ ದೃಷ್ಟಿ ಪ್ರಾಪ್ತವಾಗುತ್ತೆ, ಎಲ್ಲವನ್ನೂ ಅನ್ ಕಂಡಿಶನಲ್ ಆಗಿ ಪ್ರೀತಿಸುವ ಸಾಧ್ಯತೆ ತೆರೆಯುತ್ತೆ. ಬದುಕನ್ನು ಅರ್ಥಪೂರ್ಣವಾಗಿಸಲು ಇದು ರಾಧೆ ತೋರುವ ದಾರಿ. ಹೆಚ್ ಎಸ್ ವಿ ಅವರು ಕೃಷ್ಣ,ರಾಧೆಯರ ಬಗ್ಗೆ ಇನ್ನೊಂದು ಇಂಪು ಇಂಚರದ ಹಾಡು ಬರೆದಿದ್ದಾರೆ. “ಪ್ರೀತಿ ಕೊಟ್ಟ ರಾಧೆಗೆ ಮಾತು ಕೊಟ್ಟ ಮಾಧವ ತನ್ನನಿತ್ತ ಕೊಳಲಿಗೆ ರಾಗ ತೆತ್ತ ಮಾಧವ “ ರಾಧೆ, ಪ್ರೀತಿಯನ್ನು ಸಂಪೂರ್ಣ ಸಮರ್ಪಣಾ ಭಾವದಿಂದ ಕೊಟ್ಟಾಗ, ಆತ,ಆಕೆಗಿತ್ತ ಭಾಷೆಯಾಗುತ್ತಾನೆ. ರಾಧೆ ಎಂಬ ಕೊಳಲು, ತನ್ನನ್ನು ತಾನೇ ಅರ್ಪಿಸಿ ಕೊಂಡಾಗ, ಕೃಷ್ಣ, ಆ ಕೊಳಲಿನ ದನಿಯಾಗುತ್ತಾನೆ, ರಾಗವಾಗುತ್ತಾನೆ. ಕೊಳಲು ಯಾವುದು, ಸ್ವರ ಯಾವುದು ಎಂಬ ಬೇಧವಿಲ್ಲದ ಸಂಯೋಗ ಅದು. ಇಲ್ಲಿ, ಇನ್ನೊಂದು ಸುಪ್ತ ಅರ್ಥವಿದೆ. ಕೊಳಲು,ಇಲ್ಲದೆ ರಾಗ ಹೊರಡುವುದೇ?. ಕೃಷ್ಣನೂ ಎಷ್ಟು ಸಮರ್ಪಿತ ಎಂದರೆ, ರಾಧೆಯಿಲ್ಲದೆ, ಪ್ರೀತಿಯಿಲ್ಲದೆ ಕೃಷ್ಣನೂ ಇಲ್ಲ. ಜಯದೇವ ಕವಿಯ ಅಷ್ಟಪದಿಯ ಕೃಷ್ಣ, ರಾಧೆಯ ಪಾದವನ್ನು ತನ್ನ ಶಿರಸ್ಸಿನ ಮೇಲಿರಿಸಿ, ರಾಧೆಯ ಪ್ರೀತಿಗೆ ಸಮರ್ಪಣೆಯಾಗುವ ಕ್ರಿಯೆಯೂ, ಹೆಚ್.ಎಸ್.ವಿ. ಅವರ ಕವಿತೆಯಲ್ಲಿ, ರಾಧೆಯೆಂಬ ಕೊಳಲಿಗೆ, ರಾಗವಾಗಿ ಯುನಿಫಿಕೇಷನ್ ಅನುಭವಿಸುವ  ಕೃಷ್ಣನ ಕ್ರಿಯೆಗೂ ವ್ಯತ್ಯಾಸವಿಲ್ಲ. ****************************** ಲೇಖಕರ ಬಗ್ಗೆ: ಹುಟ್ಟಿದ್ದು, ಗಡಿನಾಡ ಜಿಲ್ಲೆ,ಕೇರಳದ ಕಾಸರಗೋಡು ಜಿಲ್ಲೆಯಲ್ಲಿ. ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ, “ಮೆಟೀರಿಯಲ್ಸ್ ಸೈನ್ಸ್” ನಲ್ಲಿ ಸ್ನಾತಕೋತ್ತರ ಪದವಿ, ಐ.ಐ.ಟಿ. ಮದರಾಸು, ವಿನಿಂದ ಭೌತಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದು, ಕಳೆದ ಎರಡು ದಶಕದಲ್ಲಿ, ಡಿ.ಆರ್.ಡಿ.ಒ. ಹೈದರಾಬಾದ್ ನಲ್ಲಿ, ವಿಜ್ಞಾನಿಯಾಗಿ ವೃತ್ತಿ. ಸಾಹಿತ್ಯ, ಓದು ಬರಹ, ಹಾಗೂ ಸಂಗೀತ ಹೃದಯಕ್ಕೆ,ಹತ್ತಿರ.

ಬಾನ್ಸುರಿ ಮತ್ತು ರಾಧೆ Read Post »

