ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕರುನಾಡು (ಭೋಗಷಟ್ಪದಿ)

Cherrapunji of South India, Agumbe is More than a Typical Monsoon Getaway  for Romance

ಶುಭಲಕ್ಷ್ಮಿ ಆರ್ ನಾಯಕ

(ಮೂರು ಮಾತ್ರೆಯ ಗಣಗಳು)

ಎನಿತು ಅಂದ ನಮ್ಮ ನಾಡು
ಎನಿತು ಮಧುರ ನಮ್ಮ ನುಡಿಯು
ವೈಭವದ ಇತಿಹಾಸದ ಚೆಲುವ ಕರುನಾಡು
ಕೆಚ್ಚೆದೆಯ ಕಲಿಗಳ ನಾಡು
ಹಚ್ಚ ಹಸಿರ ಸೊಬಗ ಬೀಡು
ವೀರ ಯೋಧರ ತ್ಯಾಗ ಮೆರೆದಿಹ ಕರುನಾಡು//೧//

ಸಾಧು ಸಂತರು ಅವತರಿಸಿ
ಪಾವನಗೊಳಿಸಿದರು ನಾಡ
ಕಟ್ಟಿದರು ಅವರು ಸಮತಾಭಾವದಿ ಬೀಡ
ಪುಣ್ಯನದಿಗಳು ಪ್ರವಹಿಸಿ
ಪಾಪ ತಿಕ್ಕಿ ತೊಳೆದು ಧನ್ಯ
ಮಾಡಿವೆ ನಮ್ಮೆಲ್ಲರ ಕರುನಾಡ ಬೀಡಲಿ//೨//

ಮಣ್ಣ ಕಣಕಣದಲಿ ಒಲವು
ಗೆಲುವ ಗೇಯದಲಿ ಒಲುಮೆಯು
ಕನ್ನಡಿಗರ ಮನದಲಿ ಮಿಡಿದಿಹುದು ನೋಡಿರಿ
ಮಾನ್ಯವಿರಲಿ ನಾಡು ನುಡಿಗೆ
ಬಳಕೆಯಾಗಲಿ ಕನ್ನಡವು
ಆರದೆ ಉರಿಯಲಿ ಕನ್ನಡದನಾಡ ದೀಪವು//೩//

ಹರಿದು ಹೋಗದಿರಲಿ ನಾಡು
ಮುರಿದು ಹೋಗದಿರಲಿ ಭಾಷೆ
ಹರಡಲಿ ಎಲ್ಲೆಲ್ಲೂ ಕನ್ನಡದ ಪರಿಮಳವು
ಕನ್ನಡ ಉಲಿವಾಗ ಬೇಡ
ಕೀಳರಿಮೆಯು ಕನ್ನಡಿಗರೆ
ಮುಡಿಪಿಡೋಣ ನಾಡು ನುಡಿಯ ಸೇವೆಗೆ ಜೀವ//೪//

****************************************

About The Author

3 thoughts on “ಕರುನಾಡು (ಭೋಗಷಟ್ಪದಿ)”

Leave a Reply

You cannot copy content of this page

Scroll to Top