ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಗುಪ್ತಗಾಮಿನಿ

ಸಂಗಮೇಶ್ವರ ಶಿ.ಕುಲಕರ್ಣಿ

Grunge abstract wall texture and background. Take on 2014-12-7 royalty free stock photos

ನಿನಗೆ ನಾನ್ಯಾರು?
ಕೇಳದಿರು ಹೇಳದಿರು
ಅಲ್ಲಿ ಕಾಡುವ ಒಗಟು
ಎದುರಾಗದಿರಲಿ
ನಿನಗೆ ನನಗೆ ಇಬ್ಬರಿಗೂ….

ನನಗೆ ನೀನ್ಯಾರು?
ಹೇಳುವೆ ಸಾರಿ ಸಾರಿ
ಆತ್ಮದಲಿ ಆರೂಢವಾಗಿರುವ
ಅಗೋಚರ ಆಕೃತಿ!
ಪ್ರತಿಕ್ಷಣದ ಸ್ಮೃತಿ!!

ಅಲ್ಲಿ ನೀನು ಇಲ್ಲಿ ನಾನು
ಅನ್ನುವ ಅಂತರದ ಮಾತೆಲ್ಲಿ
ಆಣೆ ಮಾಡುವೆ ಬೇಕಾದರೆ;
ಅಂತರಂಗ ಆಕ್ರಮಿಸಿದ
ಮೊದಲ ದೊರೆಸಾನಿ ನೀನಿಲ್ಲಿ!

ಉಬ್ಬುತಗ್ಗಿನ ಚರ್ಮದ-
ಹೊದಿಕೆಯ ಮೋಹದಲ್ಲಿ
ಮರೆತುಹೋಗುವ ಪಿಂಡವಲ್ಲ;
ಎಲ್ಲ ದಾಟಿ ಅನಂತ ಹುಡುಕುವ
ಅದಮ್ಯ ಚೇತನ!

ನನಗೊಂದು ನಿನಗೊಂದು
ಬೇರೆಯದೇ ಕೋಳ,
ಕಳಚಿ ಕೈಬಿಡುವ ಕೈಕಟ್ಟು ಅಲ್ಲ ಬಿಡು.
ಇದರ ಮಧ್ಯೆ ನಮ್ಮದು
ಸಾವಿನಾಚೆಗೂ ಸಾಗುವ ಬಂಧ!

ಈ ಜೀವಕ್ಕೆ ಅರ್ಧಜೀವ ನೀನು!

****************************

About The Author

Leave a Reply

You cannot copy content of this page

Scroll to Top