ಇತರೆ

ಮೂವರು ವೃತ್ತಿ ಕಲಾವಿದರ ಕಣ್ಮರೆ

ಲೇಖನ ಮಲ್ಲಿಕಾರ್ಜುನ ಕಡಕೋಳ ಅಂಜಲಿದೇವಿ ಅವರು ಎಂಟುಮಂದಿ ಅಕ್ಕತಂಗಿಯರು. ಎಂಟೂ ಮಂದಿಯು ವೃತ್ತಿರಂಗಭೂಮಿ ಅಭಿನೇತ್ರಿಯರು. ಆದವಾನಿ ಸುಭದ್ರಮ್ಮ, ಆದವಾನಿ ಸೀತಮ್ಮ, ಆದವಾನಿ ನಾಗರತ್ನಮ್ಮ… ಹೀಗೆ ಗದಗ ಪ್ರಾಂತ್ಯದ ಸಾಂಸ್ಕೃತಿಕ ಲೋಕದಲ್ಲಿ ಆಗ ಆದವಾನಿ ಸೋದರಿಯರದು ಬಲುದೊಡ್ಡ ಐಕಾನ್ ಹವಾ. ಮೊನ್ನೆಯಷ್ಟೇ ಗಂಗಾವತಿಯಲ್ಲಿ ನಿಧನರಾದ ಜಿ.ಎನ್.ಅಂಜಲಿದೇವಿ (೭೨ ) ಆದವಾನಿ ಸೋದರಿಯರ ಬಳಗದ ಕೊನೆಯ ಕೊಂಡಿ. ಇವರ ತಂದೆ ಆ ಕಾಲದ ಸಂಗೀತ ವಿದ್ವಾಂಸ. ಹೆಸರಾಂತ ಮೃದಂಗ ವಾದಕ. ತಂದೆಯಿಂದ ಬಳುವಳಿಯಾಗಿ ಬಂದುದು ಸಂಗೀತ ಮತ್ತು ರಂಗಭೂಮಿ ಅಭಿನಯ ಕಲೆ. ಅಂಜಲಿದೇವಿಯ ಬಾಳಸಂಗಾತಿ ನೀಲಕಂಠಪ್ಪ ಹಾರ್ಮೋನಿಯಂ ನುಡಿಸುವಲ್ಲಿ, ರಾಗಸಂಯೋಜನೆ ಮಾಡುವಲ್ಲಿ ಸುಪ್ರಸಿದ್ಧರು. ಅಷ್ಟಕ್ಕೂ ಅವರೆಲ್ಲರೂ ವೀರೇಶ್ವರ ಪುಣ್ಯಾಶ್ರಮದ ಗರಡಿಯಲ್ಲಿ ಸಾಮು ತೆಗೆದವರು. ಅಂಜಲಿದೇವಿ ರಂಗಸೇವೆಗೈಯ್ದ ಪಡೇಸೂರ ಕಂಪನಿ, ಚಿತ್ತರಗಿ ಕಂಪನಿ, ಸುಳ್ಳದ ಕಂಪನಿ, ಅರಿಷಿಣಗೋಡಿ ಕಂಪನಿ, ಏಣಗಿ ಬಾಳಪ್ಪ ಕಂಪನಿ.. ಈ ಎಲ್ಲ ನಾಟಕ ಕಂಪನಿ ಹೆಸರುಗಳೇ ಅಭಿನೇತ್ರಿ ಅಂಜಲಿದೇವಿಯ ಔನ್ನತ್ಯಕ್ಕೆ ರಂಗಸಾಕ್ಷಿ. ಕೆಲಕಾಲ ನಾಟಕ ಕಂಪನಿ ಮಾಡಿ ಅಂಜಲಿದೇವಿ ಕೈ ಸುಟ್ಟುಕೊಂಡರು. ದ್ರೌಪದಿ ಪಾತ್ರಕ್ಕೆ ಮನ್ಸೂರು ಸುಭದ್ರಮ್ಮ ರಾಜ್ಯಮಟ್ಟದಲ್ಲಿ ಮಹೋನ್ನತಿ ಸಾಧಿಸಿದರೆ ಅಂಜಲಿದೇವಿ ಗದಗ ಸೀಮೆಯಲ್ಲಿ ಅಂತಹುದೇ ಹೆಸರು ಮಾಡಿದವರು. ಅಷ್ಟಕ್ಕೂ ಅವರದು ಶಾಸ್ತ್ರೀಯ ಸಂಗೀತ ಹಿನ್ನೆಲೆಯ ಕುಟುಂಬ. ಇಟಗಿ ಭೀಮಾಂಬಿಕೆ ಪಾತ್ರದಲ್ಲಿ ತಾದಾತ್ಮ್ಯ ಸಾಧಿಸಿದ ಅವರು ಎಚ್.ಆರ್.ಜಿ. ಕ್ಯಾಂಪಲ್ಲಿ ಭೀಮಾಂಬಿಕೆ ದೇವಸ್ಥಾನವನ್ನೇ ಸ್ಥಾಪಿಸಿದರು. ಕಡೆಗೆ ಭೀಮಾಂಬಿಕೆಯ ಸನ್ನಿಧಿಯಲ್ಲೇ ರಂಗಸಾಯುಜ್ಯ ಕಾಣಬೇಕಾಯಿತು. ಸಿ. ರಮೇಶ ನಾಟಕ ಕಂಪನಿಗಳ ವಲಯದಲ್ಲಿ ದಾವಣಗೆರೆ ರಮೇಶ ಎಂತಲೇ ಚಿರಪರಿಚಿತ ಹೆಸರು. ಐವತ್ತೆರಡು, ಸಾಯುವ ವಯಸ್ಸಲ್ಲ. ಖಳನಾಯಕ ಪಾತ್ರಕ್ಕೆ ಹೇಳಿ ಮಾಡಿಸಿದ ಫೇಷಿಯಲ್ ಎಕ್ಸ್ ಪ್ರೆಸೆನ್ ಅಲ್ಲಲ್ಲ ಟ್ಯಾಲೆಂಟ್. ಕಣ್ಣು, ಹುಬ್ಬು, ಹಣೆ, ತಲೆಗೂದಲುಗಳಲ್ಲೇ ಅಭಿನಯದ ಅಮೋಘ ಚತುರತೆ ತೋರುವಲ್ಲಿ ರಮೇಶ ಪರಿಣತ. ಆತ ನಾಯಕ ಪಾತ್ರ ಮಾಡಿದರೂ ಪ್ರೇಕ್ಷಕರಿಗೆ ಖಳನಾಯಕನದೇ ಖಾಸಾ ಕನಸು. ರಮೇಶ ಮಾಡುವ ಹಾಸ್ಯ ಪಾತ್ರದಲ್ಲೂ ವಿಲನ್ ಚಹರೆಗಳ ಹುಡುಕಾಟ ನಡೆಸುವಷ್ಟು ಪ್ರೇಕ್ಷಕರಲ್ಲಿ ಖಳನಾಯಕ ರಮೇಶ್ ಅಭಿನಯ ಪ್ರಭಾವದ ಬೇರುಗಳು. ಶರೀರ ಮತ್ತು ಶಾರೀರ ಎರಡಲ್ಲೂ ರಮೇಶ ಲಕ್ಷಣವಂತ. ಸಿನೆಮಾನಟ ಧೀರೇಂದ್ರ ಗೋಪಾಲ, ವಜ್ರಮುನಿ ಅವರನ್ನು ಆವಾಹಿಸಿಕೊಂಡು ರಮೇಶ ಅಭಿನಯಿಸುತ್ತಿದ್ದರೆ ಪ್ರೇಕ್ಷಕರಿಗೆ ಹಂಡೆಹಾಲು ಕುಡಿದ ಸಂಭ್ರಮ. ” ಅಂಣಾ ನನ್ನೊಳಗಿನ ಕಲಾವಿದ ರಮೇಶನಿಗಿಂತಲೂ ಸಿನಿಮಾ ನಟರನ್ನೇ ನನ್ನ ಮೂಲಕ ನೋಡುವಲ್ಲಿ ಪ್ರೇಕ್ಷಕರು ಇಷ್ಟ ಪಡುತ್ತಾರೆ. ನನಗೆ ಅನ್ನ ನೀಡುವ ಪ್ರೇಕ್ಷಕರು ಮುಖ್ಯ. ಅವರಿಗೆ ನನ್ನೊಳಗಿನ ನಾನು ಯಾವಾಗ ಬೇಕೆಂದು ಬಯಸುತ್ತಾರೋ ಆಗ ಕಲಾವಿದ ಅಪ್ಪಟ ರಮೇಶ ಅಭಿನಯಿಸುತ್ತಾನೆ.” ಹೀಗೆ ನನ್ನೊಂದಿಗೆ ಮಾತಾಡುವಾಗ ಅನೇಕ ಬಾರಿ ಹೇಳುತ್ತಿದ್ದ. ನಿಸ್ಸಂದೇಹವಾಗಿ ರಮೇಶ ಅನುಕರಣೆಯಿಂದಲೇ ಪ್ರಸಿದ್ದಿ ಪಡೆದವರಲ್ಲ. ಅವನೊಳಗೊಬ್ಬ ಅನನ್ಯತೆಯ ನಾಯಕ ನಟನಿದ್ದ. ಆರ್ದ್ರತೆ ತುಂಬಿದ, ಉಕ್ಕುವ ಸಂವೇದನೆಯ ಅಪ್ರತಿಮ ಕಲಾವಿದನಿದ್ದ. ಓರ್ವ ಸಹೃದಯಿ ಸನ್ಮಿತ್ರನಿದ್ದ. ಕಂಪನಿ ಸಾಂಗತ್ಯದ ರೂಢಿಗತ ನಡವಳಿಕೆಗಳನ್ನು ಮೀರದ ದುಃಸಾಧ್ಯತೆಗಳ ನಡುವೆ ರಂಗಕರ್ಮಿ ರಮೇಶನ ಅಕಾಲಿಕ ನಿರ್ಗಮನ ಕಂಪನಿ ನಾಟಕಗಳಿಗೆ ತುಂಬಲಾಗದ ನಷ್ಟವೇ ಸೈ. ಕೋಗಳಿ ಪಂಪಣ್ಣ ಈ ಹೆಸರಿನಲ್ಲೇ ಸಾರಸ್ವತದ ಫೀಲಿಂಗ್ಸ್. ಸಂಗೀತ ಮತ್ತು ಸಾಹಿತ್ಯ ಸಮೃದ್ಧಿಯ ತುಳುಕಾಟ. ಕೋಗಳಿ ಎಂಬುದು ಕೋಗಿಲೆಯ ಮತ್ತು ಪಂಪಣ್ಣ ಎಂಬುದು ಪಂಪಕವಿಯ ನೆನಪು ತರಿಸುತ್ತವೆ. ಹೌದು ಪಂಪಣ್ಣನ ರಂಗಬದುಕು ಈ ಮಾತಿಗೆ ಹೆಚ್ಚು ಹತ್ತಿರ. ಅಷ್ಟಕ್ಕೂ ಬಳ್ಳಾರಿ ಜಿಲ್ಲೆಯ ಕೋಗಳಿಯು ಮಹಾಕವಿ ಶಿವಕೋಟಾಚಾರ್ಯರ ಕಾಯಕಭೂಮಿ. ಹುಟ್ಟಿನಿಂದಲೇ ಪೌರಾಣಿಕ ನಾಟಕಗಳಿಗೆಂದೇ ಶರೀರ ಮತ್ತು ಶಾರೀರ ಕಟ್ಟಿಕೊಂಡೇ ಬಂದಂತಹ ರಂಗ ಸಂಪನ್ನತೆ ನಮ್ಮ ಪಂಪಣ್ಣನದು. ಹದಿನಾಲ್ಕನೇ ವಯಸಿಗೆ ಸೀತೆಯ ಪಾತ್ರ. ದಶಕಕಾಲ ಹಲವಾರು ಸ್ತ್ರೀ ಪಾತ್ರಗಳಲ್ಲಿ ಶಹಬ್ಬಾಶಗಿರಿ. ನಂತರ ಪೌರಾಣಿಕ ನಾಟಕಗಳಲ್ಲಿ ಮುನ್ನಡೆ ಸಾಧಿಸಿದ ಪಂಪಣ್ಣ ಹಿನ್ನಡೆಗೆ ತಿರುಗಲಿಲ್ಲ. ವೃತ್ತಿ ನಾಟಕಗಳ ಮೂಲಕ ಗ್ರಾಮೀಣ ರಂಗಭೂಮಿಯ ಭೂಮತ್ವ ಮೆರೆದ ಪಂಪಣ್ಣ ಆಧುನಿಕ ರಂಗಭೂಮಿಯ ಸಂಗ್ಯಬಾಳ್ಯ, ಅಂಗುಲಿಮಾಲ, ಆಮ್ರಪಾಲಿ ಮೊದಲಾದ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ರಕ್ತರಾತ್ರಿ ನಾಟಕದ ಕೃಷ್ಣನ ಪಾತ್ರ ಹೊರತು ಪಡಿಸಿ ಬಾಕಿ ಎಲ್ಲ ಪುರುಷ ಪಾತ್ರಗಳಲ್ಲಿ ಮನೋಜ್ಞ ಅಭಿನಯ. ಗುರುಮುಖೇನ ಸಂಗೀತ ಕಲಿತು ಕಂದಪದ್ಯಗಳನ್ನು ತುಂಬಾ ಸೊಗಸಾಗಿ ಹಾಡುವಲ್ಲಿ ಪರಿಣಿತರು. ಇದು ಯಾರತಪ್ಪು? ಯಾರು ನನ್ನವರು? ಇವನು ಗೆಳೆಯನೇ? ಹೀಗೆ ಪ್ರಶ್ನಾರ್ಥಕ ಚಿಹ್ನೆಹೊತ್ತ ನಾಟಕಗಳ ಮತ್ತು ಗುರುಭಕ್ತಿ ಗೀತಾಂಜಲಿ ಎಂಬ ಕವನ ಸಂಕಲನದ ರಚಯಿತೃ. ನೂರಕ್ಕೂ ಹೆಚ್ಚು ನಾಟಕಗಳಲ್ಲಿ ಅಮೋಘ ಅಭಿನಯ, ಮುನ್ನೂರಿಪ್ಪತ್ತಕ್ಕೂ ಹೆಚ್ಚು ನಾಟಕಗಳ ನಿರ್ದೇಶನ ಮಾಡಿದ ಹೆಗ್ಗಳಿಕೆ ಪಂಪಣ್ಣರದು. ಲಾಲಿತ್ಯದ ಮಾತುಗಳ ಈ ವಾಗ್ಮಿ ಒಂದು ಅವಧಿಗೆ ಜಿಲ್ಲಾ ಪಂಚಾಯತ್ ಸದಸ್ಯನಾಗಿ ಕ್ಷೇತ್ರದ ಜನರ ಪ್ರೀತಿಗೆ ಪಾತ್ರ. ತುಂಬಾ ತಡವಾಗಿ ಪತ್ತೆಯಾದ ಕ್ಯಾನ್ಸರ್ ನಿಂದ ಬಳಲಿ ಎಪ್ಪತ್ತಾರನೇ ಏರುವಯಸ್ಸಲ್ಲಿ ನಿಧನ. *************************************************************

