ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬತ್ತಿದೆದೆ

A colorful flower with the emptyness royalty free stock photo

ರೇಷ್ಮಾ ಕಂದಕೂರ

ಬತ್ತಿದೆದೆಯಲಿ ಬಿತ್ತದಿರು ಕನಸು
ಸುತ್ತಲೆಲ್ಲ ಕವಿದ ಕತ್ತಲೆ
ಮುತ್ತಿದೆ ಭರವಸೆಯ ಬೆಳಕನು
ಕುತ್ತಾಗಿದೆ ಕಿತ್ತು ತಿನ್ನುವ ಹುಳುವಿನಂತೆ

ಸತ್ಯದ ಹೊನಲಿಗೂ ಸಂಚಕಾರ
ಮಿತ್ಯದ ಝೇಂಕಾರದ ಸಲಿಗೆ
ಅಪತ್ಯದ ನಡೆ ನುಡಿಯುವವರೆ ಹೆಚ್ಚು
ನಿತ್ಯ ನೇಮವು ದೂರ ತೀರದಲಿ ತೇಲಿ

ಕೋಪ ತಾಪದ ಆರ್ಭಟ
ಕೂಪದಲಿ ಸೇರಿದೆ ಮಾನವೀಯತೆ
ಊಹಾಪೋಹದ ಸುಳಿಗೆ
ವಾಸ್ತವವ ಮರೆ ಮಾಚಿದೆ.

About The Author

Leave a Reply

You cannot copy content of this page

Scroll to Top