ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ರೊಕ್ಕದಿ ದಕ್ಕದೊಡವೆ ಅವಳು

ನಿನ್ನ ಹೆತ್ತು ಹೊತ್ತವಳು ಹೆಣ್ಣು
ವಾತ್ಸಲ್ಯದಿ ಸಲಹಿದವಳು ಹೆಣ್ಣು
ಅವಳ ಮೇಲೆ ಹಸಿದ ಪಿಶಾಚಿಗಳ ಕಣ್ಣು
ಕಾಮದಬ್ಬರದಿ ಸಿಲುಕಿ ಆದಾಳೋ ಮಣ್ಣು

ಹೆಜ್ಜೆ ಹೆಜ್ಜೆಗೂ ಸಜ್ಜಿಕೆಯನ್ನೇರಿ
ಯಶಸ್ಸಿನ ಮುಕುಟ ಧರಿಸಿದರು
ಕಾಮ ಪಿಪಾಸುಗಳ ಹಸಿವಲಿ
ನಲುಗಿಹಳು ಕಮರಿಹಳು

ಬಡಪಾಯಿ ಹೆಣ್ಣ ತಿನ್ನುವ
ಆಸೆ ಏಕೆ ಪಿಪಾಸುಗಳೇ
ಈ ಘೋರ ತುಂಬಿದ ಕೃತ್ಯಕ್ಕೆ
ಬೀದಿ ನಾಯಿ ಕಣ್ಣೀರಿಡುತ್ತಿದೆ

ಅವಳ‌ ಹರಿದು ಸೊಕ್ಕಲ್ಲಿಮುಕ್ಕವೆಯಾ
ಹೊಕ್ಕಳಿನ ನಂಟಿಟ್ಟು ಮುತ್ತಿಕ್ಕಿದ
ಸಂಕುಲದವಳು, ರಕ್ಕಸನು ಹೊಕ್ಕಿದನೇ
ನಿನ್ನ ರೊಕ್ಕದಿ ದಕ್ಕಿಸಲಾರದ ಒಡವೆಯವಳು

ಅಳಿಸದಿರು ಕಣ್ಣೀರು ತರಿಸದಿರು
ನಿನ್ನಾಸೆಯ ಹಸಿವಲ್ಲಿ ದಹಿಸದಿರು
ಅವಳ ಮನಸು ನೋಯಿಸದಿರು
ಹಸಿವ ಹಿಂಗಿಸಿ ಉಸಿರಾಡಲು ಬಿಡು

****************************************

ಚಂದ್ರು ಪಿ.ಹಾಸನ

About The Author

4 thoughts on “ಕಾವ್ಯಯಾನ”

Leave a Reply

You cannot copy content of this page

Scroll to Top