ಮೂವರು ವೃತ್ತಿ ಕಲಾವಿದರ ಕಣ್ಮರೆ Read Post »

ಕಾವ್ಯಯಾನ

ಶಾಮ

ಕವಿತೆ ಅರ್ಪಣಾ ಮೂರ್ತಿ ಮರೆತು ಮರೆತುನೆನಪಾಗುವನಿನ್ನ ನೆನಪುಗಳು ನೆನಪಾಗಲೆಂದೆಮರೆವು ಮರೆಸಿನೆನಪಿಸಿದೆ ಈಗ, ಗೋಕುಲದಸಂಜೆಗಳುಹೀಗೆ ನಿನ್ನನೆನಪಿನ ನೆಪದಿಂದಕೆಂಪೇರಿಹಗಲಮರೆಸಿದಾಗೆಲ್ಲನೀನಿಲ್ಲಿ ನನ್ನನೆನಪಿಗಿಳಿದಿರುತ್ತಿನೋಡು, ಬಿಗಿದ ಗಂಟಲಬಿಕ್ಕುನಿನ್ನ ನೆನಪಿಗೆ ನಾನಿಳಿದಿರುವೆನೆಂಬುದ ನೆನಪಿಸಿಬಿಡುವುದುಮರೆಯದಂತೆ, ನೀನೆಂದರೆ ಹೀಗೆನೆನಪಾಗದನೆನಪುಮರೆಯಲಾರದಮರೆವು. *******************************

ಶಾಮ Read Post »

ಕಾವ್ಯಯಾನ

ನಿನದೇ ನೆನಪು

ಕವಿತೆ ಮಾಲತಿ ಶಶಿಧರ್ ಈಗೀಗ ದಾರಿಯಲಿ ಒಬ್ಬಳೇಸ್ಕೂಟಿ ಬಿಡುವಾಗ ಹಿಂದೆಯಾರೋ ಕೂತು ನನ್ನನೆಚ್ಚಿನ ಗೀತೆ ಗುನುಗಿದಂತೆ,ತಿರುಗಿ ನೋಡಿದರೆ ಖಾಲಿಸೀಟುಕನ್ನಡಿಯ ಸರಿಪಡಿಸಿಗಮನಿಸಿದರೆ ಕಣ್ಮನಸೆಳೆವ ರೂಪವೊಂದುನಸುನಕ್ಕನಂತೆ.. ಇತ್ತ ಮನೆಯ ಮುಂದಿನರಂಗೋಲಿಯ ಚುಕ್ಕಿಯೊಂದುತಪ್ಪಿಸಿಕೊಂಡಂತೆಎಷ್ಟೇ ಗೆರೆ ಎಳೆದರುರಂಗೋಲಿ ಅಪೂರ್ಣವಾದಂತೆ.. ಮನೆಯ ಸೂರಿನ ಮೇಲೆಕಡಜವೊಂದು ಕಟ್ಟಿದ್ದಮಣ್ಣಿನ ಗೂಡು ಕುಸಿದುಬಿದ್ದಂತೆ,ಮನೆಗಾಗಿ ಹುಡುಕಾಡಿಏಕಾಂಗಿಯಾಗಿ ಬಿಕ್ಕಿದಂತೆ.. ಸ್ನೇಹಿತೆ ನೀಡಿದಗಿಳಿಮರಿ ಜೋಡಿಗಳುಪಂಜರದಲ್ಲಿಬಂಧಿಯಾದಂತೆ,ಲೋಕವನೇ ಮರೆತುಕೊಕ್ಕಿಗೆ ಕೊಕ್ಕುಅಂಟಿಸಿಕೊಂಡು ಅದೇನೊಮಾತಾಡಿದಂತೆ ಹಾಡಿನಲ್ಲೂ, ಕನ್ನಡಿಯಲ್ಲೂಅಪೂರ್ಣತೆಯಲ್ಲೂ,ಅಸಹಾಯಕತೆಯಲ್ಲೂ,ಪಂಜರದಲ್ಲೂಮಾತಿನಲ್ಲೂ,ನೋವಲ್ಲು ನಲಿವಿನಲ್ಲೂಬರೀ ನಿನದೇ ನೆನಪು.. ******************************

ನಿನದೇ ನೆನಪು Read Post »

