ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕವಿತೆ

ಉಳಿದ ಸಾರ್ಥಕತೆ!

ಸುಮನಸ್ವಿನಿ

White Cherry Blossom in Close Up Photography

ನೀ ಅರ್ಧ ನಕ್ಕು ಉಳಿಸಿದ
ಸಣ್ಣನಗು ನಾನು,
ಸ್ವಲ್ಪ ಓದಿ ಕಿವಿ ಮಡಚಿಟ್ಟ
ಹಳೇ ಪುಸ್ತಕ..

ನೀ ಅಷ್ಟುದ್ದ ನಡೆದು ಮಿಗಿಸಿದ
ಕಾಲುಹಾದಿ ನಾನು,
ಚೂರೇ ಅನುಭವಿಸಿ ಎದ್ದುಹೋದ
ಸಂಜೆ ಏಕಾಂತ..

ನೀ ತುಸು ಹೊತ್ತೇ ಕೈಯಲಿಟ್ಟು
ನಲಿದ ಹೂ ನಾನು,
ತೃಪ್ತಿಯಾದಷ್ಟು ಸವಿದು ಇರಿಸಿದ
ದೇವಳದ ಪ್ರಸಾದ.

ನಿನ್ನೇ ಧೇನಿಸುತ್ತೇನೆ ಈ ಕ್ಷಣಕ್ಕೂ
ದಾರಿಬದಿಯ ಮೈಗಲ್ಲಿನಂತೆ
ಮಿಕ್ಕುಳಿದ ಸಾರ್ಥಕತೆಯ
ತುಂಬಿಕೊಳುವ ನಿರೀಕ್ಷೆಯಲಿ!

****************

About The Author

1 thought on “ಉಳಿದ ಸಾರ್ಥಕತೆ!”

Leave a Reply

You cannot copy content of this page

Scroll to Top