ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೀಕು ಜೋಕಾಲಿ

ಕೆ.ಸುನಂದಾ

Flat mountain  landscape. Mountains and forest. Tourism and travelling. Vector flat design royalty free illustration

ಸಾಗುತಿರಲೀ ಪಯಣ ನಿಲ್ಲದೇ ಬಾಳಲಿ
ಏಳು ಬೀಳುಗಳೆನಿತು ಬಂದರೂ ಬರಲಿ
ಕಾರ್ಮೋಡ ಕರಗುತ ಸರಿಯಲೇಬೇಕು
ಹಸನಾದ ಹೊಂಬೆಳಕು ಸೂಸಲೇಬೇಕು

ಬದುಕೊಂದು ಆಟ ಸವಿಯ ರಸದೂಟ
ಆಸ್ವಾದಿಸುತ ನಡೆ ಸುಂದರದಾ ನೋಟ
ದೇವನಿತ್ತ ಕಾಣಿಕೆ ಈ ಜಗದ ಚಲನೆಯು
ನಾವೆಲ್ಲರೂ ಅವನಾಟದ ಗೊಂಬೆಯು

ಒಲವಿನ ಹಂದರದಿ ಜೀಕುತ ಜೋಕಾಲಿ
ಏರಿಳಿಯುತ್ತ ಸಾಗು ನೀ ಸಮಭಾವದಲಿ
ಸ್ಥಿರವಲ್ಲವೋ ಬಂಧನಗಳು ಭುವಿಯಲಿ
ಇದ್ದರೂ ಇಲ್ಲದಂತೆ ಇರಬೇಕು ಜಗದಲಿ

ಪ್ರೀತಿ ಪ್ರೇಮದ ಮನಸ್ಸುಗಳೆ ಆಲಯವು
ಅಂತರಾತ್ಮನೇ ಗರ್ಭಗುಡಿಯ ದೇವನು
ವರ್ಣಿಸಲಾಗದ ಪ್ರಕೃತಿಯ ಪೂಜಿಸುತ್ತ
ನಡೆ ನೀ ಉಪಕಾರ ಸ್ಮರಣೆ ನೆನೆಯುತ್ತ

**************************************

About The Author

Leave a Reply

You cannot copy content of this page

Scroll to Top