ಇತರೆ

ಏಕಾಂತದಿಂದ ಲೋಕಾಂತಕ್ಕೆ

ಏಕಾಂತದಿಂದ ಲೋಕಾಂತಕ್ಕೆ –ಲೇಖಿಕಾ ಸಾಹಿತ್ಯ ವೇದಿಕೆ ಪುಸ್ತಕ ಪರಿಚಯ ಸಾರ್ಥ್ಯಕ್ಯ ಡಿ.ಯಶೋದಾ ವಿಶ್ವಕ್ಕೇ ಕೊರೋನ   ಕಾರ್ಮೋಡ ಕವಿದಿರುವ ಇಂತಹ ಕಾಲದಲ್ಲಿ ಎಲ್ಲರೂ ಒಟ್ಟಿಗೆ ಸೇರಿ ತಾಂತ್ರಿಕತೆಯ ಮೂಲಕ ಒಂದು ಗೂಡುವು ದು ವಿಶೇಷ. ಏಕಾಂತದಿಂದ ಲೋಕಾಂತಕ್ಕೆ ಎಂಬಂತೆ ತಂತ್ರ ಜ್ಞಾನದ ಮೂಲಕ ಸಂವಹನ ಮಾಡುವುದು ಇಂದಿಗೆ ಅತಿ ಮುಖ್ಯ ಎಂಬುದು ಹಿರಿಯ ಪತ್ರಕರ್ತೆ ಡಾ. ಆರ್. ಪೂರ್ಣಿಮಾ ಅಭಿಮತ.ಲೇಖಿಕಾ ಸಾಹಿತ್ಯ ವೇದಿಕೆ ಯ ನನ್ನ ಮೆಚ್ಚಿನ ಪುಸ್ತಕ ಪರಿಚಯದ ಫೇಸ್‌ಬುಕ್ ಲೈವ್ ಸರಣಿ ಕಾರ್ಯಕ್ರಮದ ಅವಲೋಕನದಲ್ಲಿ ಮಾತನಾಡಿದ ಅವರು, ಮಹಿಳೆ ತನ್ನ ಚಿಂತನೆ, ಅನಿಸಿಕೆಯನ್ನು ಹಂಚಿಕೊ ಳ್ಳುವುದಕ್ಕೆ ಇದಕ್ಕಿಂತ ಉತ್ತಮ ಸಾಧನ ಬೇರೆ ಏನಿದೆ ಎಂದು ಪ್ರಶ್ನಿಸಿದರೆ. ಕೊರೋನಾ ಕಾರಣವಾಗಿ ಬಹಳಷ್ಟು ಮಂದಿ ಮನೆಯಲ್ಲಿ ಬಂಧಿ. ಆದರೆ ಮನಸ್ಸನ್ನು ಬಂಧಿಸಲು ಸಾಧ್ಯವೇ? ನಮ್ಮ ಕಲ್ಪನೆ, ಕನಸು,ಕ್ರಿಯಾಶೀಲತೆಯನ್ನು ಎಂದೂ ಬಂಧಿಸಲು ಸಾಧ್ಯವಿಲ್ಲ.ಕೊರೋನಾದಿಂದ ಒಂದು ರೀತಿಯಲ್ಲಿ ನಮಗೆ ನಿರ್ಬಂಧ ಉಂಟಾಗಿದ್ದರೂ ನಮ್ಮ ಹಲವಾರು ಚಟುವಟಿ ಕೆಗಳು ಸಮೃದ್ಧಿಗೊಳ್ಳುತ್ತಿವೆ. ಯಾರನ್ನೂ ಭೇಟಿಯಾಗದೆ, ಸಭೆ, ಸಮಾರಂಭಗಳು ನಡೆಯದೆ ಇರುವಂತಹ ಈ ಕಾಲದಲ್ಲಿ,ತಂತ್ರಜ್ಞಾನದ ಮೂಲಕ ಮನೆಯಲ್ಲಿಯೇ ಕೂತು ಜಗತ್ತನ್ನೇ ಸಂಚರಿಸುವ, ವೈವಿಧ್ಯಮಯ ಜನರನ್ನು ಭೇಟಿಯಾಗುವ, ವಿವಿಧ ವಿಚಾರಗಳನ್ನು ತಿಳಿದುಕೊಳ್ಳುವ ಸದಾವಕಾಶ ನಮ್ಮದು. ಕತೆ, ಕವನ, ವಚನಗಳ ಗೋಷ್ಠಿಗಳು, ವಿವಿಧ ವಿಚಾರಗಳ ಮಂಡನೆ, ಸ್ತ್ರೀ ವಾದಿ ಚಿಂತನೆಗಳ ಚರ್ಚೆಗಳು,ಪುಸ್ತಕ ಗಳ ಪರಿಚಯ, ಹಾಡು, ನೃತ್ಯ… ಒಂದೇ ಎರಡೇ ಸಾಹಿತ್ಯ, ಸಾಂಸ್ಕೃತಿಕ ಕಲೆಗಳಿಗೆ ಸಂಬಂಧಿಸಿದಂತೆ ಹಲವಾರು ಕಾರ್ಯಕ್ರಮಗಳು ಫೇಸ್‌ಬುಕ್ ಲೈವ್‌ನಲ್ಲಿ ನಡೆಯುತ್ತಿವೆ. ನಮ್ಮ ನಮ್ಮ ವಿಷಯ ಮಂಡನೆಗಳಿಗೆ, ನಮ್ಮ ಪ್ರತಿಭಾ ಪ್ರದರ್ಶನಕ್ಕೆ ದೊಡ್ಡ ದೊಡ್ಡ ಸಮಾರಂಭಗಳೇ ಆಗಬೇಕೆಂ ದೇನಿಲ್ಲ,ನೂರಾರು ಜನರು ಸೇರಬೇಕು ಎಂದೂ ಇಲ್ಲ. ಫೇಸ್‌ಬುಕ್ ವೇದಿಕೆಯಲ್ಲಿ, ನಮ್ಮ ಚೌಕಟ್ಟಿನಲ್ಲಿ ಅಚ್ಚು ಕಟ್ಟಾಗಿ ಮನಮುಟ್ಟುವಂತಹ ಕಾರ್ಯಕ್ರಮಗಳು ಜರುಗು ತ್ತಿರುವುದು ಜಗಮೆಚ್ಚುಗೆಗೆ ಕಾರಣವಾಗಿದೆ.ಇಂದಿನ ಪರಿ ಸ್ಥಿತಿಯನ್ನು ಅನುಕೂಲಕರವಾಗಿ ಮಾಡಿಕೊಂಡು ಬೆಂಗ ಳೂರಿನ ಲೇಖಿಕಾ ಸಾಹಿತ್ಯ ವೇದಿಕೆಯು ಲೇಖಕಿಯರ ಮೂಲಕ ವಿವಿಧ ಪುಸ್ತಕಗಳನ್ನು ಪರಿಚಯಿಸುವ ಕಾರ್ಯ ಕ್ರಮ ಮಾಡಿದ್ದು ಸ್ಫೂರ್ತಿದಾಯಕವಾಗಿದೆ. ಲೇಖಿಕಾ ಸಾಹಿತ್ಯ ವೇದಿಕೆಯ ನನ್ನ ಮೆಚ್ಚಿನ ಪುಸ್ತಕ ಪರಿಚ ಯ ಸರಣಿ ಕಾರ್ಯಕ್ರಮ ಫೇಸ್‌ಬುಕ್ ಲೈವ್‌ನಲ್ಲಿ ಒಂ ದೂವರೆ ತಿಂಗಳ ಕಾಲ ಮೂಡಿ ಬಂದು ಜನಪ್ರಿಯಗೊಂ ಡಿದೆ. ಇದರ ಯಶಸ್ಸು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ದ ಎಲ್ಲ ಲೇಖಕಿಯರಿಗೆ ಸಲ್ಲುತ್ತದೆ. ಇಂತಹ ವಿನೂತನ ಕಾರ್ಯಕ್ರಮದ ರೂವಾರಿ ಲೇಖಿಕಾ ಸಾಹಿತ್ಯ ವೇದಿಕೆಯ ಸಂಚಾಲಕರಾದ ಲೇಖಕಿ ಶೈಲಜಾ ಸುರೇಶ್ ಅವರು ವಿಶೇ ಷವಾಗಿ ಅಭಿನಂದನಾರ್ಹರು.