ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಕದಳಿಯ ಅಕ್ಕ

ಜ್ಯೋತಿ ಬಳ್ಳಾರಿ

Akka Mahādevi - Hindupedia, the Hindu Encyclopedia

ಶಿವಮೊಗ್ಗ ಜಿಲ್ಲೆಯ
ಉಡುತಡಿಯಲಿ ಹುಟ್ಟಿತು,
ಒಂದು ಕನ್ನಡದ ಕಂದಮ್ಮ
ಅವಳಿಂದ ಜಗಕ್ಕೆಲ್ಲ
ಆನಂದ ನೋಡಮ್ಮ.

ನಿರ್ಮಲಶೆಟ್ಟಿ ಸುಮತಿ
ದಂಪತಿಗಳ ಅಕ್ಕರೆಯ ಕಂದಮ್ಮ,
ಸುರದೃಪಿ ಗುಣವಂತ
ಹೆಮ್ಮೆಯ ಮಗಳಮ್ಮ.

ಅಂದದ ಮೈಮಾಟಕ್ಕೆ
ಕೌಶಿಕ ಮಹಾರಾಜನ ವಶವಾದಳು ಕೇಳಮ್ಮ,
ಮಾತು ತಪ್ಪಿದ ರಾಜನ ದಿಕ್ಕರಿಸಿ
ಬಿಟ್ಟಳಮ್ಮ.

ಅರಮನೆಯ ಭೋಗವ
ತೊರೆದು ಕೇಶಾಂಬರಿಯಾಗಿ ಹೋರಟು ಬಿಟ್ಟಳಮ್ಮ.
ಭವ ಬಂಧನವ ತೊರೆದು ಮಲ್ಲಿಕಾರ್ಜುನನ್ನು
ಕಾಡು ಮೆಡುಗಳಲ್ಲಿ ಹುಡುಕಿದಳಮ್ಮ.

ಹಾಡುವ ಕೋಗಿಲೆಗೆ
ಹಕ್ಕಿ ಪಕ್ಷಿಗಳಿಗೆ ಕಂಡಿರಾ
ನನ್ನ ಪತಿನೆಂದು ಕೇಳಿದಳಮ್ಮ.

ಕಲ್ಯಾಣದ ಅನುಭವ ಮಂಟಪದಲಿ
ಅಲ್ಲಮಪ್ರಭುವಿನ ಪರೀಕ್ಷೆ ಗೆದ್ದಳಮ್ಮ
ಜ್ಞಾನದ ಗಣಿಯಾಗಿ
ಮಹಾಮನೆಯ ಅಕ್ಕ ಆದಳು ನೋಡಮ್ಮ.

ಬಸವಣ್ಣನವರ ಜೊತೆಗೂಡಿ
ಕಟ್ಟಿದಳು ಸಮಾನತೆಯ ಕಲ್ಯಾಣ ನಾಡಮ್ಮ,
ವಚನ ಚಳುವಳಿಯಲಿ
ಭಾಗಿಯಾದ ಕನ್ನಡಮ್ಮನ
ಸ್ವಾಭಿಮಾನಿ ಮಗಳಮ್ಮ.

ಯೋಗಾಂಗ ತ್ರಿವಿಧಿ ,
ನೂರಾರು ವಚನಗಳನ್ನು
ಚೆನ್ನಮಲ್ಲಿಕಾರ್ಜುನ ಎಂಬ
ಅಂಕಿತನಾಮದಿ ಬರೆದಳಮ್ಮ

ಕನ್ನಡದ ಮೊದಲ ಕವಯತ್ರಿಯಾದಳಮ್ಮ
ಅವಳೆ ಅಕ್ಕಮಹಾದೇವಿಯಮ್ಮ
ಜಗದಲಿ ಹುಟ್ಟಿದ ಬಳಿಕ‌
ಸ್ತುತಿ ನಿಂದನೆ ಬಂದರೆ ಸಮಾಧಾನದಿಂದಿರಬೇಕೆಂದು
ಜಗಕೆ ಹೇಳಿದಳಮ್ಮ

ಶ್ರೀಶೈಲದ ಕದಳಿಯಲಿ,
ನಿಜ ಪತಿ ಮಲ್ಲಿಕಾರ್ಜುನನಲ್ಲಿ
ಕೊನೆಗೆ ಐಕ್ಯಳಾದಳಮ್ಮ
*****************************************

About The Author

1 thought on “ಕದಳಿಯ ಅಕ್ಕ”

Leave a Reply

You cannot copy content of this page

Scroll to Top