ಈ ಕಾರ್ಯಕ್ರಮದ ಒಂದು ಗಮನಾರ್ಹ ಅಂಶವೆಂದರೆ ಈ ಫೇಸ್‌ಬುಕ್ ತಂತ್ರಜ್ಞಾನದ ಅರಿವಿಲ್ಲದವರು, ಅದಕ್ಕೆ  ತೊಡಗಿಕೊಳ್ಳದವರೂ ಸಹ ಇದರಲ್ಲಿ ಭಾಗವಹಿಸಿ ಸೈ ಎನಿಸಿಕೊಂಡದ್ದು. ಫೇಸ್‌ಬಕ್ ಲೈವ್‌ನಲ್ಲಿ ಕೆಲವೊಮ್ಮೆ ಗೊಂದಲವಿದ್ದದ್ದು ನಿಜ, ಆದರೆ ಮಹಿಳೆಯರು ಗಲಿಬಿಲಿಯಾಗಲಿಲ್ಲ. ೨೫ ಲೇಖಕಿಯರು ೨೫ ಕೃತಿಗಳು,ಕಾರ್ಯಕ್ರಮದಲ್ಲಿ ೨೫ ಲೇಖಕಿಯರು ೨೫ ಕೃತಿಗಳು ಮತ್ತು ೨೫ ಕೃತಿಕಾರರನ್ನು ಪರಿಚಯಿಸಿದರು. ಭೈರಪ್ಪನವರ ಪರ್ವ ಕಾದಂಬರಿಯಿಂ ದ ಶುರುವಾಗಿ ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊ ತ್ತಾದಾಗ ಕೃತಿಯೊಂದಿಗೆ ಪುಸ್ತಕ ಪರಿಚಯ ಕಾರ್ಯಕ್ರಮ ಮುಕ್ತಾಯವಾಗುತ್ತದೆ.ಜೂನ್ ೧೯ರಂದು ಡಾ. ಜಯಂತಿ ಮನೋಹರ್  ಅವರು ಡಾ. ಎಸ್.ಎಲ್. ಭೈರಪ್ಪ ಅವರ ಪರ್ವ ಕಾದಂಬರಿಯನ್ನು  ಪರಿಚಯಿಸುವ ಮೂಲಕ ಲೇ ಖಿಕಾ ಸಾಹಿತ್ಯ ವೇದಿಕೆಯ ‘ನನ್ನ ಮೆಚ್ಚಿನ ಪುಸ್ತಕ ಪರಿಚ ಯ’ಸರಣಿ ಕಾರ್ಯಕ್ರಮದ ಪರ್ವವನ್ನು ಶುರುಮಾಡಿದ ರು. ನಂತರ ಮಾಲತಿ ಮುದಕವಿ ಅವರು ಶಂಕರ ಮೊಕಾ ಶಿ ಪುಣೇಕರ ಅವರ ಗಂಗವ್ವ ಗಂಗಾಮಾಯಿ, ಶೈಲಜಾ ಸುರೇಶ್ ಅವರು  ಡಾ. ಎಸ್.ಎಲ್. ಭೈರಪ್ಪ ಅವರ ಗೃಹ ಭಂಗ, ಪ್ರಜ್ಞಾ ಮತ್ತಿಹಳ್ಳಿ ಅವರು ಜಯಂತ್ ಕಾಯ್ಕಿಣಿ ಅವರ ಚಾರ್‌ಮಿನರ್, ಡಿ.ಎನ್.ಗೀತಾ ಅವರು ಗಿರಿಮನೆ ಶ್ಯಾಮರಾವ್ ಅವರ ಒಂದು ಆನೆಯ ಸುತ್ತಾ, ವಿಜಯಾ ಗುರುರಾಜ್ ಅವರು ಭಾಗ್ಯಲಕ್ಷ್ಮೀ ಅವರ ತರಗು, ಸಹನಾ ಪ್ರಸಾದ್ ಅವರು ಬಿ.ಯು. ಗೀತಾ ಅವರ ಕೈಹಿಡಿದು ನಡೆಸೆನ್ನನು,  ಎ. ಎಸ್. ವಸುಂಧರಾ ಅವರು ಯು.ಆರ್. ಅನಂತಮೂರ್ತಿ ಅವರ ಸಂಸ್ಕಾರ, ಮಧುರಾ ಕರ್ಣಮ್ ಅವರು  ಶ್ರೀನಿವಾಸ ವೈದ್ಯ ಅವರ ಹಳ್ಳ ಬಂತು ಹಳ್ಳ,  ಕೃಷ್ಣಬಾಯಿ ಹಾಗಲವಾಡಿ ಅವರು ಕಮಲಾ ಹಂಪನಾ ಅವರ ಬಲಾಕ, ಡಿ. ಯಶೋದಾ ಅವರು ಬೇಬಿ ಹಾಲ್ದಾರ್ ಅವರ  ನೋವು ತುಂಬಿದ ಬದುಕು, ಸುಮಾ ವೀಣಾ ಅವರು ಡಿವಿಜಿ ಅವರ ಅಂತಃಪುರ ಗೀತೆಗಳು, ವಿಭಾ ಪುರೋಹಿತ್ ಅವರು ಕೆಎಸ್ ನರಸಿಂಹಸ್ವಾಮಿ ಅವರ ತೆರೆದ ಬಾಗಿಲು,  ಶಾಂತಲಾ ಸುರೇಶ್ ಅವರು ಸೋನು ಅವರ ಸಂಶಯದ ಬಲೆ, ಎಂ. ವಾಣಿ ಅವರು ಸುರೇಶ್ ಸೋಮಪುರ ಅವರ ಅಘೋರಿಗಳ ನಡುವೆ, ರತ್ನಾ ನಾಗರಾಜ್  ಅವರು ಮಾಣಿಕ್ ಬಂಡೋಪಾಧ್ಯಯ ಅವರ ಪ್ರಿಮಿವಾಲ್ ಮತ್ತು ಇತರ ಕತೆಗಳು, ಅರುಣಾ ಉದಯ ಭಾಸ್ಕರ್ ಅವರು ಗುರುರಾಜ ಕರ್ಜಗಿ ಅವರ ಕರುಣಾಳು ಬಾ ಬೆಳಕೆ,  ಶೈಲಜಾ ಪ್ರಸಾದ್ ಅವರು ನೇಮಿಚಂದ್ರ ಅವರ ಸಾವೇ ಬರುವುದಿದ್ದರೆ ನಾಳೆ ಬಾ,  ಲೇಖಿಕಾ ವೇದಿಕೆಯ ಹಿರಿಯ ಲೇಖಕಿ ಸತ್ಯವತಿ ರಾಮನಾ ಥ್ ಅವರು ಶ್ರೀ ಸಚ್ಚಿದಾನಂದ ಸರಸ್ವತಿ. ಸ್ವಾಮೀಜಿಯವರ  ಗೀತಾ ಶಾಸ್ತ್ರೋಪದೇಶ ಸೋಪಾನ ಪಂಕ್ತಿ, ಇಂದಿರಾ ಶರಣ್ ಜಮ್ಮಲದಿನ್ನಿ ಅವರು ವಿವೇಕ್ ಶಾನ್‌ಬಾಗ್ ಅವರ ಹುಲಿಸವಾರಿ,ಎಲ್.ಎಚ್.ಶಕುಂತಲಾ ಅವರು ಶಿವರಾಮ ಕಾರಂತರ ಅಳಿದ ಮೇಲೆ, ಸುಶೀಲಾ ಸೋಮಶೇಖರ್ ಅವರು ನರಹಳ್ಳಿ ಬಾಲಸುಬ್ರಹ್ಮಣ್ಯಂ ಅವರ ಕೆ.ಎಸ್. ನರಸಿಂಹಸ್ವಾಮಿ, ಪರಿಣಿತಾ ರವಿ ಅವರು ಎ.ಆರ್. ಮಣಿಕಾಂತ ಅವರ ಅಪ್ಪನೆಂಬ ಆಕಾಶ,ನಾಗರ ತ್ನಾ ಮೂರ್ತಿ ಅವರು ಶತಾವಧಾನಿ ಆರ್. ಗಣೇಶ್ ಅವರ ಧೂಮದೂತ,ವಿನುತಾ ಹಂಚಿನಮನೆ ಅವರು ನೇಮಿಚಂ ದ್ರ ಅವರ ಯಾದ್ ವ ಶೇಮ್,  ಸವಿತಾ ನಾಗೇಶ್ ಅವರು  ನುಗ್ಗೇಹಳ್ಳಿ ಪಂಕಜಾ ಅವರ ಮದುವೆ ಗೊತ್ತಾದಾಗ ಪುಸ್ತ ಕಗಳನ್ನು ಪರಿಚಯಿಸಿದರು. ಹಿರಿಯ ಲೇಖಕಿಯರ ಅವಲೋಕನ ಐದು ವಾರದ ಈ ಕಾರ್ಯಕ್ರಮದ ಬಗ್ಗೆ ಮತ್ತೊಂದು ವಾರ ಐದು ಹಿರಿಯ ಲೇಖಕಿಯರಾದ ಬಿ.ಯು. ಗೀತಾ, ವನಮಾಲ ಸಂಪನ್ನ ಕುಮಾರ್, ಕಾನ್ಸೆಪ್ಟಾ ಫರ್ನಾಂಡಿಸ್, ಆರ್. ಪೂರ್ಣಿಮಾ ಹಾಗೂ ಶೈಲಜಾ ಸುರೇಶ್ ಅವರು ಅವಲೋಕನ ಮಾಡಿ ದ್ದು ವಿಶೇಷ. ಇದರ ಜೊತೆಗೆ ಪ್ರತಿ ಶುಕ್ರವಾರ ಪುಸ್ತಕ ಪರಿ ಚಯವಾದ ಮೇಲೆ ಒಂದು ವಾರದ ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ತಮ್ಮ ಅನಿಸಿಕೆಯನ್ನು ಶೈಲಜಾ ಸು ರೇಶ್ ಅವರು ವ್ಯಕ್ತಪಡಿಸುತ್ತಿದ್ದರು. ಪುಸ್ತಕದ ಬಗ್ಗೆ ತಿಳಿಸುವಾಗ ಪುಸ್ತಕದ ಕತೆ ಹೇಳುವ ಅವ ಶ್ಯಕತೆ ಇಲ್ಲ, ಕೃತಿಕಾರರ ಶೈಲಿಯ ಬಗ್ಗೆ, ಕತೆಯನ್ನು ಬೆಳೆಸಿ ಕೊಂಡು ಹೋಗುವ ರೀತಿಯನ್ನು ಹೇಳಿದರೆ ಉತ್ತಮ ಎಂ ದು ಲೇಖಕಿ ಬಿ.ಯು. ಗೀತಾ ಅವರು ಸಲಹೆ ನೀಡಿದರು. ಓದು ನಾವು ಕಾಣದ ಪ್ರಪಂಚವನ್ನು ತೆರೆದಿಡುತ್ತದೆ ಹಾಗಾ ಗಿ ಹೆಚ್ಚು ಹೆಚ್ಚು  ಓದಬೇಕು ಎಂದೂ ಅವರು ಹೇಳಿದರು. ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷರಾದ ವನಮಾ ಲ ಸಂಪನ್ನಕುಮಾರ್ ಅವರು ಪುಸ್ತಕಗಳನ್ನು ಓದುವುದ ರಿಂದ ನಮ್ಮಲ್ಲಿ ಒಂದು ಗಟ್ಟಿತನ ಮೂಡುತ್ತದೆ. ಓದುವು ದರಿಂದ ಬರೆಯುವ ಹಂಬಲವೂ ಉಂಟಾಗುತ್ತದೆ ಎಂದ ರು. ಮಹಿಳಾ ವೇದಿಕೆಯಲ್ಲಿ ಮಹಿಳೆಯರ ಪುಸ್ತಕಗಳನ್ನೇ ಪರಿ ಚಯಿಸುವುದು ಸೂಕ್ತ ಎಂದು ಬೆಂಗಳೂರು ಆಕಾಶವಾಣಿ ಕೇಂದ್ರದ ಕಾನ್ಸೆಪ್ಟಾ ಫರ್ನಾಂಡಿಸ್ ಅವರು ಹೇಳಿದರು.  ಎಷ್ಟೋ ಸಂದರ್ಭಗಳಲ್ಲಿ ಮಹಿಳೆಯರ ಪುಸ್ತಕಗಳು ಪರಿಗಣನೆಗೇ ಬರುವುದಿಲ್ಲ, ಸಾಹಿತ್ಯ ಸಮ್ಮೇಳನಗಳಲ್ಲಿ ಕೆಲವರಿಗಷ್ಟೇ ಗೋಷ್ಟಿಗಳ ಅಧ್ಯಕ್ಷತೆ ಸಿಕ್ಕಿರುತ್ತದೆ. ಹಾಗಾಗಿ ನಮ್ಮದೇ ವೇದಿಕೆ ಇರುವಾಗ ನಾವು ನಮ್ಮದೇ ಪುಸ್ತಕಗಳನ್ನು ಪರಿಚಯಿಸುವ ಕೆಲಸ ಮಾಡಬಹುದು ಎಂದರು.ಒಂದು ಪುಸ್ತಕ ಓದಿದಾಗ ನಮಗೆ ಸಾಕಷ್ಟು ವಿಷಯ ತಿಳಿಯುತ್ತದೆ. ಆ ವಿಷಯಗಳನ್ನು ಬೇರೆಯ‌ವ ರೊಂದಿಗೆ ಹಂಚಿ ಕೊಂಡಾಗ ನಾವೂ ಕೂಡ ವಿಚಾರಗಳಲ್ಲಿ ಬೆಳೆಯುತ್ತವೆ, ಇನ್ನೊಬ್ಬರ ವಿಚಾರವೂ ತಿಳಿಯುತ್ತದೆ. ಇದು ಕೂಡ ಒಂದು ರೀತಿಯ ಓದು ಬರಹ ಎಂದು ಪುಸ್ತಕ ಪರಿಚಯ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ಸೂಚಿಸಿದವರು ಆರ್. ಪೂರ್ಣಿಮಾ‘ನಾನು ಕೇವಲ ಓದು ಬರಹ ಮಾಡಿ ಕೊಂಡು ಇರುತ್ತೇನೆ’ ಎಂದು ಯಾವ ಲೇಖಕಿಯೂ ಹೇಳ ಲಿಕ್ಕಾಗುವುದಿಲ್ಲ. ಯಾವುದೇ ಪುಸ್ತಕದಲ್ಲಿದ್ದರೂ ಅದು ಹೇಳಬೇಕಾದ ಸಾಮಾಜಿಕ ಸಂದೇಶ ಇರುತ್ತದೆ. ಅದನ್ನು ಗುರುತಿಸಿ, ಚರ್ಚಿಸಬೇಕು. ವಿವಿಧ ಆಯಾಮಗಳನ್ನು ಗಮನಿಸುವಂತಹ ಚರ್ಚಾ ಕಾರ್ಯಕ್ರಮಗಳು ಲೇಖಿಕಾ ಸಾಹಿತ್ಯ ವೇದಿಕೆ ವತಿಯಿಂದ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಕೊನೆಯ ದಿನ ಶೈಲಜಾ ಸುರೇಶ್ ಇಡೀ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ನಾವು ಬೆಳೆಯು ವುದರ ಜೊತೆಗೆ ನಮ್ಮ ಜೊತೆ ಇನ್ನಷ್ಟು ಜನರನ್ನು ಬೆಳೆಸು ವ ಆಸೆಯೇ ಈ ಕಾರ್ಯಕ್ರಮಕ್ಕೆ ಕಾರಣ ಎಂದ ಅವರು,  ಅವಕಾಶಗಳನ್ನು ಯಾರೂ ಬಂಗಾರದ ಹರಿವಾಣದಲ್ಲಿಟ್ಟು ಕೊಡುವುದಿಲ್ಲ. ಮಹಿಳೆಯರಂತೂ ಒಂದೊಂದು ಅವಕಾ ಶವನ್ನು ಪಡೆದುಕೊಳ್ಳಲು ಹೋರಾಟ ಮಾಡಬೇಕು.ಹಾಗೆ ಯೇ ನಮ್ಮ ನಮ್ಮ ಅವಕಾಶಗಳನ್ನು ನಾವೇ ಸೃಷ್ಟಿ ಮಾಡಿ ಕೊಳ್ಳಬೇಕು ಎಂದರು.ಈ ಕಾರ್ಯಕ್ರಮದ ಆಧಾರದ ಮೇಲೆ ಬೆಂಗಳೂರು ಆಕಾಶವಾಣಿ ಸಹ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮವನ್ನು ಪ್ರಸಾರ ಮಾಡಿರುವುದಾಗಿ ಅವರು ಹೇಳಿದರು. ಲೇಖಿಕಾ ವೇದಿಕೆಯ ಪುಸ್ತಕ ಪರಿಚಯ ಕಾರ್ಯಕ್ರಮದ ಜನಪ್ರಿಯತೆಯಿಂದ ಸಾಕಷ್ಟು ಲೇಖಕಿಯರು ಇದರ ಸದಸ್ಯತ್ವ ಪಡೆಯಲು ಬಯಸಿದರೆ. ಈ ವೇದಿಕೆಗೆ ಬರಲು ಸಾಕಷ್ಟು ಪುರುಷರು ಸಹ ಆಸಕ್ತಿ ತೋರಿಸಿದ್ದಾರೆ, ಆದರೆ ಇದು ಮಹಿಳೆಯರಿಗಾಗಿ ಮಾತ್ರ ಎಂಬುದನ್ನು ಶೈಲಜಾ ಅವರು ಸ್ಪಷ್ಟಪಡಿಸಿದ್ದಾರೆ.ಈ ಕಾರ್ಯಕ್ರಮದಲ್ಲಿ ಭಾಗವ ಹಿಸಿದ ಪ್ರತಿಯೊಬ್ಬ ಲೇಖಕಿಗೂ ಚಿಕ್ಕಮಗಳೂರಿನಎಂ.ಜೆ. ನಾಗಲಕ್ಷ್ಮಿ ಅವರು ಪ್ರಶಂಸನಾ ಪತ್ರವನ್ನು ಮಾಡಿ ಕೊಟ್ಟಿ ದ್ದಾರೆ. ಇದರ ವಿಶೇಷ ಎಂದರೆ ಪ್ರತಿಯೊಬ್ಬರ ಹೆಸರಿನ ಒಂದೊಂದು ಅಕ್ಷ ರಗಳಿಗೂ ಒಂದೊಂದು ವಾಕ್ಯದ ಅರ್ಥ ವನ್ನು ಬರೆದಿರುವುದು. ತಿಂಗಳಿಗೊಬ್ಬ ಲೇಖಕಿ ಲೇಖಿಕಾ ಸಾಹಿತ್ಯ ವೇದಿಕೆಯ ಒಂದೊಂದು ತಿಂಗಳು ಒಬ್ಬೊಬ್ಬ ಲೇಖಕಿಯನ್ನು ಪರಿಚ ಯಿಸುವ ನನ್ನ ಮೆಚ್ಚಿನ ಲೇಖಕಿ ಎಂಬ ಮತ್ತೊಂದು ಸರಣಿ ಕಾರ್ಯಕ್ರಮ ಈಗಾಗಲೇ ಶುರುವಾಗಿದ್ದು, ಈ ಮೂಲಕ ಆಗಸ್ಟ್ ತಿಂಗಳಲ್ಲಿ ಅನುಪಮಾ ನಿರಂಜನ,ಸೆಪ್ಟೆಂಬರ್‌ನಲ್ಲಿ ತ್ರಿವೇಣಿ, ಅಕ್ಟೋಬರ್‌ನಲ್ಲಿ ಎಂ.ಕೆ. ಇಂದಿರಾ, ನವೆಂಬರ್‌ ನಲ್ಲಿ ವಾಣಿ… ಹೀಗೆ ತಿಂಗಳಿಗೊಬ್ಬ ಲೇಖಕಿಯ ಬದುಕು- ಬರಹವನ್ನು ವಿವಿಧ ಲೇಖಕಿಯರಿಂದ ಪರಿಚಯಿಸಲಾಗು ವುದು. ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಇದರ ಜೊತೆ ಗೆ ಶೈಲಜಾ ಸುರೇಶ್ ಅವರು  ವಾರಕ್ಕೊಂದು ಕತೆ ಶೈಲಜಾ ಸುರೇಶ್ ಜೊತೆ ಎಂಬ ಮತ್ತೊಂದು ಕಾರ್ಯಕ್ರಮವನ್ನೂ ನಡೆಸುತ್ತಿದ್ದಾರೆ. ಇದರಲ್ಲಿ ಈಗಾಗಲೇ ಸ್ನೇಹಲತಾ ದಿವಾ‌ ಕರ್, ರೂಪಾ ಜೋಷಿ ತಮ್ಮ ಕತೆಗಳನ್ನು ಓದಿದ್ದಾರೆ.ಆಸ ಕ್ತಿ ಇರುವವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಬಹು ದು **********************************************. ಡಿ.ಯಶೋದಾ

ಏಕಾಂತದಿಂದ ಲೋಕಾಂತಕ್ಕೆ Read Post »

You cannot copy content of this page

Scroll to Top